ವಿವೇಕ ವಾರ್ತೆ : ನಿನ್ನೆ ಗುರುವಾರ ಮಧ್ಯರಾತ್ರಿ ದುಷ್ಕರ್ಮಿಗಳು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಭಯಾನಕ ಮಾಟಮಂತ್ರ ಮಾಡಿದ್ದಾರೆ.
ಅಮವಾಸ್ಯೆ ಹಿನ್ನೆಲೆಯಲ್ಲಿ ಈ ಭಯಾನಕ ಮಾಟಮಂತ್ರ ನಡೆದಿದ್ದು, ಮನೆಯ ಮುಂದೆ ತಲೆ ಬುರುಡೆ, ನಿಂಬೆ ಹಣ್ಣು ಇಟ್ಟು ಮಾಟಮಂತ್ರ ಮಾಡಲಾಗಿದೆ.
ನಿನ್ನೆ ಗುರುವಾರ (ಸೆಪ್ಟೆಂಬರ್ 15) ಮಧ್ಯರಾತ್ರಿ ದುಷ್ಕರ್ಮಿಗಳು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಭಯಾನಕ ಮಾಟಮಂತ್ರ (Black Magic) ಮಾಡಿದ್ದಾರೆ. ಅಮವಾಸ್ಯೆ (Amavasya) ಹಿನ್ನೆಲೆಯಲ್ಲಿ ಈ ಭಯಾನಕ ಮಾಟಮಂತ್ರ ನಡೆದಿದ್ದು, ಮನೆಯ ಮುಂದೆ ತಲೆ ಬುರುಡೆ, ನಿಂಬೆ ಹಣ್ಣು ಇಟ್ಟು ಮಾಟಮಂತ್ರ ಮಾಡಲಾಗಿದೆ.
ಬಸವ್ವ ಚನ್ನಯ್ಯ ಮಠಪತಿ ಎನ್ನುವರ ಮನೆಯ ಮುಂದೆ ಮಾಟಮಂತ್ರ (Witchcraft) ನಡೆದಿದೆ. ಮನೆಯವರು ಇಂದು ಶುಕ್ರವಾರ ಬೆಳಗ್ಗೆ ಎದ್ದು ನೋಡಿದಾಗ ಮನೆಯ ಮುಂದೆ ತಲೆ ಬುರುಡೆ, ನಿಂಬೆಹಣ್ಣು, ಕುಂಕುಮ ವಸ್ತುಗಳು ಪತ್ತೆಯಾಗಿವೆ. ದುಷ್ಕರ್ಮಿಗಳು ನಿಂಬೆಹಣ್ಣಿನ ಮೇಲೆ ಮನೆಯವರ ಹೆಸರುಗಳನ್ನ ಬರೆದಿದ್ದಾರೆ.
ಮದ್ಯರಾತ್ರಿ ಈ ಮಾಟಮಂತ್ರ ಮಾಡಿರೋ ದುಷ್ಕರ್ಮಿಗಳ ಈ ಕೃತ್ಯದಿಂದ ಸಾವಳಗಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.