spot_img
spot_img
spot_img
spot_img
spot_img
spot_img

ಭಾರತದ ಈ ಪಟ್ಟಣದಲ್ಲಿ ಗೋಬಿಮಂಚೂರಿಯನ್ ನಿಷೇಧ! – ಕಾರಣ ಇಲ್ಲಿದೆ!

Published on

spot_img

ವಿವೇಕವಾರ್ತೆ:- ಹೂಕೋಸು ನಿಂದ ಮಾಡುವ ಈ ಆಹಾರವನ್ನು ಗೋಬಿ ಮಂಚೂರಿಯನ್ ಎಂದು ಕರೆಯಲಾಗುತ್ತದೆ.

ಭಾರತದ ಒಂದು ನಗರದಲ್ಲಿ ಗೋಬಿ ಮಂಚೂರಿ ಮಾರಾಟ ಮಾಡುವಂತೆ ಇಲ್ಲ. ಯಾಕೆ ಎನ್ನುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ…

ಭಾರತದ ಯಾವುದೇ ನಗರ, ಪಟ್ಟಣಕ್ಕೆ ತೆರಳಿದರೂ ಗೋಬಿ ಮಂಚೂರಿಯನ್ ಬಾರಿ ಬೇಡಿಕೆ ಇದೆ. ಆದರೆ ಭಾರತದ ಜನಪ್ರಿಯ ಪ್ರವಾಸಿ ನಗರ ಗೋಬಿ ಮಂಚೂರಿಯನ್ ಮಾರಾಟ ನಿಷೇಧಿಸಿದೆ. ಗೋವಾದ ಮಪುಸಾ ನಗರದಲ್ಲಿ ಯಾರೂ ಗೋಬಿ ಮಂಚೂರಿಯನ್ ಮಾರಾಟ ಮಾಡುವಂತಿಲ್ಲ ಗೋವಾದ ಮಪುಸಾ ಮುನ್ಸಿಪಲ್ ಕಾರ್ಪೋರೇಶನ್ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ.

ಗೋಬಿ ನಿಷೇಧಿಸಲು ಕಾರಣ: ನಗರದ ಆಡಳಿತ ವಿಭಾಗವೇ ಈ ಆದೇಶ ಹೊರಡಿಸಿದೆ. ಗೋವಾದ ಮಪುಸಾ ನಗರ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ನಗರ. ಕಳೆದ ಹಲವು ವರ್ಷಗಳಿಂದ ಮಪುಸಾ ಆಹಾರ ಇಲಾಖೆ ಫಾಸ್ಟ್ ಫುಡ್ ಸೆಂಟರ್, ಸ್ಟಾಲ್‌ಗಳಿಗೆ ನೋಟಿಸ್ ನೀಡುತ್ತಲೇ ಬಂದು, ಇದೀಗ ಗೋಬಿ ಮಂಚೂರಿಯನ್ ನಿಷೇಧಿಸಿದೆ. ಗೋಬಿಗೆ ಬಳಸುತ್ತಿರುವ ರಾಸಾಯನಿಕ, ಬಣ್ಣ ಹಾಗೂ ಶುಚಿತ್ವ, ನೈರ್ಮಲ್ಯದ ಬಗ್ಗೆ ಹಲವು ದೂರುಗಳು ದಾಖಲಾಗಿತ್ತು. ಈ ಕುರಿತು ಆಹಾರ ಇಲಾಖೆ ದಾಳಿಗಳನ್ನು ನಡೆಸಿ ನೋಟಿಸ್ ನೀಡಿತ್ತು. ಮಪುಸಾ ಮುನ್ಸಿಪಲ್ ಕಾರ್ಪೋರೇಶನ್ ಸಭೆ ನಡೆಸಿ ಮಹತ್ವದ ನಿರ್ಣಯ ತೆಗೆದುಕೊಂಡಿದೆ.

ನಿಯಮ ಉಲ್ಲಂಘನೆ ಮಾಡಿದ್ರೆ ಲೈಸನ್ಸ್ ರದ್ದು:ಮಪುಸಾ ಮುನ್ಸಿಪಲ್ ಕಾರ್ಪೋರೇಶನ್ ವ್ಯಾಪ್ತಿಯಲ್ಲಿ ಯಾವುದೇ ಅಂಗಡಿಗಳಲ್ಲಿ ಗೋಬಿ ಮಂಚೂರಿಯನ್ ಮಾರಾಟ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿ ಗೋಬಿ ಮಂಚೂರಿಯನ್ ಮಾರಾಟ ಮಾಡಿದರೆ, ದುಬಾರಿ ದಂಡದ ಜೊತೆಗೆ ವ್ಯಾಪಾರದ ಲೈಸೆನ್ಸ್ ಕೂಡ ರದ್ದಾಗಲಿದೆ.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!