ವಿವೇಕವಾರ್ತೆ: ತಾನು ಓದುತ್ತಿರುವ ಕಾಲೇಜಿನ 3ನೇ ಮಹಡಿಯಿಂದ ಕೆಳಗೆ ಹಾರಿ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ಇಲ್ಲಿನ ಕರ್ನಾಟಕ ಆರೋಗ್ಯಧಾಮದ (ಕೆ.ಎಚ್.ಆಯ್ ಆಸ್ಪತ್ರೆ) ಆವರಣದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಋತುಜಾ ರಮೇಶ ಪಡಲೋಸ್ಕರ್ (21) ಎಂದು ತಿಳಿದು ಬಂದಿದ್ದು ಈ ಯುವತಿ ಮೂಲತಃ ನೆರೆಯ ಗೋವಾ ರಾಜ್ಯದವಳಾಗಿದ್ದು ಇಲ್ಲಿನ ಕರ್ನಾಟಕ ಆರೋಗ್ಯಧಾಮದಲ್ಲಿ ಜಿಎನ್‌ಎಮ್ ನರ್ಸಿಂಗ ಕೋರ್ಸನಲ್ಲಿ 3ನೇ ವರ್ಷದ ವಿದ್ಯಾರ್ಥಿಯಾಗಿ ಅಭ್ಯಾಸ ಮಾಡುತ್ತಿದ್ದು ಸಂಜೆ 9ಗಂಟೆ ಸುಮಾರಿಗೆ ಕಾಲೇಜಿನ ಕೊನೆಯ ಮಹಡಿಗೆ ತೆರಳಿ ಅಲ್ಲಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಕೂಡಲೆ ಅವಳ ಸ್ನೇಹಿತರೆಲ್ಲ ಆಸ್ಪತ್ರೆಗೆ ಸೇರಿಸಿದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಸಾವಿನ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಗೋಕಾಕ ಡಿವೈಎಸ್‌ಪಿ ಡಿ.ಎಚ್.ಮುಲ್ಲಾ, ಘಟಪ್ರಭಾ ಪೊಲೀಸ್ ಠಾಣೆಯ ಪಿಐ ಬಸವರಾಜ ಕಾಮನಬೈಲು ಭೇಟಿ ನೀಡಿ ಪರೀಶಿಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.