ಘಟಪ್ರಭಾ: ಗೋಕಾಕ ತಾಲೂಕಿನ ಘಟಪ್ರಭಾ ಸಮೀಪದ ಧುಪದಾಳ ಜಲಾಶಯದಲ್ಲಿ ಪ್ರವಾಸಕ್ಕೆಂದು ಬಂದಿದ್ದ ಶಿರಸಿ ಸಮೀಪದ ಮುಂಡಗೋಡ ಯುವಕರು ಈಜುತ್ತಿದ್ದಾಗ ಕೆಸರಿನಲ್ಲಿ ಸಿಲುಕಿ ನಾಲ್ವರು ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಶಿರಸಿ ತಾಲೂಕಿನ ಮುಂಡಗೋಡ ಸಮೀಪದ ಹಳ್ಳಿಯಿಂದ ಬಂದಿದ್ದ 7-8 ಜನ ಯುವಕರ ಗುಂಪಿನಲ್ಲಿ ಆರೇಳು ಜನ ಈಜಾಡಲು ಹೋಗಿದ್ದರು. ಈ ವೇಳೆ ಈಜುವಾಗ ಜಲಾಶಯದ ಮಣ್ಣಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಒಬ್ಬನನ್ನು ರಕ್ಷಿಸಲು ಇನ್ನೊಬ್ಬ ಹಿಂಬದಿಯಿಂದ ಹೋಗಿ ನಾಲ್ವರು ಸಾವಿಗೀಡಾಗಿದ್ದಾರೆ. ಓರ್ವ ಯುವಕನ ಸ್ಥಿತಿ ಗಂಭೀರವಾಗಿದೆ.
ಮೃತಪಟ್ಟವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹಿರಿಗೆರೆ ನಿವಾಸಿಗಳು ಎಂದು ಗುರುತಿಸಲಾಗಿದೆ.
ಘಟಪ್ರಭಾ ಕೆಎಚ್ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಮೃತರನ್ನು ಸಂತೋಷ ಬಾಬು ಇಡಗೆ (19), ಅಜಯ ಬಾಬು ಜೋರೆ (19) ಕೃಷ್ಣ ಬಾಬು ಜೋರೆ (19) ಆನಂದ ವಿಷ್ಣು ಕೋಕರೆ (20) ಎಂದು ತಿಳಿದು ಬಂದಿದೆ.
ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಯುವಕ ರಾಮಚಂದ್ರ ವಿಷ್ಣು ಕೋಕರೆ ಮತ್ತು ಪ್ರಾಣಾಪಾಯದಿಂದ ಪಾರಾದ ಯುವಕ ವಿಠಲ ಜಾನು ಕೋಕರೆ.
ಸ್ಥಳಕ್ಕೆ ಘಟಪ್ರಭಾ ಪೊಲೀಸರು ಹಾಗೂ ಗೋಕಾಕ ಡಿಎಸ್ಪಿ ನತ್ತು ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.