ಘಟಪ್ರಭಾ : ಯೋಧನ ಮಗಳು ಈಗ ಡಾಕ್ಟರ್..! ನೀಟ್ ಪರಿಕ್ಷೆಯಲ್ಲಿ ರ್ಯಾಂಕ್ ಬಂದಿರುವ ವಿದ್ಯಾರ್ಥಿನಿಗೆ ಸನ್ಮಾನಿಸಿದ ಕರವೇ ಮುಖಂಡರು..!

WhatsApp Group Join Now
Telegram Group Join Now
Instagram Account Follow Now

ಘಟಪ್ರಭಾ: ದಿನಾಂಕ 5-10-2024 ರಂದು ಘಟಪ್ರಭಾ ನಗರದ ಕನ್ನಡ ರಕ್ಷಣಾ ವೇದಿಕೆ ಸಂಘಟನೆ ರಾಜ್ಯ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮ .ನನ್ನ ಆತ್ಮೀಯ ಗೆಳೆಯನಾದ ಭಾರತೀಯ ಸೇನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಬಂದಿರತಕ್ಕಂತಾ ಶ್ರೀದುಂಡಪ್ಪ ಮಲ್ಲಪ್ಪ ಚೌಗಲಾ ತಾಯಿ ಸುಹಾಸಿನಿ ಇವರ ಸೂಪುತ್ರಿಯಾದ “ವೈಷ್ಣವಿ” ಇವರು ಆಲ್ ಇಂಡಿಯಾ ನೀಟ್ ಪರೀಕ್ಷೆಯಲ್ಲಿ 7200 ನೇ ರಾಂಕ್ ಪಡೆದು .ಎಲ್ಲಟ್ಟಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 96/. ಪರ್ಸೆಂಟೇಜ್ ಮಾಡಿ “ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜ್ ಬೆಂಗಳೂರ “ನಲ್ಲಿ “ಎಂಬಿಬಿಎಸ್ “ಸೀಟನ್ನು ಪಡೆದು ವ್ಯಾಸಂಗಕ್ಕೆ ಹೋಗುತ್ತಿರುವ “ವೈಷ್ಣವಿ” ಅವರಿಗೆ ಕನ್ನಡ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಸನ್ಮಾನಿಸಿ ಸತ್ಕರಿಸಲಾಯಿತು. ನಮ್ಮ ನಗರದಲ್ಲಿ ಹಾಗೂ ತಾಲೂಕ ಮಟ್ಟದಲ್ಲಿ. ಜಿಲ್ಲಾಮಟ್ಟದಲ್ಲಿ. ರಾಜ್ಯಮಟ್ಟದಲ್ಲಿ .ಹಿಂತಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸಿ ಬೆಂಬಲಿಸುವುದೇ ನಮ್ಮ ಸಂಘಟನೆಯ ಧ್ಯೇಯ ಉದ್ದೇಶವಾಗಿದೆ .

ಮತ್ತು ಅವರು ತಂದೆ ತಾಯಿಗಳಿಗೆ ನಗರಕ್ಕೆ ಜಿಲ್ಲೆಗೆ ರಾಜ್ಯಕ್ಕೆ ಕೀರ್ತಿ ತರಲಿ ರಾಜ್ಯದ ಅನೇಕ ಬಡ ಜನತೆಗೆ ಒಂದು ದಾರಿದೀಪವಾಗಿ ಬೆಳೆಯಲಿ ಎಂದು ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ ಮಾತನಾಡಿದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಚೌಕಶಿ, ಗೋಕಾಕ್ ತಾಲೂಕ ಕಾನೂನು ಸಲಹೆಗಾರರಾದ ಎಂ.ಐ ಕೋತ್ವಾಲ್ ವಕೀಲರು. ಗೋಕಾಕ್ ತಾಲೂಕ ಉಪಾಧ್ಯಕ್ಷರಾದ ಬಸವರಾಜ್ ಹುಬ್ಬಳ್ಳಿ .ಗೋಕಾಕ್ ತಾಲೂಕ ಸಂಚಾಲಕರಾದ ಸಿದ್ದಪ್ಪ ತಳಗೇರಿ. ಮೂಡಲಗಿ ತಾಲೂಕ ಅಧ್ಯಕ್ಷರಾದ ಶಿವರಾಜ್ ಚಿಗಡೊಳ್ಳಿ.ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿ ಚೌಕಶಿ ಕಾರ್ಯದರ್ಶಿಯಾದ ಮಂಜು ಪಾಟೀಲ್. ಸಂಘಟನೆಯ ಮುಖಂಡರಾದ ನಾಗರಾಜ್ ಜಂಬ್ರಿ ಯಲ್ಲಪ್ಪ ಅಟ್ಟಿಮಿಟ್ಟಿ .ರಾಯಪ್ಪ ಸಂಗ್ರೂಜಿಕೊಪ್ಪ .ಮಾಂಹಾತೇಶ್ ಮದಿಹಳ್ಳಿ .ಕಲ್ಲೋಳೆಪ್ಪ ಗಾಡಿವಡ್ಡರ್ ಉಪಸ್ಥಿತರಿದ್ದರು..

WhatsApp Group Join Now
Telegram Group Join Now
Instagram Account Follow Now

Vivek Kudarimath, Chief Editor Vivekvarthe, Journalist, Video Editor, Content Writer, CEO Of VPG Digital Private Limited

Leave a Comment