ವಿವೇಕವಾರ್ತೆ – ಘಟಪ್ರಭಾ ನಗರದ ರೇಲ್ವೆ ನಿಲ್ದಾಣದ ಹತ್ತಿರ ಮಲ್ಲಿಕಾರ್ಜುನ ಕುಂಬಾರ ಎಂಬ ವ್ಯಕ್ತಿ ಉಡುಪಿ ಮೂಲದ ಮಹಿಳೆಗೆ ಹಲ್ಲೆ ಮಾಡಿದ್ದು ಗಂಭೀರ ಗಾಯಗಳಾಗಿವೆ, ಈ ಘಟನೆಗೆ ಕಾರಣ ಹಣಕಾಸಿನ ವ್ಯವಹಾರ ಎನ್ನಲಾಗಿದ್ದು ಮಾಹಿತಿ ಇನ್ನಷ್ಟು ಹೊರಬರಬೇಕಿದೆ.
ಹಲ್ಲೆ ಮಾಡಿದ ವ್ಯಕ್ತಿ ತದ ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಇಬ್ಬರನ್ನೂ ಸಹ ಘಟಪ್ರಭಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.