spot_img
spot_img
spot_img
spot_img
spot_img
spot_img

ಒಂದೇ ರಾತ್ರಿಯಲ್ಲಿ ನಿಮ್ಮ ಹಿಮ್ಮಡಿಗಳ ಸೀಳುವಿಕೆಯನ್ನು ಹೋಗಲಾಡಿಸಿ: ಇಲ್ಲಿದೆ ಹಿಮ್ಮಡಿ ಸೀಳಿಗೆ ಒಂದು ಉತ್ತಮ ಪರಿಹಾರ

Published on

spot_img

ವಿವೇಕವಾರ್ತೆ:ಹಿಮ್ಮಡಿ ಸೀಳುವಿಕೆ ಅನೇಕ ಜನರ ಸಾಮಾನ್ಯ ಸಮಸ್ಯೆಯಾಗಿದೆ. ಇಂದಿನ ಲೇಖನದಲ್ಲಿ ಹಿಮ್ಮಡಿ ಸೀಳುವಿಕೆಯನ್ನು ಶೀಘ್ರದಲ್ಲಿ ಕಡಿಮೆ ಮಾಡುವ ಉಪಾಯವೊಂದನ್ನು ನಿಮಗಾಗಿ ತಂದಿದ್ದೇವೆ. ಓದಿ ಹಾಗಾದರೆ. ಹಿಮ್ಮಡಿಗಳು ಸೀಳುವುದು ಬರೀ ನೀರಿನಿಂದ ಅಷ್ಟೇ ಅಲ್ಲ. ಅದಕ್ಕೆ ಬೇರೆಯಾದ ಕಾರಣಗಳು ಸಹ ಇವೆ. ಉದಾಹರಣೆಗೆ ಸರಿಯಾದ ಮಾಪನದ ಶೂಜ್ ಗಳನ್ನು ಉಪಯೋಗಿಸದೆ ಇರುವುದು, ದೇಹದ ತೂಕ ಪ್ರಮಾಣಕ್ಕಿಂತ ಹೆಚ್ಚಿಗೆ ಇರುವದು. ಇವುಗಳಿಂದಲೂ ಹಿಮ್ಮಡಿಗಳು ಸೀಳುತ್ತವೆ.

ಹೆಚ್ಚಿನ ಜನರು ತಮ್ಮ ಮುಖ ಹೇಗೆ ಸುಂದರವಾಗಿ, ಆಕರ್ಷಕವಾಗಿ ಕಾಣಿಸುತ್ತದೆ ಎಂಬುದರ ಬಗ್ಗೆ ಗಮನ ಹರಿಸುತ್ತಾರೆ. ಆದರೆ ತಮ್ಮ ಕಾಲಗಳ ಕಡೆಗೆ ವಿಶೇಷವಾಗಿ ಯಾರೂ ಗಮನ ನೀಡುವುದಿಲ್ಲ. ದೈಹಿಕ ಸೌಂದರ್ಯವು ಮುಖದ ಜೊತೆಗೆ ಕಾಲುಗಳ ಮೇಲೆಯೂ ಅವಲಂಬಿತವಾಗಿದೆ. ಹಿಮ್ಮಡಿಗಳು ಸೀಳುವ ಮತ್ತು ನೋವಾಗುವ ಸಮಸ್ಯೆಗಳು ಹೆಚ್ಚಾಗಿ ಸ್ತ್ರೀಯರಲ್ಲಿ ಕಂಡುಬರುತ್ತವೆ.

ನೀವು ಒಂದು ವೇಳೆ ಇದಕ್ಕೆ ಸಂಬಂಧಿಸಿದಂತೆ ಅನೇಕ ಉಪಾಯಗಳನ್ನು ಮಾಡಿ ಬೇಸತ್ತಿದ್ದರೆ ಈಗಲೂ ಸಮಯ ಮೀರಿಲ್ಲ. ಯಾಕೆಂದರೆ ನಾವು ನಿಮಗಾಗಿ ಒಳ್ಳೆಯ ಉಪಾಯವನ್ನು ಹೇಳಲಿದ್ದೇವೆ. ಇದಕ್ಕಾಗಿ ಮೊದಲು ನಿಮಗೆ ಒಂದರಿಂದ ಒಂದೂವರೆ ಚಮಚ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಆನಂತರ ಅದರಲ್ಲಿ ಅರ್ಧ ಕಟ್ ಮಾಡಿದ ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದು ಎಣ್ಣೆಯಲ್ಲಿ ಮುಳುಗಿಸಿರಿ.

ಆ ನಿಂಬೆಹಣ್ಣನ್ನು ಹಿಮ್ಮಡಿಗಳು ಸೀಳಿದ ಜಾಗದಲ್ಲಿ ಒತ್ತಿ ಒತ್ತಿ ತಿಕ್ಕಬೇಕು. ಈ ರೀತಿ ಮಾಡುವುದರಿಂದ ತ್ವಚೆಯಲ್ಲಿ ಮೂಡಿದ ಡ್ರೈ ನೆಸ್ ದೂರವಾಗಿ ಚರ್ಮ ಮೃದುವಾಗಲು ಸಹಾಯವಾಗುತ್ತದೆ. ಈ ರೀತಿಯಾಗಿ ದೇಹದ ತುಂಬೆಲ್ಲಾ ಮಾಡಿದರೂ ದೇಹದ ಚರ್ಮವು ಮೃದುವಾಗುತ್ತದೆ. ಇಷ್ಟನ್ನು ಮಾಡಿದಮೇಲೆ ವ್ಯಾಸಲಿನ್ ಅಥವಾ ಬೋರೋ ಪ್ಲಸ್ ಕ್ರೀಮ್ ತೆಗೆದುಕೊಳ್ಳಬೇಕು. ಕೊಬ್ಬರಿ ಎಣ್ಣೆ ಮತ್ತು ನಿಂಬೆಯ ಲೇಪನ ಹಚ್ಚಿದ ಜಾಗವನ್ನು ಒಣದಾದ ಬಟ್ಟೆಯಿಂದ ಚೆನ್ನಾಗಿ ಒರೆಸಿಕೊಳ್ಳಬೇಕು.

ಗಮನದಲ್ಲಿ ಇಡುವ ವಿಷಯವೇನೆಂದರೆ, ಅದನ್ನು ತೊಳೆಯಬೇಡಿ. ಬರೀ ಒಣದಾದ ಬಟ್ಟೆಯಿಂದ ಒರೆಸಬೇಕಷ್ಟೇ. ಇದಾದ ನಂತರ ವ್ಯಾಸಲಿನ್ ಅಥವಾ ಬೋರೋ ಪ್ಲಸ್ ಕ್ರೀಂ ಅದರ ಮೇಲೆ ಹಚ್ಚಬೇಕು. ಮಿತ್ರರೇ ನಿಜಕ್ಕೂ ನಿಮಗೆ ಅದ್ಭುತವೆನಿಸದೆ ಇರಲಾರದು. ಕಾರಣ 2 ರಿಂದ 3 ದಿವಸಗಳಲ್ಲಿ ನಿಮ್ಮ ಕಾಲಿನ ಸೀಳುಗಳು ಇಲ್ಲದಂತಾಗುತ್ತವೆ. ಇಲ್ಲಿಯವರೆಗೆ ನೀವು ಅನೇಕ ಉಪಾಯಗಳನ್ನು ಮಾಡಿದ್ದಾದರೆ ಈ ಉಪಾಯವನ್ನು ಮಾಡಿ ನೋಡಿ.

ನಿಶ್ಚಿತವಾಗಿಯೂ 100% ಒಳ್ಳೆಯ ಬದಲಾವಣೆ ಕಂಡುಬರುತ್ತದೆ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!