ವಿವೇಕವಾರ್ತೆ : ಗಣೇಶನ ಮೂರ್ತಿ ಹಾಲು ಕುಡಿಯೋದನ್ನ ಕೇಳಿದ್ದೇನೆ, ನೀರು ಕುಡಿಯೋದನ್ನು ಕೇಳಿದ್ದೇವೆ. ಆದರೆ ಇಲ್ಲೋಬ್ಬ ಗಣೇಶ ತನಗೆ ಇಡಿಸಿದ ಹೂವನ್ನೇ ನುಂಗುತ್ತಿದ್ದಾನೆ.
ಹೌದು, ಇಂಥದೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇನ್ನು ಪೆರಿಯನಾಯಕಿ ಅಂಬಾಳ್ ಉದನೂರೈ ಅರುಲ್ಮಿಕು ಪುರಾಧನಾ ವನೇಶ್ವರರ್ ದೇವಾಲಯವು ತಂಜಾವೂರು ಜಿಲ್ಲೆಯ ಪತ್ತುಕೊಟ್ಟೈ ವೃತ್ತದಲ್ಲಿರುವ ತಿರುಚಿರಾಪಳ್ಳಿಯಲ್ಲಿದೆ. ಈ ಸ್ಥಳದಲ್ಲಿರುವ ಗಣೇಶನ ವಿಗ್ರಹವು ವಿಶಿಷ್ಟವಾಗಿದೆ.
ಮಾಹಿತಿಯಂತೆ ಪೆರಿಯನಾಯಕಿ ಅಮ್ಮನ್ ದೇಗುಲದ ಬಲಭಾಗದಲ್ಲಿ ಸಣ್ಣ ಗಣೇಶನ ಮೂರ್ತಿ ಇದೆ. ಈ ಗಣೇಶನು ತನಗೆ ಏರಿಸಿದ ಹೂವುಗಳನ್ನು ನುಂಗುತ್ತಾನೆ ಎಂದು ಹೇಳಲಾಗಿದೆ. ಹೀಗಾಗಿ ಆತನಿಗೆ ಹೂವು ನುಂಗುವ ಗಣೇಶ ಎಂದು ಕರೆಯುತ್ತಾರೆ.
ಈ ಗಣೇಶನಿಗೆ ಭಕ್ತರು ತಮ್ಮ ಕಾರ್ಯಗಳು ನೆರವೇರುವಂತೆ ಪ್ರಾರ್ಥಿಸಿ ಹೂವು ನುಂಗುವ ಗಣೇಶನ ಕಿವಿಯ ರಂಧ್ರಗಳಿಗೆ ಹೂವುಗಳನ್ನು ಇಡುತ್ತಾರೆ. ಅವರ ಆಸೆ ಈಡೇರುವುದಾದರೆ ಕಿವಿಯ ರಂಧ್ರಗಳಿಗೆ ಇಡಲಾದ ಹೂವುಗಳು ಒಳಗೆ ಹೋಗುತ್ತವೆ. ಒಂದು ವೇಳೆ ಈಡೇರುವುದಿಲ್ಲ ಎಂದರೆ ಕಿವಿಯಲ್ಲಿ ಇಡಲಾದ ಹೂವುಗಳು ಹಾಗೇ ಇರುತ್ತವೆ ಎಂದು ಗಣೇಶನ ಭಕ್ತರ ನಂಬಿಕೆಯಾಗಿದೆ.
ಸದ್ಯ ಗಣೇಶ ಹೂವು ನುಂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದು ಎಷ್ಟು ನಿಜವೋ ಗೊತ್ತಿಲ್ಲ, ಆದರೆ, ವಿಡಿಯೋ ಮಾತ್ರ ಹಲವರನ್ನು ಅಚ್ಚರಿಗೆ ದೂಡಿದೆ. ವಿಡಿಯೋ ನೋಡಿದ ಅನೇಕರು ತಮ್ಮ ತಮ್ಮ ಭಾವಕ್ಕೆ ತಕ್ಕಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇದು ನಿಜಕ್ಕೂ ಪವಾಡ ಎಂದಿದ್ದಾರೆ. (ಎಜೇನ್ಸಿಸ್)
https://twitter.com/anbezhil12/status/1706871535280263251?ref_src=twsrc%5Etfw%7Ctwcamp%5Etweetembed%7Ctwterm%5E1706871535280263251%7Ctwgr%5E1f9576c2d92a0fe1776271b529ff79146ab766c8%7Ctwcon%5Es1_&ref_url=https%3A%2F%2Fjanaspandhan.com%2Fwp-admin%2Fpost-new.php