spot_img
spot_img
spot_img
spot_img
spot_img
spot_img

ಆಶ್ರಯ ಯೋಜನೆ ಅಡಿಯಲ್ಲಿ ಉಚಿತ ಸೈಟ್ ಹಂಚಿಕೆ! ಸ್ವಂತ ಮನೆ ಇಲ್ಲದವರಿಗೆ ಸಿಗುತ್ತೆ ಫ್ರೀ ಸೈಟ್!

Published on

spot_img

Free Site Scheme: ಸ್ವಂತ ಮನೆ ಇಲ್ಲದವರಿಗೆ ಇದೀಗ ಒಂದು ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು ಬೆಂಗಳೂರಿನ ಗ್ರಾಮಾಂತರದ ಜನರಿಗೆ ಆಶ್ರಯ ಯೋಜನೆಯಡಿ ನಿವೇಶನ ಭಾಗ್ಯ ಒದಗಿಸುವ ಒಂದು ಮಹತ್ತರವಾದ ಕಾರ್ಯ ನಡೆಯುತ್ತಿದೆ. ಯಾರಿಗೆಲ್ಲ ಉಳಿದು ಕೊಳ್ಳಲು ಮನೆ ಇಲ್ಲವೋ ಅಥವಾ ನಿವೇಶನಗಳನ್ನು ( Niveshan ) ಹುಡುಕುತ್ತಿದ್ದಾರೋ ಅಂತವರಿಗೆ ಈ ಒಂದು ಯೋಜನೆಯು ತುಂಬಾ ಉಪಯುಕ್ತವಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ ಕೊನೆವರೆಗೂ ಓದಿ.

ಇನ್ನು ಸ್ವಂತ ಊರಿನಲ್ಲಿ ಇರುವವರು ತಮ್ಮ ವ್ಯವಸಾಯ ಭೂಮಿಯಲ್ಲಿ ಅಥವಾ ಜಮೀನುಗಳಲ್ಲಿ ಸ್ವಂತ ಮನೆಗಳನ್ನು ( Own House ) ಕೂಡ ನಿರ್ಮಿಸಿಕೊಳ್ಳುತ್ತಾರೆ. ಆದರೆ ಬಡವರು, ದಲಿತರು, ಹಿಂದುಳಿದ ವರ್ಗದವರು ಸಣ್ಣ ಕೋಣೆಗಳಲ್ಲಿ, ಬಾಡಿಗೆ ಮನೆಗಳಲ್ಲಿವಾಸವಾನ್ನು ಇನ್ನೂ ಮಾಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಇಂತಹವರು ದುಬಾರಿ ನಿವೇಶನಗಳನ್ನು ಖರೀದಿಸಲಾಗದೇ ಸರಕಾರದಿಂದ ಉಚಿತವಾಗಿ ನೀಡುವ ಆಶ್ರಯ ನಿವೇಶನಕ್ಕಾಗಿ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಿ ಎಂದು ನಿವೇಶನಕ್ಕಾಗಿ ಕಾಯುತ್ತಿದ್ದಾರೆ.

 

ಇದೀಗ ಬೆಂಗಳೂರು ನಗರದಲ್ಲಿ ಮನೆ ಹುಡುಕುತ್ತಿರುವವರಿಗೆ ಆಶ್ರಯ ಯೋಜನೆಯಡಿ ನಿವೇಶನರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಒಟ್ಟು 527.30 ಎಕರೆ ಜಮೀನು ಅನ್ನು ಗುರುತಿಸಲಾಗಿದೆ. ಆದಷ್ಟು ಬೇಗ ಅರ್ಜಿ ಸಲ್ಲಿಸದವರಿಗೆ ಮನೆ ಕಟ್ಟಿಕೊಳ್ಳಲು ಜಮೀನು ಗುರುತಿಸಿ ಹಂಚಿಕೆ ಕೂಡ ಮಾಡಲಾಗುತ್ತಿದೆ.

5 ವರ್ಷಗಳ ಹಿಂದೆಯೇ ರಾಜೀವ್ ಗಾಂಧಿ ನಿವೇಶನದ ನಿಗಮದಿಂದ ( Rajiv Gandhi Niveshan Scheme ) ಜಿಲ್ಲೆಯಲ್ಲಿ ಇರುವ ನಿವೇಶನರಹಿತರ ಮತ್ತು ವಸತಿರಹಿತರ ಸರ್ವೆ ಕಾರ್ಯ ಮಾಡಿಡಲಾಗಿತ್ತು.
ಇದೀಗ ನಿವೇಶನ ಬೇಕು ಎಂದು ಅರ್ಜಿ ಸಲ್ಲಿಸಿದವರ ಪೂರ್ವಾಪರ ಮಾಹಿತಿಯನ್ನು ರಾಜೀವ್‌ಗಾಂಧಿ ವಸತಿ ನಿಗಮದವರು ಕೂಡ ಸಂಗ್ರಹಿಸಿದ್ದಾರೆ. ಕಡು ಬಡತನದಲ್ಲಿ ಇರುವವರು, ಮತ್ತು ಉಳಿದುಕೊಳ್ಳಲು ಮನೆ ಬೇಕು ಎಂದು ಅರ್ಜಿಯಲ್ಲಿ ತಿಳಿಸಿದವರ ವಿಳಾಸಕ್ಕೆ ಭೇಟಿ ನೀಡಿ ಅವರು ವಾಸವಾಗಿರುವ ಮನೆಗಳ ಫೋಟೊಸಹಿತ ಮಾಹಿತಿಯನ್ನು ಸಂಗ್ರಹಿಸಿ ಅರ್ಜಿ ಸಲ್ಲಿಸಿದವರ ಫಲಾನುಭವಿಗಳ ಮಾಹಿತಿಯನ್ನು ಗ್ರಾಮ ಪಂಚಾಯಿತಿಗಳಿಗೆ ಕೂಡ ರವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು ಮತ್ತು ದಾಖಲೆಗಳು:

  • ಅರ್ಜಿದಾರರು ಪುರಸಭೆ ಹಾಗೂ ಇತರೇ ಪ್ರದೇಶದಲ್ಲಿ ಕುಟುಂಬದವರ ಬಳಿ ಆಗಲೀ, ಅರ್ಜಿದಾರರ ಹೆಸರಿನಲ್ಲಾಗಲೀ ಯಾವುದೇ ಆಸ್ತಿಯು ಇರುವಂತಿಲ್ಲ.
  • ಇದರ ಬಗ್ಗೆ ಅರ್ಜಿಗೆ ನೋಟರಿ ಅಫಿಡೇವಿಟ್‌ ಅನ್ನು ಲಗತ್ತಿಸಬೇಕು.
  • ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಕೂಡ ಭರ್ತಿ ಮಾಡಿ, ನಿಮ್ಮ ವಿವರಗಳನ್ನು ತುಂಬಿ, ಅರ್ಜಿದಾರರ ಇತ್ತೀಚಿನ ಪಾಸ್ಪೋರ್ಟ್ ಅಳತೆಯ 2 ಭಾವಚಿತ್ರವನ್ನು ನೀಡಬೇಕು ಆಗಿದೆ.
  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ವಿಶೇಷವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.
  • ಕುಟುಂಬದ ಪಡಿತರ ಚೀಟಿ ಹಾಗೂ ಎಲ್ಲಾ ಸದಸ್ಯರ ನಕಲು ಪ್ರತಿ, ಅರ್ಜಿದಾರರ ಅಧಾರ್ ಕಾರ್ಡ್, ಮತದಾರ ಗುರುತಿನ ಚೀಟಿ ಗಳನ್ನೂ ಸೇರಿಸಬೇಕು.
  • ಇದರೊಂದಿಗೆ ವಿಕಲಚೇತನರಾಗಿದ್ದವರು ಜಿಲ್ಲಾ ವೈದ್ಯಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರವನ್ನು ಮತ್ತು ಮಾಜಿ ಸೈನಿಕರು, ಹಿರಿಯ ನಾಗರಿಕರಾಗಿದ್ದಲ್ಲಿ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಇವನ್ನು ಲಗತ್ತಿಸಬೇಕು.
  • ಮಹಿಳೆ, ವಿಧವೆ, ವಿಚ್ಛೇದಿತರಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!