spot_img
spot_img
spot_img
spot_img
spot_img

ಎಚ್.ಡಿ.ಬಿ.ಫೈನಾನ್ಸಿಯಲ್ ಸರ್ವಿಸ್ ಲಿಮಿಟೆಡ್ ವತಿಯಿಂದ ಕಾರುಣ್ಯ ಆಶ್ರಮದಲ್ಲಿ ಅನ್ನ ಸಂತರ್ಪಣೆ

Published on

spot_img

ಎಚ್‍.ಡಿ.ಬಿ.ಫೈನಾನ್ಸಿಯಲ್ ಸರ್ವಿಸ್ ಲಿಮಿಟೆಡ್ ಸಿಂಧನೂರು ವತಿಯಿಂದ ನಗರದ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಅನ್ನ ಸಂತರ್ಪಣೆ ಹಾಗೂ ಅಣ್ಣ ಹಂಪಲುಗಳನ್ನು ವಿತರಿಸಿ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಎಚ್‍.ಡಿ.ಬಿ.ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್ ನ ಸಿಂಧನೂರು ಶಾಖಾ ವ್ಯವಸ್ಥಾಪಕರಾದ ಎಲ್.ಎಸ್.ಬಸವರಾಜ ಬಸವರಾಜ ಅವರನ್ನು ಸನ್ಮಾನಿಸಿ ಒಳಬಳ್ಳಾರಿ ಚನ್ನಬಸವ ಮಹಾಶಿವಯೋಗಿಗಳ ಭಾವಚಿತ್ರವನ್ನು ವಿತರಿಸಲಾಯಿತು.ಈ ಸಮಯದಲ್ಲಿ ಸಿಂಧನೂರು ಶಾಖೆಯ ವ್ಯವಸ್ಥಾಪಕರಾದ ಎಲ್. ಎಸ್.ಬಸವರಾಜ ಮಾತನಾಡಿ ಮಾನವೀಯತೆಯ ಮಂದಿರವಾಗಿ ನೆಲೆ ಇಲ್ಲದ ಜೀವಿಗಳಿಗೆ ನೊಂದ ಜೀವಿಗಳಿಗೆ ಭಿಕ್ಷುಕದ ನಿರಂತರ ಕಾಯಕದ ಮೂಲಕ ಇಂತಹ ಜೀವಿಗಳನ್ನು ರಕ್ಷಿಸಿ ಲಾಲನೆ ಪೋಷಣೆ ಮಾಡುವುದು ದೇವರ ಪೂಜೆ ಗಿಂತ ಮಿಗಿಲಾದ ಕಾರ್ಯ. ಇಂತಹ ಕಾರ್ಯ ಮಾಡುತ್ತಿರುವ ಕುಗ್ರಾಮವಾದ ಹರೇಟನೂರಿನ ಜಂಗಮ ಕುಟುಂಬ ನಮ್ಮ ಕಲ್ಯಾಣ ಕರ್ನಾಟಕಕ್ಕೆ ದೇವರು ಕೊಟ್ಟ ಕೊಡುಗೆ.

ಸ್ವಾರ್ಥತೆಯ ಈ ಜಗತ್ತಲ್ಲಿ ನಿಸ್ವಾರ್ಥತೆಯ ಪಾಠವನ್ನು ಕಲಿಸುವುದರ ಮೂಲಕ ಹಿರಿಯ ನಾಗರಿಕ ಸೇವಾ ಕ್ಷೇತ್ರದಲ್ಲಿ ಅತಿ ಹೆಚ್ಚು ಕಾಳಜಿ ವಹಿಸಿ ಸುಮಾರು ವರ್ಷಗಳಿಂದ ಹಿರಿಯ ನಾಗರಿಕರನ್ನು ರಕ್ಷಣೆ ಮಾಡುತ್ತಿರುವ ಈ ಕಾರುಣ್ಯ ಆಶ್ರಮ ನಮ್ಮ ಸಿಂಧನೂರಿನ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಪ್ರೀತಿಗೆ ಪಾತ್ರವಾಗಿದೆ. ನಮ್ಮ ಕಂಪನಿಯ ಎಲ್ಲಾ ಸಿಬ್ಬಂದಿಗಳು ಯಾವಾಗಲೂ ಕೂಡ ಕಾರುಣ್ಯ ಆಶ್ರಮಕ್ಕೆ ಸಹಾಯ ಸಹಕಾರ ನೀಡುತ್ತೇವೆ.

ಹರೇಟನೂರು ಗ್ರಾಮದ ಗ್ರಾಮದೇವತೆ ಶ್ರೀ ಆದಿಶಕ್ತಿ ದ್ಯಾವಮ್ಮ ದೇವಿಯ ಮಂಗಳಾರತಿ ತಟ್ಟೆ ಮತ್ತು ದೇವಸ್ಥಾನಕ್ಕೆ ಬರುವ ಆಹಾರ ಸಾಮಗ್ರಿಗಳು ಇಂತಹ ಅನಾಥ ಜೀವಿಗಳಿಗೆ ಉಪಯೋಗವಾಗುತ್ತಿರುವುದು ಇತಿಹಾಸದಲ್ಲಿ ಪ್ರಥಮ ಸಂದೇಶವಾಗಿದೆ. ಈ ಸಂಸ್ಥೆಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿದರೆ ಇನ್ನೂ ಹೆಚ್ಚಿನ ಸೇವೆ ಸಮಾಜಕ್ಕೆ ದೊರೆಯುತ್ತದೆ ಎಂದು ಭಾವನಾತ್ಮಕವಾಗಿ ಮಾತನಾಡಿದರು. ನಂತರ ಆಶ್ರಮದ ಖಜಾಂಚಿಗಳು ಗೌರವ ಸಲಹೆಗಾರರಾದ ಲಿಂಗಸಗೂರಿನ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ ನಾವು ಬರೀ ಹಿರಿಯ ನಾಗರೀಕರ ಕ್ಷೇತ್ರವಲ್ಲದೆ ಅಂಗವಿಕಲರ ವಿಕಲಚೇತನರ ಬೆಳವಣಿಗೆಯಲ್ಲಿಯೂ ಕೂಡ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಹುಟ್ಟು ಸಾವಿನ ಮದ್ಯೆ ಬರುವ ಜೀವನ ಯಾವ ರೀತಿ ಇರುತ್ತದೆ ಎಂದು ಯಾರಿಗೂ ಗೊತ್ತಿರುವುದಿಲ್ಲ.

ಇಂತಹ ಕುಟುಂಬವಿಲ್ಲದ ಜೀವಿಗಳಿಗೆ ಕುಟುಂಬ ನಿರ್ಮಿಸಿ ಅವರಿಗೆ ಸಹೋದರ ಸಹೋದರಿ ತಂದೆ ತಾಯಿ ಬಂಧು-ಬಳಗದ ಜೀವನ ಕಲ್ಪಿಸಿ ಕೊಡುವುದೇ ನಮ್ಮ ಮೂಲ ಉದ್ದೇಶ. ಈ ಎಲ್ಲಾ ಕಾರ್ಯಗಳು ಕಾರುಣ್ಯ ಆಶ್ರಮಕ್ಕೆ ಸಹಾಯ ಸಹಕಾರ ಮಾಡುವ ದಾನಿಗಳಿಗೆ ಅರ್ಪಣೆಯಾಗುತ್ತವೆ. ಈ ಕಾರ್ಯದ ಪುಣ್ಯ ದಾನಿಗಳಿಗೆ ಸಲ್ಲಲಿ ಎನ್ನುವುದು ನಮ್ಮೆಲ್ಲರ ಅಭಿಪ್ರಾಯವಾಗಿದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಎಚ್. ಡಿ.ಬಿ.ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್ ಸಿಬ್ಬಂದಿಗಳಾದ ಸಿದ್ದಪ್ಪ. ಸುಹೈಲ್ ಅಂಬರ್ ಖಾನ್. ಮೃತ್ಯುಂಜಯ ಸ್ವಾಮಿ. ಇಸಾಕ್. ಇಸ್ತಿಯಾಕ್. ಸುನಿಲ್ ರೋಮಾರ್. ಹಾಗೂ ಆಶ್ರಮದ ಸಿಬ್ಬಂದಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ. ಸುಜಾತ ಹಿರೇಮಠ ಗೀತಾ ಕುಲಕರ್ಣಿ ಮರಿಯಪ್ಪ ಅಮರೇಶ ಆನಂದ ಸಿದ್ದಯ್ಯ ಸ್ವಾಮಿ ಶರಣಮ್ಮ ಹರ್ಷವರ್ಧನ ಅನೇಕರು ಉಪಸಿತರಿದ್ದರು.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಅಪ್ಪಿಕೊಳ್ಳೋದ್ರಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಬೆನಿಫಿಟ್ – ಇಲ್ಲಿದೆ ಮಾಹಿತಿ!

ಪ್ರೀತಿ, ಸ್ನೇಹ, ಭರವಸೆ ಮತ್ತು ಬೆಂಬಲವನ್ನು ವ್ಯಕ್ತಪಡಿಸುವ ದೇಹ ಭಾಷೆಯೇ ಅಪ್ಪುಗೆ. ಬನ್ನಿ ಇಂದು ಅಪ್ಪುಗೆಯ ಆರೋಗ್ಯ ಪ್ರಯೋಜನಗಳೇನು ಎಂದು...

ಬೆಡ್ ರೂಂನಲ್ಲಿ ಅತ್ತಿಗೆಯ ಪ್ರಿಯಕರನನ್ನ ಹೊಡೆದು ಕೊಂದ ಮೈದುನ!

ವಿವೇಕವಾರ್ತೆ: ಪ್ರಿಯತಮೆಯ ಭೇಟಿ ಮಾಡಲು ಮನೆಗೆ ನುಗ್ಗಿದ ಪ್ರಿಯಕರನನ್ನು ಆಕೆಯ ಮೈದುನ ರಾಡ್ ನಿಂದ ಹೊಡೆದು ಬರ್ಬರವಾಗಿ ಕೊಲೆ...

ಮದ್ವೆಯಾದ 2 ವರ್ಷದಿಂದ ಸರಸಕ್ಕೆ ಒಪ್ಪದ ಗಂಡ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಪತ್ನಿ

ವಿವೇಕವಾರ್ತೆ : ದೈಹಿಕ ಸಂಬಂಧಕ್ಕೆ ಒಪ್ಪದ ಗಂಡನ ವಿರುದ್ಧ ಆಕ್ರೋಶಗೊಂಡಿರುವ ಮಹಿಳೆಯೊಬ್ಬಳು ಠಾಣೆಯ ಮೆಟ್ಟಿಲೇರಿ ಎಫ್​ಐಆರ್​ ದಾಖಲಿಸಿರುವ ವಿಚಿತ್ರ...

ಹೈಕೋರ್ಟ್​ನಿಂದ ಎಸಿಬಿ ರದ್ದು: ಎಸಿಬಿಯಲ್ಲಿದ್ದ ಹುದ್ದೆ ಲೋಕಾಯುಕ್ತ & ಪೊಲೀಸ್ ಇಲಾಖೆಗಳಿಗೆ ವರ್ಗಾವಣೆ!

ಬೆಂಗಳೂರು: ಹೈಕೋರ್ಟ್​ನಿಂದ   ಎಸಿಬಿ ರದ್ದು ಹಿನ್ನೆಲೆಯಲ್ಲಿ ಎಸಿಬಿಯಲ್ಲಿದ್ದ ಹುದ್ದೆಗಳನ್ನ ಲೋಕಾಯುಕ್ತ ಸಂಸ್ಥೆ ಮತ್ತು ಪೊಲೀಸ್ ಇಲಾಖೆಗಳಿಗೆ ಸರ್ಕಾರ ವರ್ಗಾವಣೆ ಮಾಡಿದೆ. ಎಸಿಬಿಯಲ್ಲಿದ್ದ ಒಟ್ಟು...
error: Content is protected !!