ವಿವೇಕವಾರ್ತೆ : ಆನ್ಲೈನ್ ಶಾಪಿಂಗ್ ದೈತ್ಯ ಫ್ಲಿಪ್ಕಾರ್ಟ್ ವಾಹನದಿಂದ ಶನಿವಾರ ಅಚ್ಚರಿಯ ಘಟನೆಯೊಂದು ದೇಶದ ವಾಣಿಜ್ಯ ನಗರಿ ಮುಂಬೈನ ಗೇಟ್ವೇ ಸೇರಿದಂತೆ ನಗರದ ಹಲವು ಭಾಗಗಳು ಘಟಿಸಿದೆ.
ಶನಿವಾರ ಆನ್ಲೈನ್ ಶಾಪಿಂಗ್ ದೈತ್ಯ ಫ್ಲಿಪ್ಕಾರ್ಟ್ಗೆ ಸೇರಿದ ವಾಹನವೊಂದು ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಗಾಳಿಯಲ್ಲಿ ಮಳೆ ಸುರಿಸಿದಂತೆ ಸುರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿನೆಮಾ ದೃಶ್ಯಗಳಲ್ಲಿ ಕಾಣುವಂತೆ ಎರಡು ಸಾವಿರ ಮುಖಬೆಲೆಯ ನೋಟುಗಳು ಫ್ಲಿಪ್ಕಾರ್ಟ್ಗೆ ಸೇರಿದ ವಾಹನದ ಹಿಂಭಾಗದ ಬಾಗಲಿನಿಂದ ಗಾಳಿಯಲ್ಲಿ ತೇಲಿಬರುತ್ತಿದ್ದರೆ, ಇತ್ತ ಸಾಮಾನ್ಯ ಜನರು ಕುತೂಹಲಭರಿತರಾಗಿ ನೋಡುತ್ತಿರುವುದು ಕಂಡು ಬರುತ್ತದೆ.
What just happed??? @Flipkart #PaisoKiBaarish pic.twitter.com/1hzRDDTqib
— Salman (Mohd Ali Shaikh) (@salman3126) October 6, 2023
ಅಂದಹಾಗೆ ಫ್ಲಿಪ್ ಕಾರ್ಟ್ ಬಿಗ್ ಬಿಲಿಯಾನ್ ಡೇಸ್ ಸೇಲ್ ಅಭಿಯಾನ ಇಂದಿನಿಂದ (ದಿ. 8) 15ರವರೆಗೆ ನಡೆಯಲಿದ್ದು, ಅದರ ಪ್ರಚಾರಕ್ಕಾಗಿ ಈ ರೀತಿ ಮಾಡಿತೇ ಅಂತ ಹಲವರು ಪ್ರಶ್ನಿಸಿದ್ದಾರೆ.
ಫ್ಲಿಪ್ಕಾರ್ಟ್ಗೆ ಸೇರಿದ ವಾಹನದಿಂದ ವಾಣಿಜ್ಯ ನಗರಿ ಮುಂಬೈನ ಪ್ರಮುಖ ಬೀದಿಗಳಲ್ಲಿ ಎರಡು ಸಾವಿರು ಮುಖಬೆಲೆಯ ನೋಟುಗಳನ್ನು ಗಾಳಿಯಲ್ಲಿ ತೂರುತ್ತಾ ಹೋಗುತ್ತಿದ್ದರೆ, ರಸ್ತೆ ಬದಿಗಳಲ್ಲಿ ಈ ದೃಶ್ಯವನ್ನು ನೋಡುತ್ತಾ ಜನರು ಸುಮ್ಮನೆ ನಿಂತಿರುವುದು ಕಂಡು ಬರುತ್ತದೆ.
ವೈರಲ್ ಆಗಿರೋ ದೃಶ್ಯವನ್ನು ನೋಡಿದರೆ ಇದು ಆಕಸ್ಮಿವಾಗಿ ಆಯಿತೇ ಅಥವಾ ಪ್ರಚಾರಕ್ಕಾಗಿ ಕಂಪನಿ ಈ ರೀತಿ ಮಾಡಿತೇ ಎಂದು ಹಲವರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಫ್ಲಿಪ್ ಕಾರ್ಟ್, ಸದ್ಯದಲ್ಲೇ ಸ್ಪಷ್ಟನೆ ನೀಡಲಿದ್ದೇವೆ ಎಂದು ತಿಳಿಸಿದೆ.
https://twitter.com/Flipkart/status/1710514479841280404?ref_src=twsrc%5Etfw%7Ctwcamp%5Etweetembed%7Ctwterm%5E1710514479841280404%7Ctwgr%5E%7Ctwcon%5Es1_c10&ref_url=https%3A%2F%2Fapi-news.dailyhunt.in%2F