ಈ 5 ಟೀಮ್​ಗೆ ನಾಯಕರದ್ದೇ ಸಮಸ್ಯೆ.. KL ರಾಹುಲ್, ಕೊಹ್ಲಿ, ಪಂತ್, ಅಯ್ಯರ್ ಕ್ಯಾಪ್ಟನ್ ಆಗ್ತಾರಾ?

WhatsApp Group Join Now
Telegram Group Join Now
Instagram Account Follow Now

ಮೆಗಾ ಹರಾಜು ಮುಗಿದಿದ್ದು ಆಯಿತು. ಹರಾಜಿನಲ್ಲಿ ಫ್ರಾಂಚೈಸಿಗಳು ಬಲಿಷ್ಠ ಟೀಮ್ಗಳನ್ನು ಕಟ್ಟಿದ್ದಾಗಿದೆ. ಆದ್ರೆ, ಸ್ಟ್ರಾಂಗ್ ಟೀಮ್ ಕಟ್ಟಿರುವ ಐಪಿಎಲ್​​ ಫ್ರಾಂಚೈಸಿಗಳಲ್ಲೇ ಈಗ ಗೊಂದಲ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಏನು..?

ಕೋಟಿ ಕೋಟಿ ಹಣದ ಹೊಳೆ ಹರಿಸಿರುವ ಫ್ರಾಂಚೈಸಿಗಳು, ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡಗಳನ್ನೇ ಕಟ್ಟಿವೆ. ಸ್ಟಾರ್ ಆಟಗಾರರ ಎಂಟ್ರಿಯಿಂದ ಸೀಸನ್​-18ರಲ್ಲಿ ಕಪ್​ ಗೆಲ್ಲೋ ಹಾಟ್​ ಫೇವರಿಟ್ಸ್​ ಆಗಿಯೇ ಕರೆಸಿಕೊಳ್ಳುತ್ತಿವೆ. ಆದ್ರೆ, ಸ್ಟಾರ್​ ಆಟಗಾರರು ತಂಡಕ್ಕೆ ಬಂದ್ರೂ, ಕೆಲ ಫ್ರಾಂಚೈಸಿಗಳಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಇದಕ್ಕೆ ಕಾರಣ ಕ್ಯಾಪ್ಟನ್ಸಿ.

ಇದನ್ನೂ ಓದಿ: ಈ ತಳಿ ಹಸು ಸಾಕಿದರೆ ದಿನಕ್ಕೆ 10 ಲೀಟರ್ ಹಾಲು ಪಕ್ಕಾ, ನಿಮ್ಮ ಆದಾಯ ಡಬಲ್ ಆಗುವುದು ಗ್ಯಾರಂಟಿ.!

ಐಪಿಎಲ್​ನ 10 ತಂಡಗಳ ಪೈಕಿ 5 ತಂಡಗಳಿಗೆ ನಾಯಕರುಗಳೇ ಇಲ್ಲ. ಹರಾಜಿನಲ್ಲಿ ಸ್ಟಾರ್​ಗಳನ್ನ ಖರೀದಿಸಿದ್ದಾರೆ. ಆದರೆ ಇದರಲ್ಲಿ ನಾಯತಕತ್ವದ ಪಟ್ಟ ಯಾರಿಗೆ ಕಟ್ಟಬೇಕೆಂಬ ಗೊಂದಲ ಯಕ್ಷ ಪ್ರಶ್ನೆಯಾಗಿಯೇ ಕಾಡುತ್ತಿದೆ.

ಲಕ್ನೋ ನಾಯಕತ್ವಕ್ಕೆ ಪಂತ್, ಪೂರನ್ ಫೈಟ್.!

ನಾಯಕನ ಹುಡುಕಾಟದಲ್ಲಿದ್ದ ಪಂಜಾಬ್ ಕಿಂಗ್ಸ್​, ಹರಾಜಿನ ಕಣದಲ್ಲಿ ಶ್ರೇಯಸ್​ಗೆ ದಾಖಲೆಯ 26.75 ಕೋಟಿ ನೀಡಿ ಖರೀದಿಸಿದೆ. ಹಾಲಿ ಚಾಂಪಿಯನ್ ಕ್ಯಾಪ್ಟನ್​​ಗೆ ನಾಯಕತ್ವದ ಪಟ್ಟ ಕಟ್ಟುವುದು ಕನ್ಫರ್ಮ್. ಆದ್ರೆ, 27 ಕೋಟಿಗೆ ಲಕ್ನೋ ಪಾಲಾಗಿರುವ ರಿಷಬ್ ಪಂತ್​ಗೆ ಪಟ್ಟ ಸಿಗುತ್ತಾ ಅನ್ನೋ ಡೌಟ್ ಶುರುವಾಗಿದೆ. ಇದಕ್ಕೆ ಕಾರಣ ನಿಕೋಲಸ್ ಪೂರನ್​.

27 ಕೋಟಿಗೆ ಲಕ್ನೋ ರಿಷಬ್ ಪಂತ್​ರನ್ನ ಖರೀದಿಸಿದೆ. ಆದ್ರೆ, ನಿಕೋಲಸ್ ಪೂರನ್​ನ ಕ್ಯಾಪ್ಟನ್ಸಿ ನೀಡುವ ವಿಚಾರವಾಗಿಯೇ ಮೊದಲ ರಿಟೈನ್ ಮಾಡಿಕೊಂಡಿರುವ ಫ್ರಾಂಚೈಸಿಗೆ ಈಗ ರಿಷಬ್​ ಪಂತ್​ ಆಗಮನ ಇಕ್ಕಟ್ಟಿಗೆ ಸಿಲುಕಿಸಿದೆ. ಈ ಇಬ್ಬರಲ್ಲಿ ಯಾರಿಗೆ ಪಟ್ಟ ಕಟ್ಟಬೇಕೆಂಬ ಹೊಸ ಪ್ರಶ್ನೆ ಹುಟ್ಟು ಹಾಕಿದೆ.

ಇದನ್ನೂ ಓದಿ: ದಿನ ಭವಿಷ್ಯ: ಅನಿರೀಕ್ಷಿತವಾಗಿ ಬರುವ ಹಣ ನಿಮ್ಮ ಕಷ್ಟಗಳನ್ನು ಕಡಿಮೆ ಮಾಡುತ್ತೆ, ವಿವಾದಗಳು ಇತ್ಯರ್ಥವಾಗುತ್ತವೆ

ಡೆಲ್ಲಿ ಗದ್ದುಗೆಗೆ ರಾಹುಲ್- ಅಕ್ಷರ್ ಪೈಪೋಟಿ!

ಲಕ್ನೋ ತಂಡದ್ದೆ ಅಲ್ಲ. ಡೆಲ್ಲಿ ಕ್ಯಾಪಿಟಲ್ಸ್​ನ ಕ್ಯಾಪ್ಟನ್ಸಿ ಪಟ್ಟ ಯಾರಿಗೆ ಎಂಬ ಪ್ರಶ್ನೆ ಇದೆ. ಕೆ.ಎಲ್​.ರಾಹುಲ್ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದ್ದರೂ, ಕಳೆದ ಸೀಸನ್​ನಲ್ಲಿ ವೈಸ್ ಕ್ಯಾಪ್ಟನ್ ಆಗಿದ್ದ ಅಕ್ಷರ್ ಪಟೇಲ್​​​ ಬಗ್ಗೆ ಮಾಲೀಕರ ಒಲವು ಇದೆ. ಆದ್ರೆ, ನಾಯಕತ್ವದಲ್ಲಿ ಅನುಭವ ಹೊಂದಿರುವ ಕೆ.ಎಲ್.ರಾಹುಲ್ ಬೆಸ್ಟ್​ ಚಾಯ್ಸ್​. ಹೀಗಾಗಿ ಇವರಿಬ್ಬರಲ್ಲಿ ಯಾರಿಗೆ ಮಣೆ ಹಾಕ್ತಾರೆ ಅನ್ನೋದು ಭಾರೀ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಹೃದಯಾಘಾತದ ಮುನ್ಸೂಚನೆ ಇದು, ಈ ಲಕ್ಷಣಗಳು ಕಂಡರೆ ನಿರ್ಲಕ್ಷಿಸಲೇಬೇಡಿ.!

ರಹಾನೆ, ವೆಂಕಟೇಶ್​​.. ಯಾರ್ ಆಗ್ತಾರೆ ಕ್ಯಾಪ್ಟನ್..?

ಹಾಲಿ ಚಾಂಪಿಯನ್ಸ್ ಕೊಲ್ಕತ್ತಾ ನೈಟ್​ ರೈಡರ್ಸ್​ ಕೂಡ ನಾಯಕನ ಹುಡುಕಾಟದಲ್ಲಿದೆ. ಸದ್ಯ ನಾಯಕತ್ವದ ರೇಸ್​ನಲ್ಲಿ ಅಜಿಂಕ್ಯಾ ರಹಾನೆ, ವೆಂಕಟೇಶ್ ಅಯ್ಯರ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಅದ್ಭುತ ನಾಯಕತ್ವದ ಗುಣ ಹೊಂದಿರುವ ರಹಾನೆ, ಆನ್​​ಫೀಲ್ಡ್‌ನಲ್ಲಿ ಸ್ಟ್ರಾಟರ್ಜಿ ಆ್ಯಂಡ್ ಗೇಮ್ ಪ್ಲಾನ್ ರೂಪಿಸುವಲ್ಲಿ ನಿಸ್ಸೀಮ. ಯುವ ಆಟಗಾರರ ಬೆನ್ನಿಗೆ ನಿಲ್ಲುವ ರಹಾನೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಬಲ್ಲರು. ಹೀಗಾಗಿ ರಹಾನೆ ಹೆಸರು ಮುಂಚೂಣಿಯಲ್ಲಿದೆ. ಆದ್ರೆ, ವೆಂಕಟೇಶ್ ಅಯ್ಯರ್​​ಗಾಗಿ 23 ಕೋಟಿ ಸುರಿಸಿರುವ ಕೊಲ್ಕತ್ತಾ, ಯುವ ನಾಯಕನಿಗೆ ಪಟ್ಟ ಕಟ್ಟಿದರೂ ಅಚ್ಚರಿ ಇಲ್ಲ.

ಆರ್​ಸಿಬಿಗೆ ವಿರಾಟ್​ ಕೊಹ್ಲಿಯೇ ನಾಯಕರಾಗ್ತಾರಾ..?

ಇದನ್ನೂ ಓದಿ: ಲಿವ್ ಇನ್ ಗೆಳತಿಯ ಮೇಲೆ ರೇಪ್; 40-50 ತುಂಡುಗಳಾಗಿ ಕತ್ತರಿಸಿ ಬಿಸಾಡಿದ ಕಿರಾತಕ

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ವಿರಾಟ್​ ಕೊಹ್ಲಿ ಕ್ಯಾಪ್ಟನ್ ಆಗೋದು ಕನ್ಫರ್ಮ್. ಆದ್ರೆ, ಆರ್​ಸಿಬಿ ಡೈರೆಕ್ಟರ್ ಮೊ ಬೊಬಾಟ್, ಈ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ. ಇದು ಮತ್ಯಾರು ನಾಯಕರಾಗ್ತಾರೆ ಎಂಬ ಪ್ರಶ್ನೆಗೆ ನಾಂದಿ ಆಡಿದೆ. ಆದ್ರೆ, ಸದ್ಯ ತಂಡದಲ್ಲಿ ಕೊಹ್ಲಿ ಹಾಗೂ ರಜತ್ ಪಾಟಿದಾರ್ ಬಳಿಕ ಸೂಕ್ತ ಅಭ್ಯರ್ಥಿ ಕಾಣಿಸ್ತಿಲ್ಲ. ಭುವನೇಶ್ವರ್, ಕೃನಾಲ್ ಪಾಂಡ್ಯ ದೇಶಿ ಕ್ರಿಕೆಟ್​ನಲ್ಲಿ ನಾಯಕರಾಗಿದ್ದರು. ಸಕ್ಸಸ್ ಕಂಡಿಲ್ಲ. ಹೀಗಾಗಿ ವಿರಾಟ್​ಗೆ ನಾಯಕತ್ವ ಫಿಕ್ಸ್.

ನಾಯಕರಿಲ್ಲದ 5 ತಂಡಗಳನ್ನು ಯಾರು ಮುನ್ನಡೆಸ್ತಾರೆ ಅನ್ನೋ ಕ್ಯೂರಿಯಾಸಿಟಿ ದಿನೇ ದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಶ್ರೀಘ್ರವೇ ಫ್ರಾಂಚೈಸಿಗಳು ಯಾವ ಉತ್ತರ ನೀಡ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

WhatsApp Group Join Now
Telegram Group Join Now
Instagram Account Follow Now

Vivek Kudarimath, Journalist With a Work Experience of 8 years in media Field, Working with vivekvarthe since 15-08-2015

Leave a Comment