Fetal Killing: ಭ್ರೂಣ ಹತ್ಯೆ ಮಹಾಪಾಪ ! ಆ ಕಂದಮ್ಮ ತೋಡಿಕೊಂಡ ಅಳಲೇನು ಗೊತ್ತಾ? ಪೋಷಕರು ಓದಲೇಬೇಕಾದ ಸ್ಟೋರಿ

ಕೆಲಮನೆಯಲ್ಲಿ ಹೆಣ್ಣುಮಕ್ಕಳು ಅಂದ್ರೆ ಆಜನ್ಮ ಶತ್ರು ಅನ್ನುವ ಹಾಗೇ ನೋಡ್ತಿದ್ರು ಅಲ್ದೇ ಒಂದು ಹೆಣ್ಣು ಗರ್ಭಿಣಿಯಾದ್ರೆ ಆ ಗರ್ಭದಲ್ಲಿರುವ ಮಗು ಗಂಡು ಭ್ರೂಣವೋ ಅಥವಾ ಹೆಣ್ಣು ಭ್ರೂಣವೋ ಎಂದು ಪರೀಕ್ಷೆ ಮಾಡಿಸುವ ಮುಖಾಂತರ ಹೆಣ್ಣು ಭ್ರೂಣವಾದ್ರೆ ಅದನ್ನು ಅಲ್ಲಿಯೇ ಗರ್ಭಪಾತ ಮಾಡಿಸಿಬಿಡುತ್ತಿದ್ದರು . ಮಾಧ್ಯಮಗಳಲ್ಲಿ .. ಸಮಾಜಿಕ ಜಾಲತಾಣಗಲ್ಲಿಯೂ ಭ್ರೂಣ ಹತ್ಯೆ ಮಹಾಪಾಪ ಅಂತ ಹೇಳಿದ್ರು ಅದು ಬರಿ ಮಾತಿಗೆ ಮತ್ತು ಘೋಷಣೆಗೆ ಮಾತ್ರ ನಿಲ್ಲುತ್ತಿದೆ ಆದ್ರೆ ಭ್ರೂಣ ಹತ್ಯೆ ಅದರಲ್ಲೂ ಹೆಣ್ಣು ಭ್ರೂಣಹತ್ಯೆ ಅನ್ನೋದು ನಿಲ್ತಾನೆ ಇಲ್ಲ ಹೀಗಿರುವಾಗ ಇಲ್ಲೊಬ್ರು ಪೋಷಕರು ಗರ್ಭದಲ್ಲಿರುವ ಮಗು ಹೆಣ್ಣು ಮಗು ಎಂದು ತಿಳಿದಾಗ ವೈದ್ಯರ ಬಳಿ ಹೋಗಿ ಅದನ್ನು ತೆಗೆಸಲು ಮುಂದಗ್ತಾರೆ ಆಗ ಆ ಪುಟ್ಟ ಕಂದಮ್ಮ ತನಗೆ ಏನೆಲ್ಲಾ ಆಗ್ತಿತ್ತು ಅನ್ನೋದನ್ನು ಕರುಣಾಜನಕವಾಗಿ ವಿವರಿಸಿದೆ.

Fetal movement

ನನ್ನ ಹೃದಯ ಬಡಿಯುತ್ತಿತ್ತು ನನಗೆ ಅದನ್ನು ಅನುಭವಿಸಲು ಸಂತೋಷವಾಯಿತು , ನನ್ನ ಉಜ್ವಲ ಭವಿಷ್ಯದ ಭರವಸೆ ನನ್ನಲ್ಲಿ ತುಂಬಿತ್ತು , ನಿಲ್ದಾಣದಲ್ಲಿ ರೈಲು ಬರುತ್ತಿರುವಂತೆ ನನಗೆ ಕೆಲವು ಶಬ್ದಗಳು ಕೇಳಿಸುತ್ತಿತ್ತು ಬಹುಶಃ ನನಗೆ ಕೆಲವು ಪರೀಕ್ಷೆಗಳು ನಡೆಯುತ್ತಿವೆ ಎಂದು ನಾನು ಸಂತೋಷದಿಂದ ನನ್ನನ್ನು ತೋರಿಸುತ್ತಿದ್ದೇನೆ.

ನನ್ನ ಸುತ್ತಲೂ ಸ್ವಲ್ಪ ಉದ್ವೇಗವನ್ನು ಅನುಭವಿಸುವಂತಹ ತವಕ ಉಂಟಾಯಿತು ,ನನ್ನ ಕಾಲನ್ನು ಏನೋ ಎಳೆದಂತಾಯಿತು ನಾನು ನೋವಿನಿಂದ ನರಳಿದೆ. ಒಬ್ಬೊಬ್ಬರಾಗಿ ನನ್ನ ಕೈ ಕಾಲುಗಳನ್ನೆಲ್ಲ ಕಿತ್ತು ಕಿತ್ತು ಹಾಕಿದರು ನನಗೆ ಹಿಂಸೆಯಾಯಿತು ಕೊನೆಗೆ ಯಾವುದೋ ಮಾರಕಾಸ್ತ್ರ ನನ್ನ ತಲೆಯನ್ನು ಪುಡಿ ಮಾಡಿತು.

” ಗರ್ಭಪಾತಯಶಸ್ವಿಯಾಗಿದೆ ” ಎಂದು ವೈದ್ಯರು ಘೋಷಿಸಿದರು

ತಮಗೆ ಹೆಣ್ಣುಮಗು ಬೇಡ ಎಂದಿದ್ದರು ನನ್ನ ಜನ್ಮಕ್ಕೆ ಕಾರಣರಾಗುತ್ತಿರುವವರು.

ಏನೇ ಆದರೂ ಎಷ್ಟೇ ಆದರೂ ನಾನು ಹೆಣ್ಣು ಭ್ರೂಣ ಅವರಿಗೆ ಮುಂದೊಂದಿನ ಹೊರೆಯಾಗುವೆ ಎಂದು ನನ್ನನ್ನು ಚಿಗುರಿನಲ್ಲೆ ಚಿವುಟಿದರೂ . ಎಷ್ಟೇ ಆಗ್ಲಿ ನಾನು ಹೆಣ್ಣು , ಹೆಣ್ಣು ಭ್ರೂಣವಲ್ಲವೇ ಒಮ್ಮೆ ಅವರು ಯೋಚಿಸಬೇಕಿತ್ತು ಕತ್ತಲೆಯಲ್ಲಿ ಬೆತ್ತಲೆಯಾಟವಾಡಿ ತಂದೆ ತಾಯಿ ಇಬ್ಬರ ದೇಹದ ಅಂಶದಿಂದಲ್ಲವೇ ನಾನು ಭ್ರೂಣವಾಗಿದ್ದು ಅದು ಹೆಣ್ಣು ಭ್ರೂಣವಾಗಿದ್ದು ಎಂದು … ಗರ್ಭದಲ್ಲಿರುವ ನನ್ನ ಚಿವುಟುವಾಗ ನನ್ನ ಪುಟ್ಟ ಕಣ್ಣಿಂದ ಅದೇಷ್ಟೋ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು ಆ ಕಣ್ಣೀರೆ ರಕ್ತವಾಗಿ ಹೊರಹೊಮ್ಮುತ್ತಿತ್ತು .

Pregnant woman and child in the womb.

ಅಮ್ಮ ಅಪ್ಪ ನಿಮಗೆ ಒಂದೇ ಒಂದು ಮಾತು ಹೇಳ್ತಿನಿ ನನ್ನ ದೇಹದ ಒಂದೊಂದು ಅಂಗವನ್ನ ಇಂಚಿಂಚಾಗಿ ಕೀಳೋವಾಗ ಒಮ್ಮೆ ಯೋಚಿಸಿ ನೀವು ಒಂದು ಹೆಣ್ಣು ಅಲ್ವಾ .ಅಪ್ಪಗೆ ಜನ್ಮ ಕೊಟ್ಟ ತಾಯಿನೂ ಒಂದು ಹೆಣ್ಣು ಅಲ್ವಾ ಅಂತ .

ಫ಼್ರೆಂಡ್ಸ್ಈ ಕಥೆಯ ಸಾರಾಂಶ ನಿಮ್ಮೆಲ್ರಿಗೂ ಅರ್ಥವಾಗಿದೆ ಅಲ್ವ .

ಭ್ರೂಣ ಹತ್ಯೆ ಮಹಾಪಾಪ . ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವ ಮುನ್ನ ಯೋಚಿಸಿ .. ಈ ಕಥೆಯ ಬಗ್ಗೆ ಅಲ್ಲ ಈ ಮಗುವಿನ ವ್ಯಥೆಯ ಬಗ್ಗೆ ಹಾಗೆ ನಿಮ್ಮ ಅಭಿಪ್ರಾಯ ತಿಳಿಸಿ.

error: Content is protected !!