spot_img
spot_img
spot_img
spot_img
spot_img
spot_img

ರೈತರಿಗೆ ಸಿಗುತ್ತೆ ಬಡ್ಡಿರಹಿತ ಸಾಲ! ರೈತರು ಬಡ್ಡಿ ಇಲ್ಲದೆ ಸಾಲ ಬೇಕು ಅಂದ್ರೆ ಹೀಗೆ ಮಾಡಿ!

Published on

spot_img

Loan facility to farmers with zero interest: ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದ ರೈತರ ಅಭಿವೃದ್ದಿ ಯಾದರೆ ಮಾತ್ರ ದೇಶವು ಪ್ರಗತಿಯಲ್ಲಿರುತ್ತದೆ. ಇಂದು ರೈತರಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವು ರೀತಿಯಲ್ಲಿ ಸೌಲಭ್ಯವಾನ್ನು ನೀಡುತ್ತಿದೆ. ಉದಾಹರಣೆಗೆ, ಯಂತ್ರೋಪಕರಣ, ಬಿತ್ತನೆ ಬೀಜಗಳನ್ನು ಸಹಾಯಧನದಲ್ಲಿ ವಿತರಣೆ, ಗೊಬ್ಬರ ವಿತರಣೆ,ಬೆಳೆ ಪರಿಹಾರ, ಬರ ಪರಿಹಾರ,ಕೃಷಿ ಸಾಲ, ಹೀಗೆ ಹತ್ತು ಹಲವಾರು ಯೋಜನೆಗಳ ಮೂಲಕ ರೈತರಿಗೆ ಸಹಾಯಧನ ರೂಪದಲ್ಲಿ ಕೂಡ ಸಹಾಯಧನ ನೀಡುತ್ತಿರುತ್ತದೆ.

ಅದೇ ರೀತಿ ಕರ್ನಾಟಕ ರಾಜ್ಯ ಸರ್ಕಾರ ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ( ಒಂದು ಹೇಕ್ಟರ್‍ ನಿಂದ ಐದು ಹೇಕ್ಟರ್‍ ನವರೆಗೆ ) ರೈತರಿಗೆ ಬಡ್ಡಿ ರಹಿತ ಸಾಲ ಯೋಜನೆಯನ್ನೂ ಜಾರಿಗೆ ತಂದಿರುತ್ತದೆ.ರಾಜ್ಯ ಸರಕಾರ ನಡೆಸುತ್ತಿರುವ ಬಡ್ಡಿ ಸಹಾಯಧನ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರ 1 ಲಕ್ಷ ರೂ.ವರೆಗೆ ಬಡ್ಡಿಯಿಲ್ಲದೆ ಸಾಲವಾನ್ನು ನೀಡಲು ಮುಂದಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಕರ್ನಾಟಕ ರಾಜ್ಯ ಸರ್ಕಾರ 5700 ಕೋಟಿ ರೂ.ಗಳ ಬಜೆಟ್ ಬಿಡುಗಡೆಯನ್ನ ಮಾಡಿರುತ್ತದೆ.

 

How much Loan facility : ಸಣ್ಣ & ಅತೀ ಸಣ್ಣ ರೈತರಿಗೆ ಎಷ್ಟು ಸಾಲದ ಸೌಲಭ್ಯವೂ ದೊರೆಯಲಿದೆ?

ಕರ್ನಾಟಕ ರಾಜ್ಯದ ರೈತರಿಗೆ ಬಡ್ಡಿ ರಹಿತ ಯೋಜನೆಯಡಿ Interest Free Loan Scheme ಮೂಲಕ ರಾಜ್ಯದ ಲಕ್ಷಾಂತರ ರೈತರಿಗೆ ಒಂದು ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲವನ್ನು ಕೃಷಿ ಪರಿಕರಗಳ ಖರೀದಿ ಮತ್ತು ಇತರೇ ಕೃಷಿ ಚಟುವಟಿಕೆಗೆ ಈ ಸಾಲವನ್ನ ಬಳಸಿಕೊಳ್ಳಬಹುದಾಗಿದೆ.

ಇದೇ ರೀತಿ ರಾಜ್ಯ ಸರ್ಕಾರದಿಂದ ಅನೇಕ ಯೋಜನೆಗಳ ಮೂಲಕ ರೈತರಿಗೆ ಬಡ್ಡಿರಹಿತ ಸಾಲವನ್ನು ನೀಡಲಾಗುತ್ತದೆ. ಈ ಯೋಜನೆಯು ವಿವಿಧ ರಾಜ್ಯಗಳಲ್ಲಿ ವಿವಿಧವಾದ ಹೆಸರುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರ್ಕಾರಗಳು ರೈತರಿಗಾಗಿ ಆಯಾ ಹಂತಗಳಲ್ಲಿ ಯೋಜನೆಗಳನ್ನು ನಡೆಸುತ್ತಿವೆ ಮತ್ತು ಅವರಿಗೆ ಕೃಷಿಗಾಗಿ ಬಡ್ಡಿರಹಿತವಾದ ಸಾಲವನ್ನ ಅಥವಾ ಕಡಿಮೆ ಬಡ್ಡಿಯ ಸಾಲವನ್ನು ನೀಡುತ್ತಿರುತ್ತದೆ ಅಂತ ಹೇಳಬಹುದು.

ಬಡ್ಡಿರಹಿತವಾದ ಸಾಲಕ್ಕೆ ನಿಗದಿಪಡಿಸಿರುವ ನಿಯಮಗಳ ಪ್ರಕಾರ, 1 ಲಕ್ಷದಿಂದ 3 ಲಕ್ಷದವರೆಗೆ ಕೃಷಿಗೆ ಸಾಲ ಪಡೆಯುವ ರೈತರಿಂದ ಶೇಕಡಾ 2 ರ ದರದಲ್ಲಿ ಬಡ್ಡಿಯನ್ನು ಕೂಡ ವಿಧಿಸಲಾಗುತ್ತದೆ. ಈ ಬಡ್ಡಿ ದರಗಳು ಏಪ್ರಿಲ್ 1, 2022 ರ ಮೊದಲು ಪಡೆದ ಕೃಷಿ ಸಾಲ ಹೊಂದಿರುವ ರೈತರಿಗೆ ಕೂಡ ಅನ್ವಯಿಸುತ್ತವೆ.

ಈ ಹಿಂದೆ, ಕರ್ನಾಟಕ ರಾಜ್ಯದ ಪ್ರಮುಖ ಕಾರ್ಯಕ್ರಮವಾದ “ಜೀವನ ಮತ್ತು ಆದಾಯ ವರ್ಧನೆಗಾಗಿ ರೈತರ ನೆರವು” ಸಂಕ್ಷಿಪ್ತವಾಗಿ ಕಲಿಯಾ ಯೋಜನೆಯ ಅಡಿಯಲ್ಲಿ ರಾಜ್ಯದ ರೈತರಿಗೆ Rs 50,000 ರಷ್ಟು ಬಡ್ಡಿ ರಹಿತ ಬೆಳೆ ಸಾಲವನ್ನು ಕೂಡ ಒದಗಿಸಲಾಗಿದೆ. ಆದರೆ ಇದೀಗ ರಾಜ್ಯದ ರೈತರಿಗೆ ಬಡ್ಡಿ ಸಹಾಯಧನವಾನ್ನು ನೀಡುವ ಯೋಜನೆಯಲಿ ಆರಂಭಿಸಲಾಗಿದೆ. ಇದರಿಂದ ಕರ್ನಾಟಕ ರಾಜ್ಯದ ಲಕ್ಷಾಂತರ ರೈತರು ಪ್ರಯೋಜನ ಪಡೆಯಲಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರವು ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರನ್ನು ಗಮನದಲ್ಲಿಟ್ಟುಕೊಂಡು ಬಡ್ಡಿ ಸಹಾಯಧನ ಯೋಜನೆ ಜಾರಿಗೊಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯಡಿ ಹೆಚ್ಚು ಹೆಚ್ಚು ಪ್ರಯೋಜನ ಪಡೆಯುತ್ತಾರೆ.

ಈ ಒಂದು ಯೋಜನೆಯಡಿಯಲ್ಲಿ, ಈ ಸಣ್ಣ ಜಮೀನು ಹೊಂದಿರುವ ರೈತರಿಗೆ ಕೃಷಿ ಕೆಲಸಕ್ಕಾಗಿ ಬಡ್ಡಿರಹಿತ ಸಾಲವನ್ನು ಒದಗಿಸಲಾಗುತ್ತದೆ, ಅಂತ ಇದರಿಂದ ಅವರು ತಮ್ಮ ಕೃಷಿ ಕೆಲಸವನ್ನು ಯಾವುದೇ ತೊಂದರೆಯಿಲ್ಲದೆ ಮಾಡಬಹುದು. ಸಣ್ಣ ಮತ್ತು ಅತಿ ಸಣ್ಣ ರೈತರ ನೆರವಿಗೆ ಆದಾಯವನ್ನು ಹೆಚ್ಚಿಸುವುದು ಈ ಯೋಜನೆಯನ್ನು ಪ್ರಾರಂಭಿಸುವ ಇಂದಿನ ಸರ್ಕಾರದ ಒಂದು ಉದ್ದೇಶವಾಗಿದೆ

Term of interest Free Loan Scheme: ಈ ಯೋಜನೆ ಅವಧಿಯು ಎಷ್ಟು?

ಕರ್ನಾಟಕ ರಾಜ್ಯದ ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ 5 ವರ್ಷಗಳಿಂದ ಬಡ್ಡಿ ಸಹಾಯಧನ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ, 2022-23ರ ಅವಧಿಯಲ್ಲಿ 32.43 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರು ಸಹಕಾರಿ ಬ್ಯಾಂಕ್‌ಗಳು ಮತ್ತು ಪ್ರಾಥಮಿಕ ಕೃಷಿ ಸಹಕಾರ ಸಂಘಗಳ (PACS) ಮೂಲಕ ಶೂನ್ಯ 0 ಪ್ರತಿಶತ ವಾರ್ಷಿಕ ಬಡ್ಡಿ ದರದಲ್ಲಿ ರೂ 1 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಬೆಳೆಯ ಸಾಲವನ್ನು ಪಡೆದಿದ್ದಾರೆ.

ಕರ್ನಾಟಕ ಸರ್ಕಾರವು ಸೂಚಿಸಿದಂತೆ ಬೆಳೆ ಸಾಲ ನೀಡಿಕೆಯಲ್ಲಿ ತೊಡಗಿರುವ ಸಹಕಾರಿ ಬ್ಯಾಂಕ್‌ಗಳು ಮತ್ತು PACS ನಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ರಾಜ್ಯವು ಸಹಕಾರಿ ಬ್ಯಾಂಕುಗಳು ಮತ್ತು PACS ಗಳಿಗೆ ಬಡ್ಡಿ ಸಹಾಯಧನ ಅಥವಾ ಸಹಾಯಧನವನ್ನು ಕೂಡ ನೀಡುತ್ತಿದೆ. ರೈತರು ಕಾಲಕಾಲಕ್ಕೆ ಕಡಿಮೆ ಬಡ್ಡಿದರದಲ್ಲಿ ಸುಲಭ ಸಾಲವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಇದು ತುಂಬಾ ಪ್ರಯೋಜನಕಾರಿಯಾಗಿದೆ. 2023-24 ರಿಂದ 2027-28 ರವರೆಗೆ ಸಂಪೂರ್ಣ ಐದು ವರ್ಷಗಳವರೆಗೆ ಸಹಕಾರಿ ಬ್ಯಾಂಕ್‌ಗಳು ಅಥವಾ PACS ಗಳಿಗೆ ಬಡ್ಡಿ ಸಹಾಯಧನವನ್ನ ಕೂಡ ಯೋಜನೆಗೆ ಅನ್ವಯಿಸುತ್ತದೆ.

Loan Facility for any agricultural activity: ಯಾವ ಯಾವ ಕೃಷಿ ಚಟುವಟಿಕೆಗಳಿಗೆ ಸರ್ಕಾರ ಬ್ಯಾಂಕ್ ನಿಂದ ಸಾಲ ನೀಡುತ್ತದೆ ಎಂದು ತಿಳಿಯಿರಿ?

ಇದೇ ರೀತಿಯಾಗಿ ರಾಜ್ಯದ ರೈತರಿಗಾಗಿ ಸರಕಾರ ಅವಧಿ ಸಾಲ, ನಗದು ಸಾಲ (Cash Loan), ಅಲ್ಪಾವಧಿ, ದೀರ್ಘಾವಧಿ, ಹೀಗೆ ಬೇರೆ ರೀತಿಯ ಸಾಲಗಳನ್ನು ಒದಗಿಸಲಾಗುತ್ತದೆ. ಹೈನುಗಾರಿಕೆ (Dairying), ಹಂದಿ (Swine), ಕೋಳಿ ಸಾಕಾಣಿಕೆ (Poultry), ರೇಷ್ಮೆ (Sericulture), ಪುಷ್ಪೋದ್ಯಮ (Floriculture), ಮೀನುಗಾರಿಕೆ (Fisheries), ಗೋಬರ್ ಗ್ಯಾಸ್ (Dung Gas) ಇತ್ಯಾದಿ ಚಟುವಟಿಕೆ ಗಳಿಗೂ ಸರಕಾರದಿಂದ ಕೂಡ ಸಬ್ಸಿಡಿ ಮೊತ್ತ ದೊರೆಯುತ್ತದೆ.

ಅದೇ ರೀತಿ ರೈತರ ಮತ್ತು ಮಹಿಳೆಯರ ಸ್ವ ಸಹಾಯಧನ ಗುಂಪುಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಶೇ.7ರ ಬಡ್ಡಿ ದರ ದಲ್ಲಿ ಸಾಲದ ಸೌಲಭ್ಯ ನೀಡುತ್ತದೆ.
ಈ ಯೋಜನೆ ಲಾಭವನ್ನು ರಾಜ್ಯದ ಸಣ್ಣ ಮತ್ತು ಅತೀ ಸಣ್ಣ ರೈತರು ಸದುಪಯೋಗ ಪದೆದುಕೊಳ್ಳಬೇಕೇಂಬುದೇ ಈ ಮಾಹಿತಿ ಉದ್ದೇಶವಾಗಿರುತ್ತದೆ ಧನ್ಯವಾದಗಳು.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!