ಕಣ್ಣು ಮಿಟುಕಿಸುವುದು ಬಹಳ ಸಾಮಾನ್ಯವಾದ ವಿಷ್ಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಆಗಾಗ ಕಣ್ಣು ಮಿಟುಕಿಸುತ್ತಲೇ ಇರುತ್ತಾರೆ. ಕಣ್ಣು ಮಿಟುಕಿಸುವುದು ನಿಮ್ಮ ದೇಹ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದರ ಸಂಕೇತವಾಗಿದೆ. ಸರಾಸರಿಯಾಗಿ, ಹೆಚ್ಚಿನ ಜನರು ಪ್ರತಿ ನಿಮಿಷಕ್ಕೆ 15 ರಿಂದ 20 ಬಾರಿ ಮಿಟುಕಿಸುತ್ತಾರೆ.
ಗಂಟೆಗೆ ಎಷ್ಟು ಬಾರಿ ರೆಪ್ಪೆ ಮಿಟುಕಿಸುತ್ತೇವೆ ಗೊತ್ತಾ?
ಕಣ್ಣು ಮಿಟುಕಿಸುವುದು ಬಹಳ ಸಾಮಾನ್ಯವಾದ ವಿಷ್ಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಆಗಾಗ ಕಣ್ಣು ಮಿಟುಕಿಸುತ್ತಲೇ ಇರುತ್ತಾರೆ. ಕಣ್ಣು ಮಿಟುಕಿಸುವುದು ನಿಮ್ಮ ದೇಹ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದರ ಸಂಕೇತವಾಗಿದೆ. ಸರಾಸರಿಯಾಗಿ, ಹೆಚ್ಚಿನ ಜನರು ಪ್ರತಿ ನಿಮಿಷಕ್ಕೆ 15 ರಿಂದ 20 ಬಾರಿ ಮಿಟುಕಿಸುತ್ತಾರೆ. ನಿಮ್ಮ ಕಣ್ಣಿನ ಮುಂಭಾಗದ ಮೇಲ್ಮೈ ಕಿರಿಕಿರಿಯುಂಟುಮಾಡಿದರೆ, ಅದು ಸಾಮಾನ್ಯಕ್ಕಿಂತ ಹೆಚ್ಚು ಮಿಟುಕಿಸಬಹುದು. ಹೊಗೆ, ಮಾಲಿನ್ಯ, ರಾಸಾಯನಿಕ ಆವಿಗಳು ಅಥವಾ ಗಾಳಿಯಲ್ಲಿನ ಧೂಳು ಸೇರಿದಂತೆ ಹಲವು ಅಂಶಗಳಿಂದ ಕಣ್ಣಿನ ಕೆರಳಿಕೆ ಉಂಟಾಗುತ್ತದೆ. ಇದಲ್ಲದೆ, ಒಣ ಕಣ್ಣುಗಳು, ನಿಮ್ಮ ಕಣ್ಣಿನ ಹೊರಭಾಗವನ್ನು ತುರಿಸುವಂತೆ ಮಾಡುತ್ತದೆ. ಕಣ್ಣಿನ ಗಾಯ ಅಥವಾ ಕಣ್ಣುರೆಪ್ಪೆಯ ಉರಿಯೂತ ಸಹ ಕಣ್ಣಿನ ಕಿರಿಕಿರಿಯನ್ನು ಉಂಟುಮಾಡಬಹುದು.
ಕಣ್ಣಿಗೆ ಹೆಚ್ಚಿನ ಒತ್ತಡ ಬೀಳುವುದು
ನೀವು ದೀರ್ಘಕಾಲದವರೆಗೆ ಒಂದು ವಿಷಯದ ಮೇಲೆ ಕೇಂದ್ರೀಕರಿಸಿದಾಗ ಇದು ಸಂಭವಿಸುತ್ತದೆ. ಅನೇಕ ವಿಷಯಗಳು ಕಣ್ಣಿನ ಆಯಾಸವನ್ನು ಉಂಟುಮಾಡಬಹುದು. ಪ್ರಖರ ಬೆಳಕಿನಲ್ಲಿ ಇರುವುದು, ಹೆಚ್ಚು ಹೊತ್ತು ಓದುವುದು, ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯುವುದು ಇದಕ್ಕೆ ಸಾಮಾನ್ಯ ಕಾರಣಗಳು.
ದೃಷ್ಠಿ ದೋಷ
ದೃಷ್ಟಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದಲೂ ನೀವು ಆಗಾಗಾ ಕಣ್ಣು ಮಿಟುಕಿಸುವಂತಾಗುತ್ತದೆ. ಇವುಗಳಲ್ಲಿ ಸಮೀಪದೃಷ್ಟಿ, ಹೈಪೋಪಿಯಾ, ಪ್ರೆಸ್ಬಯೋಪಿಯಾ ಮತ್ತು ಸ್ಟ್ರಾಬಿಸ್ಮಸ್, ಇತ್ಯಾದಿ. ಇವೆಲ್ಲವೂ ನಿಮ್ಮ ಕಣ್ಣುಗಳು ಒತ್ತಡಕ್ಕೆ ಒಳಗಾಗುವ ಸಂದರ್ಭಗಳಾಗಿವೆ.
ಇತರ ಕಾರಣಗಳು
ನೀವು ಒತ್ತಡದಲ್ಲಿರುವಾಗ, ಬೆಳಕು ಮತ್ತು ಕಣ್ಣಿನ ಒತ್ತಡಕ್ಕೆ ಹೆಚ್ಚು ಸಂವೇದನಾಶೀಲರಾಗಬಹುದು. ಆತಂಕ, ಒತ್ತಡ ಮತ್ತು ಆಯಾಸ ಸೇರಿದಂತೆ ಕೆಲವು ಮಾನಸಿಕ ಮತ್ತು ದೈಹಿಕ ಅಸ್ವಸ್ಥತೆಗಳು ನಿಮ್ಮನ್ನು ಹೆಚ್ಚಾಗಿ ರೆಪ್ಪೆ ಮಿಟುಕಿಸುವಂತೆ ಮಾಡುತ್ತದೆ.
ಐ ಡಿಸ್ಟೋನಿಯಾ
ಇದು ಕಣ್ಣುಗಳಿಗೆ ಸಂಬಂಧಿಸಿದ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಇವುಗಳಲ್ಲಿ ಅತ್ಯಂತ ಸಾಮಾನ್ಯವಾದದ್ದು ಬ್ಲೆಫರೋಸ್ಪಾಸ್ಮ್, ಇದರಲ್ಲಿ ನಿಮ್ಮ ಕಣ್ಣಿನ ಸ್ನಾಯುಗಳಲ್ಲಿನ ಸೆಳೆತದಿಂದಾಗಿ ರೆಪ್ಪೆ ಪದೇ ಪದೇ ಬಡಿಯುತ್ತಿರುತ್ತದೆ. ಎರಡನೆಯದು ಮೆಗ್ಸ್ ಸಿಂಡ್ರೋಮ್, ಇದರಲ್ಲಿ ಬಾಯಿ ಮತ್ತು ದವಡೆಯಲ್ಲಿ ಸೆಳೆತಗಳು ಇರಬಹುದು ಈ ಕಾರಣದಿಂದಾಗಿಯೂ ರೆಪ್ಪೆ ಪಟಪಟನೆ ಅದುರುತ್ತದೆ.