ಕಣ್ಣಿನ ಬಣ್ಣಗಳೇ ತಿಳಿಸುತ್ತವೆ ನಿಮ್ಮ ವ್ಯಕ್ತಿತ್ವ.!

Published on

spot_img
spot_img

ವಿವೇಕವಾರ್ತೆ : ಕಣ್ಣುಗಳು ನಮ್ಮೆಲ್ಲರ ವ್ಯಕ್ತಿತ್ವದ ಬಗ್ಗೆ ವಿಶೇಷ ವಿಷಯಗಳನ್ನು ತಿಳಿಸುತ್ತವೆ. ಕಣ್ಣುಗಳು ಮನುಷ್ಯನ ವ್ಯಕ್ತಿತ್ವದ ಕನ್ನಡಿ ಇದ್ದಂತೆ. ಅನೇಕ ಬಾರಿ ನಮಗೆ ತಿಳಿದಿಲ್ಲದ ವಿಷಯಗಳು ಕಣ್ಣುಗಳ ಬಣ್ಣದಿಂದ ಬಯಲಾಗುತ್ತವೆ. ಅನೇಕ ಆಳವಾದ ರಹಸ್ಯಗಳು ಕಣ್ಣುಗಳ ಬಣ್ಣದಲ್ಲಿ ಮರೆಯಾಗಿರುತ್ತವೆ. ಕಣ್ಣು ನೋಡಿ ವ್ಯಕ್ತಿಯ ಹೃದಯದ ಮಾತನ್ನು ಸಹ ತಿಳಿಯಬಹುದು.

ಹಾಗಾದರೆ ಕಣ್ಣುಗಳ ಬಣ್ಣ ಏನು ಹೇಳುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.

1) ಕಂದು ಬಣ್ಣದ ಕಣ್ಣು :

ಬಹಳ ಆಕರ್ಷಕ ಕಣ್ಣುಗಳೆಂದರೆ ಅವು ಕಂದು ಬಣ್ಣದ ಕಣ್ಣುಗಳು. ಈ ಬಣ್ಣದ ಕಣ್ಣನ್ನು ಹೊಂದಿರುವವರು ಹುಟ್ಟಿನಿಂದ ನಾಯಕರಂತೆ. ಯಾವಾಗಲೂ ಎಲ್ಲರಿಗೂ ಸಹಾಯ ಮಾಡಲು ಕಾಯುತ್ತಾರೆ. ಇವರು ಬಹಳ ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತಾರೆ.

ಇನ್ನು ಅತ್ಯಂತ ಸಾಮಾನ್ಯವಾದ ಕಣ್ಣಿನ ಬಣ್ಣವಾಗಿದೆ. ಪ್ರಪಂಚದ ಸುಮಾರು 55 ಪ್ರತಿಶತದಷ್ಟು ಜನರು ಈ ಕಣ್ಣಿನ ಬಣ್ಣವನ್ನು ಹೊಂದಿದ್ದಾರೆ.

2) ನೀಲಿ ಬಣ್ಣದ ಕಣ್ಣುಗಳು :

ನೀಲಿ ಕಣ್ಣುಗಳು ಇರುವವರು ನೋಡಲು ಬಹಳ ಸುಂದರವಾಗಿ ಕಾಣುತ್ತಾರೆ. ಈ ರೀತಿ ಕಣ್ಣು ಇರುವವರು ಬಹಳ ಶಾಂತ ಸ್ವಭಾವದವರಂತೆ. ಅಷ್ಟೇ ಅಲ್ಲದೇ ನಿಷ್ಠೆಗೆ ಮತ್ತೊಂದು ಹೆಸರು ಎನ್ನಲಾಗುತ್ತದೆ. ಅವರನ್ನ ನೋಡಿದ ತಕ್ಷಣ ಎಲ್ಲರಿಗೂ ಇಷ್ಟವಾಗುತ್ತದೆ.

3) ಹಸಿರು ಬಣ್ಣದ ಕಣ್ಣು :

ಹಸಿರು ಬಣ್ಣದ ಕಣ್ಣುಗಳಿರುವವರು ನೀವು ಎಲ್ಲಾದರೂ ನೋಡಿದ್ದೀರಾ? ಅದು ಬಹಳ ಅಪರೂಪ ಹಾಗೂ ಅತಿ ವಿರಳ ಎನ್ನಬಹುದು. ಈ ಬಣ್ಣದ ಕಣ್ಣನ್ನ ಹೊಂದಿರುವ ಜನರು ಬಹಳ ಅದೃಷ್ಟವಂತರು ಹಾಗೂ ಬುದ್ದಿವಂತರು ಎನ್ನಲಾಗುತ್ತದೆ.

4) ಕಪ್ಪು ಬಣ್ಣದ ಕಣ್ಣು :

ಈ ರೀತಿಯ ಜನರು ಬಹಳ ನಂಬಿಕೆಗೆ ಅರ್ಹರಾಗಿರುತ್ತಾರೆ. ಇವರು ಹೆಚ್ಚಿನ ಜನರ ಜೊತೆ ಬೆರೆಯುವ ಸಾಧ್ಯತೆ ಸಹ ಕಡಿಮೆ ಇರುತ್ತದೆ. ಇವರು ಯಾರಿಗೂ ಎಂದಿಗೂ ಮೋಸ ಮಾಡುವುದಿಲ್ಲ.

5) ಬೂದು ಬಣ್ಣದ ಕಣ್ಣು :

ಈ ಕಣ್ಣಿನ ಬಣ್ಣವನ್ನು ಹೊಂದಿರುವ ಜನರು ಯಾವುದೇ ಮತ್ತು ಅವರಿಗೆ ಸಂಬಂದಿಸಿದ ವಿಚಾರಗಳಲ್ಲಿ ಸೌಮ್ಯ ಮತ್ತು ಬುದ್ಧಿವಂತರು. ಬೂದು ಕಣ್ಣಿನ ಬಣ್ಣ ಹೊಂದಿರುವ ಜನರು ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಅವರ ಕೆಲಸದಿಂದ ಹಿಡಿದು ಅವರ ಪ್ರೇಮ ಜೀವನದವರೆಗೆ, ಅವರು ಎಲ್ಲವನ್ನೂ ಸಮತೋಲನದಲ್ಲಿಡಲು ಸಮರ್ಥರು.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!