spot_img
spot_img
spot_img
spot_img
spot_img
spot_img

ಇಂಗ್ಲೆಂಡಿನ ಹಸುಗಳು 5 ಜಿ ಇಂಟರ್ನೆಟ್ ಬಳಸುತ್ತಿವೆ! ಹೇಗೆ ಗೊತ್ತಾ?

Published on

spot_img

ವಿವೇಕವಾರ್ತೆ :ನಾವಿನ್ನು ಇಲ್ಲಿ 5 ಜಿ ಆಗಮನಕ್ಕಾಗಿ ಕಾಯುತ್ತಿದ್ದೇವೆ, ಭಾರತದಲ್ಲಿ ಎಲ್ಲಾ ಕಡೆಯಲ್ಲೂ 5ಜಿ ಸಂಪರ್ಕ ಇನ್ನೂ ಸಿಕ್ಕಿಲ್ಲ ಆದರೆ ಇಂಗ್ಲೆಂಡ್‌ನ ಕೆಲವು ಹಸುಗಳು ಈಗಾಗಲೇ 5 ಜಿ ಬಳಸುತ್ತಿವೆ! ನಮ್ಮ ದೇಶದ ಜನ ಇನ್ನೂ 5g ಗಾಗಿ ಕಾಯುತ್ತಿದ್ದಾರೆ, ಆದರೆ ಇಂಗ್ಲೆಂಡ್ ನಲ್ಲಿ ಆಲ್ರೆಡಿ ಜನರಷ್ಟೇ ಅಲ್ಲ ಹಸುಗಳು ಕೂಡ 5 g ಬಳಸುತ್ತಿದ್ದಾರೆ! ಹೌದು, ಆಶ್ಚರ್ಯ ಅನಿಸಿದರೂ ಸತ್ಯ! ಕೆಲವೇ ಸೆಕೆಂಡುಗಳಲ್ಲಿ ಒಂದಿಡೀ ಸಿನೆಮಾವನ್ನೇ ಡೌನ್ ಲೌಡ್ ಮಾಡಿಬಿಡುವಷ್ಟು ವೇಗದ ಈ 5g ಇಂಟರ್ ನೆಟ್ ದುನಿಯಾಕ್ಕೆ ಒಂದು ವಿಶಿಷ್ಟ ತಿರುವು ನೀಡಲಿದೆ.

ಸೆಲ್ಫ್ ಡ್ರೈವಿಂಗ್ ಕಾರ್ ಗಳಲ್ಲೂ ಇದರ ಪಾತ್ರ ನೋಡಬಹುದು. ಹೀಗಿರುವ 5g ಯನ್ನು ಈಗಾಗಲೇ ಇಂಗ್ಲೆಂಡ್ ಹಸುಗಳು ಬಳಸತೊಡಗಿವೆ, ಹೇಗಂತ ನೋಡೋಣ ಬನ್ನಿ… ಬ್ರಿಟನ್ ನ ಒಂದು ಡೈರಿಯಲ್ಲಿ ಹಸುಗಳಿಗೆ ಒಂದು ಕಾಲರ್ ತಯಾರಿಸಿ ಹಾಕಲಾಗಿದೆ, ಅದಕ್ಕೆ 5g ಡಿವೈಸ್ ಬಳಸಲಾಗಿದೆ. ಈ ಸಾಧನದ ಕೆಲಸ, ಹಾಲು ಕರೆಯುವ ರೊಬೋಟ್ ಗಳಿಗೆ ಡಟಾ ತಲುಪಿಸುವುದು!

5 ಜಿ

ಹಸುಗಳಿಗೆ ತಾನು ಹಾಲು ಕೊಡಲು ತಯಾರಿದ್ದೇನೆ ಅನಿಸಿದ ಕೂಡಲೆ ಅದು ತಾನಾಗಿಯೇ ಮಶಿನ್ ಹತ್ತಿರ ಹೋಗುತ್ತದೆ. ಸೆನ್ಸಾರ್ ಆಧಾರದ ಮೇಲೆ ಬಾಗಿಲು ತಗೆಯುತ್ತದೆ, ಡಿವೈಸ್ ಕಾರಣದಿಂದ ಮಶಿನ್ ಗೆ ಯಾವ ಹಸು ಎಂದು ಗೊತ್ತಾಗುತ್ತದೆ, ಅದಕ್ಕೆ ತಕ್ಕನಾಗಿ ಹಸು ಪೊಜಿಸೆನ್ ತಗೆದುಕೊಂಡ ಮೇಲೆ ರೊಬೋಟ್ ಎಲ್ಲಿ ಫಿಕ್ಸ್ ಮಾಡಬೇಕು ಎಂದು ಗೊತ್ತಾಗುತ್ತದೆ.

ಹಾಗೂ ಹಾಲು ಕರೆಯಲು ಶುರುವಾಗುತ್ತದೆ! ಅಷ್ಟೇ ಅಲ್ಲ, ನಾವು ಹಾಲು ಕರೆಯುವಾಗ ಹೇಗೆ ಹಸುಗಳಿಗೆ ಏನಾದರೂ ತಿನ್ನಲು ಕೊಡುತ್ತೇವೆಯೋ ಹಾಗೆಯೇ 5g ಸಂಪರ್ಕಿತ ಮಶಿನ್‌ ಹಾಲು ಕರೆಯುವಾಗ ಹಸುವಿಗೆ ತಿನ್ನಲು ಮೇವನ್ನೂ ಕೂಡ ಒದಗಿಸುತ್ತದೆ, ಎಲ್ಲಿಯವರೆಗೆ ಹಸು ಹಾಲು ಕೊಡುತ್ತದೋ ಅಲ್ಲಿಯವರೆಗೆ ಹಸು ಮೇವು ತಿನ್ನಬಹುದು.

ದಕ್ಷಿಣ ಇಂಗ್ಲೆಂಡ್ ನ ಅಗ್ರಿ ಎಪಿ ಸೆಂಟರ್ ನಲ್ಲಿನ 50 ಹಸುಗಳಿಗೆ ಪ್ರಯೋಗಾರ್ಥವಾಗಿ ಈ 5g ಡಿವೈಸ್ ಕಟ್ಟಲಾಗಿದೆ. ಅಲ್ಲಿ ಸಕ್ಸಸ್ ಆದ ಮೇಲೆ ಇದನ್ನೇ ಎಲ್ಲ ಕಡೆ ವಿಸ್ತರಿಸುವ ಯೋಜನೆಯಿದೆ‌. ಅಲ್ಲಿನ ಪ್ರೊಜೆಕ್ಟ್ ಮ್ಯಾನೆಜರ್ ಡಂಕನ್ ಫೋರ್ಬ್ಸ್ ರವರ ಪ್ರಕಾರ, ಈ 5g ಕಾಲರ್ ನಿಂದ ಹಸುಗಳಿಗೆ ಯಾವುದೇ ರೀತಿ ತೊಂದರೆ ಇಲ್ಲ.

ತೊಂದರೆಯ ಬದಲಿಗೆ ಡೈರಿ ಮಾಲಿಕರು ನಿರಂತರ ಮಾನಿಟರ್ ಮಾಡುವ ಮೂಲಕ ಹಸುಗಳ ಆರೋಗ್ಯದ ಬಗ್ಗೆ ಇನ್ನೂ ನೀಟಾಗಿ ಕಾಳಜಿವಹಿಸಬಹುದಂತೆ. ಅಲ್ಲದೇ ಹಸುಗಳಿಗೆ ಸ್ವಲ್ಪ ಸುಸ್ತಾದರೂ ಸಾಕು, ಮಾಲಿಕರಿಗೆ ಆ ಬಗ್ಗೆ ಗೊತ್ತಾಗುತ್ತದೆ, ಹಸುಗಳು ಕಾಯಿಲೆಗೆ ಬೀಳುವ ಮುನ್ನವೇ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗೃತೆ ತಗೆದುಕೊಳ್ಳಬಹುದು.

ಫೋರ್ಬ್ಸ್ ಹೇಳುವಂತೆ, ಅಲ್ಲಿ ಇದನ್ನಿನ್ನೂ ಪ್ರಯೋಗಾತ್ಮಕವಾಗಿ ಬಳಸಲಾಗುತ್ತಿದೆ, ಸಾಮಾನ್ಯ ಬ್ರಾಡ್ ಬ್ಯಾಂಡ್ ಗಿಂತ 5g ಅದೆಷ್ಟು ವೇಗವಾಗಿ ನಮಗೆ ಡಟಾ ಒದಗಿಸಬಹುದು ಎಂದು ನೋಡಲಾಗುತ್ತಿದೆ, ನನ್ನ ಪ್ರಕಾರ ಈ ವ್ಯವಸ್ಥೆಯನ್ನು ದೊಡ್ಡ ದೊಡ್ಡ ಡೈರಿಗಳಲ್ಲಿ ಮಾತ್ರವಲ್ಲ, ದೇಶಾದ್ಯಂತ ಎಲ್ಲ ಚಿಕ್ಕ ಹೈನುಗಾರರು ಕೂಡ ಬಳಸಬಹುದಂತೆ.

ಈ ಯೋಜನೆ ಸಫಲವಾದರೆ ದೇಶದ ಎಲ್ಲ ಹಸುಗಳೂ ಒಂದಕ್ಕೊಂದು ಕನೆಕ್ಟ್ ಆಗಲಿವೆ, ಎಲ್ಲ ಡೈರಿಗಳ ಮಾಲಿಕರು ದೇಶದ ಯಾವ ಭಾಗದಲ್ಲಿ ಯಾವ ಹಸು ಏನು ಮಾಡುತ್ತಿದೆ, ಎಷ್ಟು ಹಾಲು ಕೊಡುತ್ತಿದೆ ಇತ್ಯಾದಿ ಮಾಹಿತಿ ಸಿಗುತ್ತದೆ, ಹಸು ಕೊಳ್ಳುವವರಿಗಂತೂ ಇದು ಅಮೂಲ್ಯ ಮಾಹಿತಿಯಾಗಲಿದೆ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!