Sunday, October 1, 2023

ಮದ್ಯದ ನಶೆಯಲ್ಲಿ ಯುವತಿ ಮೇಲೆ ವಿವಾಹಿತ ಯುವಕನಿಂದ ಅತ್ಯಾಚಾರ: ಸಂತ್ರಸ್ತೆ ಸಾವು

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಛತ್ತೀಸ್​ಗಢದಲ್ಲಿ ಪರಿಚಯಸ್ಥ ಯುವತಿಯನ್ನು ವಿವಾಹಿತ ಯುವಕ ಕಾಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ ಪ್ರಕರಣದ ವರದಿಯಾಗಿದೆ.

ಇಬ್ಬರು ಯುವಕರು ಮತ್ತು 22 ವರ್ಷದ ಓರ್ವ ಯುವತಿ ಒಟ್ಟಿಗೆ ಮದ್ಯ ಸೇವಿಸಿದ ನಂತರ, ಪ್ರಜ್ಞೆ ತಪ್ಪಿದ್ದ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಇದರಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಸಂತ್ರಸ್ತೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ.

ದಾಂತೇವಾಡ ಜಿಲ್ಲೆಯ ಬಚೇಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ವರದಿಯಾಗಿದೆ. ಇಲ್ಲಿನ ಕಡಂಪಲ್ ನಿವಾಸಿಗಳಾದ ಬುಧ್ರು ಒಯಾಮಿ (22) ಮತ್ತು ಬಿಜು ರಾಮ್ ಒಯಾಮಿ (20) ಎಂಬುವವರನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಹೀಗಿದೆ..: ಡಿಸೆಂಬರ್ 24ರ ಮಧ್ಯಾಹ್ನ 12 ಗಂಟೆಯಿಂದ ಯುವತಿ ಕಾಣೆಯಾಗಿದ್ದಳು. ಇದರಿಂದ ಆತಂಕಗೊಂಡಿದ್ದ ಆಕೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಇದರ ನಡುವೆ ಡಿ.25ರಂದು ಬೆಳಗ್ಗೆ 6.30ರ ಸುಮಾರಿಗೆ ಸಮೀಪದ ಪಾದಾಪುರದ ಮೊಬೈಲ್ ಟವರ್ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಆ ಯುವತಿ ಪತ್ತೆಯಾಗಿದ್ದಳು. ನಂತರ ಆಕೆಯನ್ನು ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸಂತ್ರಸ್ತೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾಳೆ.

ಇದಾದ ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆಗ ಈ ವರದಿಯಲ್ಲಿ ಯುವತಿ ಬಲಾತ್ಕಾರಕ್ಕೆ ಒಳಗಾಗಿದ್ದು ದೃಢಪಟ್ಟಿದೆ. ಜೊತೆಗೆ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದರಿಂದ ಆಕೆಯ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಿಂದ ಬಯಲಾಗಿದೆ. ಆದ್ದರಿಂದ ಇದು ಗಂಭೀರ ಪ್ರಕರಣ ಎಂದು ಪರಿಗಣಿಸಿದ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.

ನಡೆದಿದ್ದೇನು ಏನು?: ಈ ತನಿಖೆಯ ಭಾಗವಾಗಿ ಆರೋಪಿಗಳಾದ ಬುಧ್ರು ಮತ್ತು ಬಿಜು ರಾಮ್​ನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ನಂತರ ವಿಚಾರಣೆ ಒಳಪಡಿಸಲಾಗಿದ್ದು, ಆರಂಭದಲ್ಲಿ ಕೃತ್ಯದಿಂದ ನುಣುಚಿಕೊಳ್ಳಲು ಯತ್ನಿಸಿದ್ದಾರೆ. ಆದರೆ, ವಿಚಾರಣೆ ತೀವ್ರಗೊಂಡ ನಂತರ ಇಬ್ಬರೂ ಕಾಮುಕರು ಇಡೀ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

ಆರೋಪಿ ಬುಧ್ರುವಿಗೆ ಈಗಾಗಲೇ ಮದುವೆಯಾಗಿದೆ. ಆದರೆ, ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದ 22 ವರ್ಷದ ಯುವತಿಯೊಂದಿಗೆ ಹಲವು ದಿನಗಳಿಂದ ಆತ ಸಂಬಂಧ ಹೊಂದಿದ್ದ. ಅಂತೆಯೇ, 24ರಂದು ಸ್ನೇಹಿತ ಬಿಜು ರಾಮ್ ಒಯಾಮಿ ಜೊತೆ ಬೈಕ್​ನಲ್ಲಿ ಯುವತಿಯನ್ನು ಕಾಡಿನ ಕಡೆಗೆ ಕರೆದುಕೊಂಡು ಹೋಗಿದ್ದ ಎಂದು ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಬಚೇಲಿ ಪೊಲೀಸ್​ ಸ್ಟೇಷನ್ ಇನ್‌ಚಾರ್ಜ್ ಗೋವಿಂದ್ ಯಾದವ್ ತಿಳಿಸಿದ್ದಾರೆ.

ಕಾಡಿನ ಕಡೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ಮೂವರೂ ಸಹ ಒಟ್ಟಿಗೆ ಕುಳಿತು ಮದ್ಯ ಸೇವಿಸಿದ್ದಾರೆ. ಮದ್ಯ ಕುಡಿದಿದ್ದ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಗ ಬೈಕ್‌ನಲ್ಲಿ ಕೂರಿಸಲು ಯತ್ನಿಸಿದರೂ ನಶೆಯಲ್ಲಿ ತೇಲಾಡುತ್ತಿದ್ದ ಯುವತಿ ಮರಳಿ ನೆಲಕ್ಕೆ ಬಿದ್ದಿದ್ದಾಳೆ. ಯುವತಿಯ ಪ್ರಜ್ಞಾಹೀನತೆಯ ಲಾಭ ಪಡೆದು ಆರೋಪಿ ಬುಧ್ರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯನ್ನು ಅಲ್ಲೇ ಬಿಟ್ಟು ಇಬ್ಬರೂ ಪರಾರಿಯಾಗಿದ್ದರು. ಇತ್ತ, ರಾತ್ರಿಯಿಡೀ ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿ ಅದೇ ಸ್ಥಳದಲ್ಲಿ ಬಿದ್ದಿದ್ದಳು. ಮರುದಿನ ಗ್ರಾಮಸ್ಥರು ಯುವತಿಯನ್ನು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ವಿವರಿಸಿದ್ದಾರೆ.

RELATED ARTICLES

ಪ್ರೇಮಿಗಳಿಗೆ ರೂಂ ಕೊಟ್ಟು ಖಾಸಗಿ ವೀಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‍ಮೇಲ್ ; ಇಬ್ಬರು ಅಂದರ್..!

ವಿವೇಕವಾರ್ತೆ : ಬೆಂಗಳೂರಿನ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿರುವ ಹೋಟೆಲ್​ನಲ್ಲಿ ಪ್ರೇಮಿಗಳ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​ ಮೇಲ್ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಗೋಕಾಕ : ಗುರುವಾರ ಮಧ್ಯರಾತ್ರಿ ಅಮವಾಸ್ಯೆ ಹಿನ್ನೆಲೆ ಮನೆ...

ಗನ್​ ತೋರಿಸಿ ಮಹಿಳಾ ಕಾನ್ಸ್​ಟೇಬಲ್​​​ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ : ಪ್ರಕರಣ ದಾಖಲು

ವಿವೇಕವಾರ್ತೆ : ಮಹಿಳಾ ಪೊಲೀಸ್​ ಪೇದೆ ಮೇಲೆ ಸಹೋದ್ಯೋಗಿಯೇ ಹಲವು ಬಾರಿ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಲ್ಲಿನ ಸ್ವರ್ಗೇಟ್​ ಪೊಲೀಸ್​ ಕಾಲೋನಿಯನ್ನು ಗನ್​ನಿಂದ ಬೆದರಿಸಿ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​​​​​...

ಬೆಂಗಳೂರಲ್ಲಿ ‘ಕಾಮುಕ ಟೆಕ್ಕಿ’ ಅಂದರ್ : ಚೆಂದ ಚೆಂದದ ಆಂಟಿಯರೇ ಈತನ ಟಾರ್ಗೆಟ್.!

ವಿವೇಕವಾರ್ತೆ : ಬೆಂಗಳೂರಿನಲ್ಲೊಬ್ಬ ಕಾಮುಕ ಟೆಕ್ಕಿ ಪೊಲೀಸರ ಬಲೆಗೆ ಬಿದ್ದಿದ್ದು, ಈತನ ಕಥೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ.ಚೆಂದ ಚೆಂದದ ಫೋಟೋ ಹಾಕುವ ಆಂಟಿಯರಿಗೆ ರಿಕ್ವೆಸ್ಟ್ ಕಳುಹಿಸುತ್ತಿದ್ದ ಕಾಮುಕ ಫೈಜಲ್ ಎಂಬಾತನನ್ನು ಪೊಲೀಸರು...
- Advertisment -

Most Popular

ಭಾರತದಲ್ಲಿ ಈ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಹೆಚ್ಚು ʻಅಶ್ಲೀಲ ಚಿತ್ರʼ ವೀಕ್ಷಿಸುತ್ತಾರೆ : ತಜ್ಞರಿಂದ ಆತಂಕಕಾರಿ ಮಾಹಿತಿ.!

ವಿವೇಕ ವಾರ್ತೆ : ಭಾರತದಲ್ಲಿ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪೋರ್ನ್ ವೀಕ್ಷಿಸುತ್ತಿದ್ದಾರೆ. ಚಿಕ್ಕ ಮಕ್ಕಳು ಪೋರ್ನ್ ನೋಡುತ್ತಿದ್ದು, ಅಶ್ಲೀಲತೆಗೆ ಗುರಿಯಾಗುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಪೋರ್ನ್ ಸೈಟ್‌ಗಳನ್ನು ನಿರ್ಬಂಧಿಸುವ ನಿಯಮಗಳ ಹೊರತಾಗಿಯೂ,...

ಬುದ್ದಿಮಾತು ಹೇಳಿದ ಪೋಷಕರು ; ವಿಷ ಕುಡಿದು ಸಾವಿಗೀಡಾದ 19 ರ ಯುವತಿ.!

ವಿವೇಕವಾರ್ತೆ : ಪೋಷಕರು ಬುದ್ಧಿವಾದ ಹೇಳಿದ್ದರಿಂದ ನೊಂದ ಬಿ.ಎ ಪದವಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಗ್ರಾ.ಪಂ. ವ್ಯಾಪ್ತಿಯ ಹರಾವರಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು...

ನೋಡ ನೋಡುತ್ತಿದ್ದಂತೆಯೇ ಹೂವು ನುಂಗುವ ಗಣೇಶ ಮೂರ್ತಿ ; ಅಚ್ಚರಿಯ ವಿಡಿಯೋ ವೈರಲ್.!

ವಿವೇಕವಾರ್ತೆ : ಗಣೇಶನ ಮೂರ್ತಿ ಹಾಲು ಕುಡಿಯೋದನ್ನ ಕೇಳಿದ್ದೇನೆ, ನೀರು ಕುಡಿಯೋದನ್ನು ಕೇಳಿದ್ದೇವೆ. ಆದರೆ ಇಲ್ಲೋಬ್ಬ ಗಣೇಶ ತನಗೆ ಇಡಿಸಿದ ಹೂವನ್ನೇ ನುಂಗುತ್ತಿದ್ದಾನೆ. ಹೌದು, ಇಂಥದೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಲೋಕಾಯುಕ್ತ ಬಲೆಗೆ ಬಿದ್ದ BBMP ಸಹಾಯಕ ಕಂದಾಯ ಅಧಿಕಾರಿ.!

ವಿವೇಕವಾರ್ತೆ : ಬಿಬಿಎಂಪಿಯ ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ ಚಂದ್ರಪ್ಪ ಬೀರಜ್ಜನವರ್ ಮತ್ತು ಗೋಪಾಲ್...
error: Content is protected !!