ವಿವೇಕವಾರ್ತೆ: ಹಮಾಸ್ ಉಗ್ರರು (Hamas Terrorist) ಇಸ್ರೇಲ್‍ನಲ್ಲಿ ಅಟ್ಟಹಾಸ ಮೆರೆಯುತ್ತಿದ್ದು, ಇದೀಗ ಯುವತಿಯೊಬ್ಬಳನ್ನು ಅಪಹರಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Noa was partying in the south of Israel in a peace music festival when Hams terrorists kidnapped her and dragged her from Israel into Gaza.
Noa is held hostage by Hamas.
She could be your daughter, sister, friend.#BringBackOurFamily pic.twitter.com/gi2AStVdTQ
— Hen Mazzig (@HenMazzig) October 7, 2023
ವೀಡಿಯೋದಲ್ಲಿ ಯುವತಿ ನನ್ನನ್ನು ಕೊಲ್ಲಬೇಡಿ ಎಂದು ಅಳುತ್ತಾ ಕೂಗುತ್ತಿರುವ ದೃಶ್ಯ ಮನಕಲಕುವಂತಿದೆ. ಈ ವೀಡಿಯೋವನ್ನು ಹೆನ್ಸ್ ಮಜೀಗ್ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅವನು ನಿಮ್ಮ ಮಗಳು, ಸಹೋದರಿ, ಗೆಳತಿಯೂ ಆಗಿರಬಹುದು ಎಂದು ಬರೆದುಕೊಂಡಿದ್ದಾರೆ.
Related Content
ವೀಡಿಯೋದಲ್ಲೇನಿದೆ..?: ಹಮಾಸ್ ಉಗ್ರರು ಯುವತಿಯನ್ನು ಅಪಹರಿಸಿ ಬೈಕಿನಲ್ಲಿ ಮಧ್ಯದಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಈ ವೇಳೆ ಯುವತಿ ನನ್ನನ್ನು ಕೊಲೆ ಮಾಡಬೇಡಿ, ನನ್ನನ್ನು ಕಾಪಾಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುವ ದೃಶ್ಯವನ್ನು ಕೂಡ ನಾವು ಕಾಣಬಹುದಾಗಿದೆ.
ಇಸ್ರೇಲ್‍ನಲ್ಲಿ ಫೀಸ್ ಮ್ಯೂಸಿಕ್ ಹಬ್ಬ ನಡೆಯುತ್ತಿತ್ತು. ಈ ಹಬ್ಬದಲ್ಲಿ ಯುವತಿ ನೋವಾ ಭಾಗಿಯಾಗಿದ್ದಳು. ಅಲ್ಲಿಂದ ಹಮಾಸ್ ಉಗ್ರರು ಆಕೆಯನ್ನು ಕಿಡ್ನಾಪ್ ಮಾಡಿ ಇಸ್ರೇಲ್‍ನಿಂದ ಗಾಜಾಕ್ಕೆ ಎಳೆದುಕೊಂಡು ಹೋಗಿ, ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ವೀಡಿಯೋ ನೋಡಿದ ಅನೇಕರು, ಇವರಿಗೆ ನೈತಿಕತೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಸ್ರೇಲ್‍ಗಾಗಿ ಪ್ರಾರ್ಥಿಸುವಂತೆ ಅನೇಕರು ಮನವಿ ಮಾಡಿದ್ದಾರೆ. ಮಹಿಳೆ ಮಕ್ಕಳ ಮೇಲೆ ಈ ರೀತಿಯ ವರ್ತನೆ ಸರಿಯಲ್ಲ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.