ವಿವೇಕವಾರ್ತೆ : ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ವಾರದ ಏಳು ದಿನಕ್ಕೂ ಒಬ್ಬ ದೇವರಿಗೆ ಮೀಸಲಿಡಲಾಗುತ್ತದೆ. ಅದರಂತೆ ಶನಿವಾರ ಶನೇಶ್ವರ (ಶನೀಶ್ವರ) ದಿನ. ಈ ಶನಿವಾರದ ಸ್ವಭಾವವು ಭೀಕರವಾಗಿದೆ. ಧರ್ಮಗ್ರಂಥಗಳ ಪ್ರಕಾರ ಶನಿವಾರವನ್ನು ನ್ಯಾಯ ಮತ್ತು ಕರ್ಮದ ದೇವರಾದ ಶನೇಶ್ವರನಿಗೆ ಸಮರ್ಪಿಸಲಾಗಿದೆ.
ಶನೇಶ್ವರನ ಆಶೀರ್ವಾದ ಪಡೆದ ಯಾವುದೆ ವ್ಯಕ್ತಿ ತನ್ನ ಜೀವನದಲ್ಲಿ ಯಾವುದಕ್ಕೂ ಕೊರತೆ ಅನ್ನುವುದೇ ಇರೋದಿಲ್ಲ ಅಂತ ಎಂದು ನಂಬುತ್ತಾನೆ. ಹೀಗಾಗಿ ಯಶಸ್ಸು ಅವರ ಅಡಿಯಲ್ಲಿ ಅಡಗಿದೆ ಎಂಬ ನಂಬಿಕೆ. ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂಬುದು ನಂಬಿಕೆ.
ಹಾಗಾದರೆ ಶನಿವಾರ ಏನ್ನೇಲ್ಲಾ ಮಾಡಬಾರದು ಅಂತ ಗೊತ್ತೇ.?
* ಎಣ್ಣೆಯನ್ನು ಕೊಳ್ಳಬೇಡಿ : ಶನಿವಾರದಂದು ತಪ್ಪಾಗಿಯೂ ಹರಳೆಣ್ಣೆ ಅಥವಾ ಇನ್ನಾವುದೇ ಎಣ್ಣೆಯನ್ನು ಖರೀದಿಸಬೇಡಿ. ಎಣ್ಣೆಯನ್ನು ಖರೀದಿಸುವುದರಿಂದ ಮನೆಯಲ್ಲಿ ಬಡತನ ಬರುತ್ತದೆ ಎಂದು ನಂಬಲಾಗಿದೆ. ಅದೇ ಶನಿವಾರದಂದು ಎಣ್ಣೆಯನ್ನು ದಾನ ಮಾಡುವುದರಿಂದ ಒಳ್ಳೆಯ ಫಲಿತಾಂಶ ಬರುತ್ತದೆ. ವಿಶೇಷವಾಗಿ ಸಾಸಿವೆ ಎಣ್ಣೆ, ಅಥವಾ ಎಳ್ಳಿನ ಎಣ್ಣೆಯನ್ನು ದಾನ ಮಾಡುವುದರಿಂದ ಶನೇಶ್ವರನಿಗೆ ಸಂತೋಷವಾಗುತ್ತದೆ.
* ತಲೆ ಸ್ನಾನ ಮಾಡಬೇಡಿ : ಸುಮಾರು ಜನರಿಗೆ ಪ್ರತಿ ದಿನವೂ ತಲೆಗೆ ಸ್ನಾನ ಮಾಡುವ ಅಭ್ಯಾಸವಿರುತ್ತದೆ. ಆದರೆ ಶನಿವಾರದಂದು ಅಪ್ಪಿತಪ್ಪಿಯೂ ತಲೆಗೆ ಸ್ನಾನ ಮಾಡಬೇಡಿ. ವಿಶೇಷವಾಗಿ ಮಹಿಳೆಯರು ಈ ದಿನ ತಲೆ ಸ್ನಾನ ಮಾಡುವುದು ಅಶುಭ ಮತ್ತು ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ನಂಬಿಕೆ.
* ಕಬ್ಬಿಣದ ವಸ್ತುಗಳನ್ನು ಮನೆಗೆ ತರಬೇಡಿ : ಯಾವುದೇ ಕಬ್ಬಿಣದ ವಸ್ತುಗಳನ್ನು ಶನಿವಾರದಂದು ಮನೆಗೆ ತರಬೇಡಿ. ಅದು ಅಶುಭವೆಂದು ಪರಿಗಣಿಸಲಾಗುತ್ತದೆ. ಶನಿಯು ಕಬ್ಬಿಣದ ಆಯುಧವನ್ನು ಧರಿಸುತ್ತಾನೆ ಎಂದು ಪ್ರಾಚೀನ ಗ್ರಂಥಗಳು ಹೇಳುತ್ತವೆ, ಆದ್ದರಿಂದ ಕಬ್ಬಿಣವನ್ನು ಶನೀಶ್ವರನಿಗೆ ಸಂಬಂಧಿಸಿದ ಲೋಹವೆಂದು ಪರಿಗಣಿಸಲಾಗುತ್ತದೆ.
* ಮಾಂಸ ತಿನ್ನಬೇಡಿ : ಹಾಗೇಯೇ ಶನಿವಾರದಂದು ಯಾವುದೇ ಪ್ರಾಣಿಗಳಿಗೆ ಹಾನಿ ಮಾಡಬೇಡಿ, ನೀವು ಮಾಂಸಾಹಾರಿಗಳಾಗಿದ್ದರೆ ಇಂದು ತಪ್ಪಾಗಿಯೂ ಮಾಂಸಾಹಾರ ಸೇವಿಸಬೇಡಿ. ಬದಲಾಗಿ ನೀವು ಬಡವರಿಗೆ ಸಹಾಯ ಮಾಡುತ್ತೀರಿ. ಇದರಿಂದ ಶನಿ ದೇವರಿಗೆ ಸಂತೋಷವಾಗುತ್ತದೆ.
* ಮನೆಗೆ ಉಪ್ಪು ತರಬೇಡಿ : ಈ ದಿನದಂದು ಮನೆಗೆ ಉಪ್ಪು ತರಬಾರದು, ಶನಿವಾರದಂದು ಮನೆಗೆ ಉಪ್ಪನ್ನು ತರುವುದು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ, ಶನಿವಾರದಂದು ಉಪ್ಪನ್ನು ತಂದರೆ ಮನೆಯಲ್ಲಿ ಸಾಲ ಹೆಚ್ಚಾಗುತ್ತದೆ. ಮನೆಯಲ್ಲಿರುವ ಕುಟುಂಬದ ಸದಸ್ಯರು ಅನೇಕ ರೋಗಗಳಿಗೆ ತುತ್ತಾಗುತ್ತಾರೆ ಎಂದು ನಂಬಲಾಗಿದೆ.