spot_img
spot_img
spot_img
spot_img
spot_img

ದೇಹದ ಯಾವ ಭಾಗಗಳ ಮೇಲೆ ಹಲ್ಲಿ ಬಿದ್ದರೆ ಏನರ್ಥ ಗೊತ್ತಾ..? ಇಲ್ಲಿದೆ ಸಂಪೂರ್ಣ ಮಾಹಿತಿ ಹಿಂದೂ ಧರ್ಮದ 2 ಆಧಾರದೊಂದಿಗೆ

Published on

spot_img

ವಿವೇಕವಾರ್ತೆ : ಹಲ್ಲಿ ಮನುಷ್ಯನ ದೇಹದ ಮೇಲೆ ಬಿದ್ದರೆ ಶಕುನವೆಂಬುದು ಭಾರತದ ಹಳೆಯ ಕಾಲದ ಸಂಪ್ರದಾಯ. ದೇಹದ ವಿವಿಧ ಭಾಗಗಳ ಮೇಲೆ ಹಲ್ಲಿ ಬೀಳುವುದರಿಂದ ಯಾವ ಪರಿಣಾಮಗಳು ಉಂಟಾಗುತ್ತದೆಂದು ಗೌಳಿ ಪಠಣ ಶಾಸ್ತ್ರ ಜ್ಯೋತಿಷ್ಯದ ವಿಭಾಗವಾಗಿದೆ.

ಗೌಳಿ ಪಂಚಾಂಗದಲ್ಲಿ ಹಲ್ಲಿ ಮನಷ್ಯನ ದೇಹದ ವಿವಿಧ ಭಾಗಗಳ ಮೇಲೆ ಬೀಳುವುದರಿಂದ ಉಂಟಾಗುವ ಶಕುನದ ಬಗ್ಗೆ ವಿವರವಾದ ವ್ಯಾಖ್ಯಾನಗಳನ್ನು ನೀಡಲಾಗಿದೆ. ಸಮಯ ಹಾಗೂ ಮನುಷ್ಯನ ದೇಹದ ವಿವಿಧ ಭಾಗಗಳನ್ನು ಆಧರಿಸಿ ಇದರ ಪರಿಣಾಮ ಅರಿವಿಗೆ ಬರುತ್ತದೆ. ಕೆಲವು ದೇಹದ ಅಂಗಗಳ ಮೇಲೆ ಒಳ್ಳೆ ಶಕುನ ಹಾಗೂ ಕೆಲವು ಕೆಟ್ಟ ಅಂಗಗಳ ಮೇಲೆ ಬಿದ್ದರೆ ಕೆಟ್ಟ ಶಕುನ ಎಂದೂ ಗೌಳಿ ಪಂಚಾಂಗದಲ್ಲಿ ಹೇಳಲಾಗಿದೆಇನ್ನು, ಸಾಮಾನ್ಯವಾಗಿ ಪುರುಷನ ಬಲಭಾಗದ ಮೇಲೆ ಅಥವಾ ಮಹಿಳೆಯ ಎಡಭಾಗದ ಮೇಲೆ ಹಲ್ಲಿ ಬಿದ್ದರೆ ಶುಭ ಹಾಗೂ ಪುರುಷನ ಎಡ ಭಾಗದ ಮೇಲೆ ಅಥವಾ ಮಹಿಳೆಯ ಬಲಭಾಗದ ಮೇಲೆ ಬಿದ್ದರೆ ಅಶುಭ ಹಾಗೂ ಮನುಷ್ಯರಿಗೆ ಅನನುಕೂಲವಾಗುತ್ತದೆ ಎಂದು ಸಹ ಗೌಳಿ ಪಂಚಾಂಗದಲ್ಲಿ ಹೇಳಲಾಗಿದೆ.

🪷,ಇನ್ನೊಂದೆಡೆ, ರಾತ್ರಿ ವೇಳೆ ಹಲ್ಲಿ ಬಿದ್ದರೆ ಒಳ್ಳೆಯದೂ ಆಗಲ್ಲ ಅಥವಾ ಕೆಟ್ಟದೂ ಆಗಲ್ಲ ಎಂಬ ನಂಬಿಕೆ ಸಹ ಇದೆ.

ಪುರುಷನ ವಿವಿಧ ದೇಹದ ಭಾಗಗಳ ಮೇಲೆ ಹಲ್ಲಿ ಬೀಳುವುದು

ಪುರುಷ ಹಲ್ಲಿ

ದೇಹದ ಭಾಗ ಫಲಿತಾಂಶದ ವ್ಯಾಖ್ಯಾನ
ತಲೆ- ವಿವಾದ ತಲೆದೋರುವ ಸಾಧ್ಯತೆ
ತಲೆಯ ಮೇಲ್ಭಾಗ- ಸಾವಿನ ಭಯದ ಮುನ್ಸೂಚನೆ
ಮುಖ- ಅನಿರೀಕ್ಷಿತವಾಗಿ ಅಲ್ಪ ಸಂಪತ್ತು ದೊರೆಯಲಿದೆ!
ಎಡಗಣ್ಣು-ನೀವು ಒಳ್ಳೆಯ ಸುದ್ದಿಯನ್ನು ಕೇಳಲಿದ್ದೀರಿ
ಬಲಗಣ್ಣು-ನಿಮ್ಮ ಗುರಿ ತಲುಪಲು ವಿಫಲವಾಗಲಿದ್ದೀರಿ
ಹಣೆ-ನಿಮ್ಮ ಪ್ರಿಯತಮೆಯಿಂದ ನೀವು ಪ್ರತ್ಯೇಕಗೊಳ್ಳಲಿದ್ದೀರಿ
ಕೆನ್ನೆಯ ಬಲಭಾಗ- ನೀವು ಕೆಟ್ಟ ಸುದ್ದಿಯನ್ನು ಕೇಳಲಿದ್ದೀರಿ
ಎಡ ಕಿವಿ-ನಿಮಗೆ ಧನಲಾಭವಾಗಲಿದ್ದು ಅದೃಷ್ಟ ದೊರೆಯಲಿದೆ
ತುಟಿಯ ಮೇಲ್ಭಾಗ-ಜಗಳ ಸನ್ನಿಹಿತವಾಗಿದೆ
ತುಟಿಯ ಕೆಳಭಾಗ-ಶೀಘ್ರದಲ್ಲೇ ಆರ್ಥಿಕ ಲಾಭ ಸಾಧ್ಯತೆ,
ಒಟ್ಟಿಗೆ ಎರಡೂ ತುಟಿಯ ಮೇಲೆ- ಬಿದ್ದರೆ ಯಾರದ್ದೋ ಸಾವಿನ ಸುದ್ದಿಯನ್ನು ಕೇಳಲಿದ್ದೀರಿ
*ಬಾಯಿ* ನಿಮ್ಮ ಆರೋಗ್ಯ ಹದಗೆಡುವ ಭೀತಿ
*ಎಡಭಾಗದ ಬೆನ್ನು* ನಿಮಗೆ ಸ್ವಲ್ಪ ಯಶಸ್ಸು ಅಥವಾ ಲಾಭಗಳು ಸಿಗಲಿದೆ
ನಿಮ್ಮ ಕನಸಿನಲ್ಲಿ ಬಿದ್ದರೆ ಸರಕಾರದ ಮೇಲೆ ಭಯ
*ಮಣಿಕಟ್ಟು* ಶೀಘ್ರದಲ್ಲೇ ಮನೆ ರಿಪೇರಿ ಅಥವಾ ನವೀಕರಣ ಯೋಜನೆ ಕೈಗೆತ್ತಿಕೊಳ್ಳುವ ಸಾಧ್ಯತೆ
ತೋಳು ಆರ್ಥಿಕ ನಷ್ಟ ಸಾಧ್ಯತೆ

*ಬೆರಳುಗಳು* ನೀವು ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ
*ಬಲಭಾಗದ ತೋಳು* ನಿಮಗೆ ಕೆಲವು ತೊಂದರೆಗಳು ಬರುತ್ತಿವೆ
*ಎಡಭಾಗದ ತೋಳು* ನೀವು ಸ್ವಲ್ಪ ಅವಮಾನಗಳನ್ನು ಎದುರಿಸಬೇಕಾಗುತ್ತದೆ
*ತೊಡೆ* ನೀವು ಉಡುಪನ್ನು ಕಳೆದುಕೊಳ್ಳಲಿದ್ದೀರಿ
ಮೀಸೆ ನಿಮಗೆ ಕಷ್ಟ ಕಾಲ ಎದುರಾಗಲಿದೆ
*ಪಾದ* ನೀವು ಸವಾಲಿನ ಅವಧಿಯನ್ನು ಎದುರಿಸಲಿದ್ದೀರಿ
*ಪಾದದ ಹಿಂಭಾಗ* ಪ್ರಯಾಣಕ್ಕೆ ಸಿದ್ಧರಾಗಿ
ಕಾಲಿನ ಬೆರಳುಗಳು ಕೆಲವು ರೀತಿಯ ದೈಹಿಕ ಕಾಯಿಲೆಗಳು ಬರಬಹುದು

ಹೆಣ್ಣು ಮಕ್ಕಳಿಗೆ ಹಲ್ಲಿಯ ಶಕುನ

ಮಹಿಳೆ ಹಲ್ಲಿ

*ತಲೆ* ಸಾವಿನ ಭಯ
ಜಡೆ ಕೆಲ ಅನಾರೋಗ್ಯದ ಬಗ್ಗೆ ಗೊಂದಲಗಳು ಇರಲಿವೆ
*ಎಡಗಣ್ಣು* ನಿಮ್ಮ ಪತಿ ಅಥವಾ ನಿಮ್ಮ ಪ್ರಿಯತಮ ನಿಮ್ಮನ್ನು ಪ್ರೀತಿಸಲಿದ್ದಾರೆ
*ಬಲಗಣ್ಣು* ನೀವು ಅಲ್ಪ ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ
*ಕೆನ್ನೆಯ ಬಲಭಾಗ* ನಿಮಗೆ ಗಂಡು ಮಗುವಾಗಲಿದೆ
*ಬಲ ಕಿವಿಯ ಮೇಲ್ಭಾಗ* ಅಲ್ಪ ಆರ್ಥಿಕ ಲಾಭ
ತುಟಿಯ ಮೇಲ್ಭಾಗ ನೀವು ಕೆಲವು ವಿವಾದಗಳನ್ನು ಎದುರಿಸಲಿದ್ದೀರಿ
*ತುಟಿಯ ಕೆಳಭಾಗ* ನೀವು ಕೆಲವು ಹೊಚ್ಚ ಹೊಸ ವಸ್ತುಗಳನ್ನು ಪಡೆದುಕೊಳ್ಳಲಿದ್ದೀರಿ
*ಹಿಂಭಾಗ* ನೀವು ಸಾವಿನ ಸುದ್ದಿಯನ್ನು ಕೇಳಲಿದ್ದೀರಿ
ಉಗುರುಗಳು ಸಂಘರ್ಷ ಅಥವಾ ವಿವಾದ ಎದುರಾಗಲಿದೆ.

ಕೈಗಳು ಅಲ್ಪ ಆರ್ಥಿಕ ಲಾಭ ಸಾಧ್ಯತೆ
*ಎಡಗೈ* ಕೆಲವು ರೀತಿಯ ಮಾನಸಿಕ ಒತ್ತಡ
*ಬೆರಳುಗಳು* ನಿಮಗೆ ಸ್ವಲ್ಪ ಆಭರಣಗಳು ದೊರೆಯಲಿದೆ
ಬಲಗೈ ರೊಮ್ಯಾಂಟಿಕ್‌ ಕ್ಷಣಗಳು ನಿಮ್ಮ ಮುಂದಿವೆ
*ಭುಜ* ನಿಮಗೆ ಸ್ವಲ್ಪ ಆಭರಣಗಳು ದೊರೆಯಲಿದೆ
*ತೊಡೆ* ನೀವು ಪ್ರಣಯವನ್ನು ಎದುರಿಸಲಿದ್ದೀರಿ
ಮಂಡಿ ನೀವು ಸ್ವಲ್ಪ ಪ್ರೀತಿಯನ್ನು ಸ್ವೀಕರಿಸುತ್ತೀರಿ
*ಹಿಮ್ಮಡಿ* ಕೆಲವು ತೊಂದರೆ ಅಥವಾ ಸಂಕೀರ್ಣತೆಯು ಹಾದಿಯಲ್ಲಿದೆ
*ಕಾಲಿನ ಕೆಳಭಾಗದ ಹಿಂಭಾಗ* ಮನೆಗೆ ಕೆಲ ಅತಿಥಿಗಳು ಭೇಟಿ ನೀಡಲಿದ್ದಾರೆ
*ಬಲಗಾಲು* ನಿಮಗೆ ಕೆಲವು ಸೋಲು ಅಥವಾ ವಿಫಲತೆಗಳು ಎದುರಾಗಲಿದೆ
*ಕಾಲ್ಬೆರಳುಗಳು* ನೀವು ಗಂಡು ಮಗುವಿಗೆ ತಾಯಿಯಾಗಲಿದ್ದೀರ ಎಂದು ಅರ್ಥ.

ವಿವೇಕವಾರ್ತೆ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ದೇಹದ ಮೇಲೆ ಪಲ್ಲಿ ಈ ರೀತಿ ಬಿದ್ದರೆ ಅದರಿಂದ ಉಂಟಾಗುವಂತಹ ಶಕುನ ಯಾವುದು ಎಂಬುದನ್ನು ಇಂದೇ ತಿಳಿದುಕೊಳ್ಳಿ…ಶಕುನ ಗಳಲ್ಲಿ ಒಳ್ಳೆಯ ಶಕುನ ಮತ್ತು ಕೆಟ್ಟ ಶಕುನ ಎಂಬ ಎರಡು ವಿಧಾನಗಳು ಇರುತ್ತದೆ ಶಾಸ್ತ್ರಗಳ ಪ್ರಕಾರ ಯಾವ ವಿಚಾರ ನಡೆದರೆ ಒಳ್ಳೆಯ ಶಕುನ ಏರ್ಪಡುತ್ತದೆ ಹಾಗೂ ಯಾವ ವಿಚಾರ ನಡೆದರೆ ನಡೆಯುತ್ತದೆ ಎಂಬುದನ್ನು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಅವುಗಳಲ್ಲಿ ಪಲ್ಲಿಯೂ ಕೂಡ ಬಹಳ ಮುಖ್ಯವಾದದ್ದು ಅಂತನೇ ಹೇಳಬಹುದು ಸಾಕಷ್ಟು ಜನ ಪಲ್ಲಿಯನ್ನು ನೋಡಿದರೆ ಸಾಕು ಎದರುತ್ತಾರೆ ಅಲ್ಲಿಂದ ಓಡಿ ಹೋಗುತ್ತಾರೆ.

ಆದರೆ ಕೆಲವೊಮ್ಮೆ ಪಲ್ಲಿಗಳಿಂದಲೂ ಕೂಡ ನಮ್ಮ ಜೀವನದಲ್ಲಿ ಶುಭ ಶಕುನಗಳ ನಡೆಯುತ್ತದೆ ಎಂಬುದನ್ನು ಪಂಡಿತರು ತಮ್ಮ ಶಾಸ್ತ್ರಗಳು ಮತ್ತು ಉಲ್ಲೇಖಗಳಲ್ಲಿ ರಚಿಸಿದ್ದಾರೆ. ಹೌದು ನಿಮಗೆ ಪಲ್ಯಗಳು ಗೋಚರಿಸಿದಾಗ ಅಥವಾ ನಿಮ್ಮ ದೇಹದ ಕೆಲವು ಭಾಗದ ಮೇಲೆ ಬಲ್ಲಿಗಳು ಬಿದ್ದಾಗ ಅವುಗಳಿಂದ ಹಲವರು ನಿಮ್ಮ ಜೀವನದಲ್ಲಿ ಶುಭ ಶಕುನಗಳು ಜರಗುತ್ತದೆ ಎಂದು ಪಂಡಿತರು ತಿಳಿಸಿದ್ದಾರೆ.

ಹಲ್ಲಿಗಳು ನೀವು ಯಾವುದಾದರೂ ಕೆಲಸಕ್ಕೆ ಹೋಗಿ ಮುಗಿಸಿಕೊಂಡು ಮನೆಗೆ ಬಂದಾಗ ನೀವು ಹಲ್ಲಿ ಯನ್ನು ನೋಡಿದರೆ ಆ ಕೆಲಸ ಆಗುವುದಿಲ್ಲ. ಆ ಕೆಲಸದಲ್ಲಿ ನಿಮಗೆ ನಷ್ಟವಾಗುತ್ತದೆ. ಆದ್ದರಿಂದ ಆದಷ್ಟು ನೀವು ಮನೆಗೆ ಬಂದಾಗ ಮನೆಯ ಮೇಲೇ ನೋಡುವುದನ್ನು ಮಾಡುವುದನ್ನು ತಪ್ಪಿಸಿ. ಇನ್ನು ಮನೆಯಲ್ಲಿ ಹಲ್ಲಿ ನಿಮ್ಮ ಮೇಲೆ ಬಿದ್ದರೆ ಮತ್ತು ತಲೆಯ ಮೇಲೆ ಬಿದ್ದರೆ ನಿಮ್ಮ ಕಷ್ಟಗಳ ಮುನ್ಸೂಚನೆಯನ್ನು ತೋರಿಸುತ್ತದೆ.

ಮುಂದೆ ನಿಮಗೆ ಬಹಳಷ್ಟು ದೊಡ್ಡ ಕಷ್ಟ ಬರುತ್ತದೆ ಹಾಗೂ ಯಾವುದೋ ಗಂಡಾಂತರ ನಿಮಗೆ ಕಾದಿದೆ ಅಂತ ಹಲ್ಲಿ ಈ ರೀತಿಯ ಮುನ್ಸೂಚನೆಯನ್ನು ಕೊಡುತ್ತದೆ. ಒಂದು ವೇಳೆ ಪಲ್ಲಿ ನಿಮ್ಮ ಬಲ ಭುಜದ ಮೇಲೆ ಬಿದ್ದರೆ ನಿಮಗೆ ಯಾವುದೋ ಒಂದು ರೀತಿಯಿಂದ ಹಣ ಬರುತ್ತದೆ ಹಾಗೂ ಲಾಭ ಸಿಗುತ್ತದೆ ಎನ್ನುವ ಮುನ್ಸೂಚನೆಯನ್ನು ಕೊಡುತ್ತದೆ.

ಒಂದು ವೇಳೆ ಹೊಸ ಮನೆಯನ್ನು ತೆಗೆದುಕೊಳ್ಳುವಾಗ ಅಥವಾ ಬಾಡಿಗೆ ಮನೆಗೆ ಹೋದಾರೆ. ಇಂತಹ ಸಮಯದಲ್ಲಿ ಪಲ್ಲಿ ಸತ್ತು ಬಿದ್ದಿರುವುದನ್ನು ನೋಡಿದರೆ ಇದು ಬಹಳಷ್ಟು ಕೆಟ್ಟದ್ದು. ಯಾವುದೇ ಕಾರಣಕ್ಕೂ ಸಹ ಅಂತಹ ಮನೆಗೆ ಹೋಗಬೇಡಿ. ಒಂದು ವೇಳೆ ಅಂತಹ ಮನೆಗೆ ಹೋದರೆ ಆರೋಗ್ಯದಲ್ಲಿ ಏರುಪೇರು ಆಗುತ್ತದೆ ಮತ್ತು ಹಲವಾರು ರೀತಿಯ ನಷ್ಟಗಳನ್ನು ನೀವು ಅನುಭವಿಸಬೇಕಾಗುತ್ತದೆ.

PSI Exam Guidelines: ಜನವರಿ 23ರಂದು ಪಿಎಸ್‌ಐ ಪರೀಕ್ಷೆ: ಪುರುಷ & ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾರ್ಗಸೂಚಿ!

ಈ ಮೇಲಿನ ಸಂಪೂರ್ಣ ಅಂಕಣವು ಅಂತರ್ಜಾಲ ದಿಂದ ಪಡೆದ ಮಾಹಿತಿಯಾಗಿದೆ, ಹಾಗೂ ವಿವೇಕವಾರ್ತೆ ಇದನ್ನೂ ದೃಡಿಕರಿಸುವುದಿಲ್ಲ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ನಿಮಗೆ ಪಿತ್ರಾರ್ಜಿತ ಆಸ್ತಿ ಸಿಕ್ಕಾಗ ಮಾಡಲೇಬೇಕಾದ ಕೆಲಸ- ಇದು ಮಾಡಿದ್ರೆ 100 % ಸೇಫ್

ವಿವೇಕವಾರ್ತೆ : ನಮ್ಮ ದೇಶದಲ್ಲಿ ಆಸ್ತಿಯ ವಿಚಾರಕ್ಕೆ ಬಂದರೆ ಅಲ್ಲಿ ಭಿನ್ನ ಭಿನ್ನವಾದ ವಿಭಾಗಗಳು ಇರುತ್ತವೆ ಹಾಗೂ ಸಾಕಷ್ಟು...

ಅಪ್ಪಿಕೊಳ್ಳೋದ್ರಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಬೆನಿಫಿಟ್ – ಇಲ್ಲಿದೆ ಮಾಹಿತಿ!

ಪ್ರೀತಿ, ಸ್ನೇಹ, ಭರವಸೆ ಮತ್ತು ಬೆಂಬಲವನ್ನು ವ್ಯಕ್ತಪಡಿಸುವ ದೇಹ ಭಾಷೆಯೇ ಅಪ್ಪುಗೆ. ಬನ್ನಿ ಇಂದು ಅಪ್ಪುಗೆಯ ಆರೋಗ್ಯ ಪ್ರಯೋಜನಗಳೇನು ಎಂದು...

ಬೆಡ್ ರೂಂನಲ್ಲಿ ಅತ್ತಿಗೆಯ ಪ್ರಿಯಕರನನ್ನ ಹೊಡೆದು ಕೊಂದ ಮೈದುನ!

ವಿವೇಕವಾರ್ತೆ: ಪ್ರಿಯತಮೆಯ ಭೇಟಿ ಮಾಡಲು ಮನೆಗೆ ನುಗ್ಗಿದ ಪ್ರಿಯಕರನನ್ನು ಆಕೆಯ ಮೈದುನ ರಾಡ್ ನಿಂದ ಹೊಡೆದು ಬರ್ಬರವಾಗಿ ಕೊಲೆ...

ಮದ್ವೆಯಾದ 2 ವರ್ಷದಿಂದ ಸರಸಕ್ಕೆ ಒಪ್ಪದ ಗಂಡ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಪತ್ನಿ

ವಿವೇಕವಾರ್ತೆ : ದೈಹಿಕ ಸಂಬಂಧಕ್ಕೆ ಒಪ್ಪದ ಗಂಡನ ವಿರುದ್ಧ ಆಕ್ರೋಶಗೊಂಡಿರುವ ಮಹಿಳೆಯೊಬ್ಬಳು ಠಾಣೆಯ ಮೆಟ್ಟಿಲೇರಿ ಎಫ್​ಐಆರ್​ ದಾಖಲಿಸಿರುವ ವಿಚಿತ್ರ...
error: Content is protected !!