ವಿವೇಕವಾರ್ತೆ: ಪಂಚಮಸಾಲಿ 2ಎ ಮೀಸಲಾತಿ ಅನುಷ್ಠಾನ ವಿಚಾರ ‘ ಧಾರವಾಡದಲ್ಲಿ ಕೂಡಲಸಂಗಮ ಪೀಠದ ಬಸವಜಯ ಮೃತುಂಜಯ ಸ್ವಾಮೀಜಿ ಮಾತನಾಡಿ ‘ ಲಿಂಗಾಯತ ಪಂಚಮಸಾಲಿ ಸಮಾಜ ದಾಸೋಹ ಸಮಾಜ, ಮೀಸಲಾತಿ ಸಿಗಬೇಕು ಎಂದು 3 ವರ್ಷದಿಂದ ಹೋರಾಡುತ್ತಿದ್ದೇವೆ.
ನಮ್ಮದು ನಿರಂತರ ಹೋರಾಟ, ಹಿಂದಿನ ಸರ್ಕಾರ ಮೀಸಲಾತಿ ಕೊಡಲು ವಿಳಂಬ ಮಾಡಿತು. ಆದ್ರೆ, ಹೋರಾಟ ಫ್ರೀಡಂ ಪಾರ್ಕ್ ನಲ್ಲಿ ನಡೆಯಿತು. 2D ಎಂದು ಆಗಿನ ಸರ್ಕಾರ ಘೋಷಣೆ ಮಾಡಿತ್ತು. ಅದಾದ ಮೇಲೆ ಚುನಾವಣೆ ಘೋಷಣೆಯಾಯಿತು. ಹೀಗಾಗಿ ಅದು ಅಲ್ಲಿಯೇ ನಿಂತಿದೆ. ಇದೀಗ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.