spot_img
spot_img
spot_img
spot_img
spot_img
spot_img

ಇಕ್ಕಟ್ಟಿನಲ್ಲಿ ಸಿಲುಕಿದ ದಾಸ ದರ್ಶನ್..! ಗೆಳತಿ ಪವಿತ್ರಗೌಡ ಪತ್ನಿ ವಿಜಯಲಕ್ಷ್ಮಿ ವಾರ್ ಶುರು..!? 10 ವರ್ಷದ ಮ್ಯಾಟರ್ ಏನು..?

Published on

spot_img

ವಿವೇಕವಾರ್ತೆ : ನಟ ದರ್ಶನ್ ಅವರು ಅಭಿನಯಿಸಿದ ಕಾಟೇರ ಸಿನಿಮಾ ಹಲವಾರು ರೆಕರ್ಡ್ ಮಾಡಿ ಬಾಕ್ಸ್ ಆಫಿಸ್ ಹಿಟ್ ಆಗಿದೆ, ಅದೇ ಖುಷಿಯಲ್ಲಿರುವಾಗಲೇ ಪಬ್ ವಿಚಾರವಾಗಿ ಪೋಲಿಸ್ ಠಾಣೆಯ ಮಟ್ಟಿಲು ಸಹ ಏರಿ ಬಂದಿದ್ರು. ಆದರೆ ಈಗ ಅವರ ವೈಯುಕ್ತಿಕ ಜೀವನಲ್ಲಿ ಸುಂಟರಗಾಳಿ ಎದ್ದಿದೆ. ಇದನ್ನೂ ಓದಿ :ರೈತರ ಖಾತೆಗೆ ಪಿ.ಎಂ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16ನೇ ಕಂತಿನ ಹಣ ಜಮಾ ಆಗಿದೆ!

ನಟಿ ಪವಿತ್ರಗೌಡ ನಿನ್ನೆ ಒಂದು ರಿಲ್ಸ್ ಶೇರ್ ಮಾಡಿದ್ದು ಅದರಲ್ಲಿ One decade down forever to go ಎಂದು ಬರೆದು ದರ್ಶನ ಹಾಗೂ ಅವರ ಫೋಟೋಗಳನ್ನ ಶೇರ್ ಮಾಡಿದ್ರು, ದರ್ಶನ ಪವಿತ್ರಗೌಡ ಜೊತೆಗೆ ಪೂಜೆಯಲ್ಲಿ ಕುಳಿತ ಫೋಟೊ ನೋಡಿದಾಕ್ಷಣ ಜನ ಮಾತನಾಡುವ ವರಸೆ ಬದಲಾಗಿದೆ, ಅಷ್ಟೇ ಅಲ್ಲದೆ ಇದನ್ನೂ ನೋಡಿದ ದರ್ಶನ ಪತ್ನಿ ವಿಜಯಲಕ್ಷ್ಮಿ ತಾವೂ ಸಹ ಒಂದು ಇನ್ಸಟಾಗ್ರಾಮ್ ಪೊಸ್ಟ್ ಹಾಕಿದ್ದು ಜಗಳ ಮೀತಿ ಮೀರಿದೆ ಎಂದು ಮೆಲ್ನೊಟಕ್ಕೆ ಕಾಣುತ್ತಿದೆ.

ಅನೇಕ ಚಾಲೆಂಜಸ್ ಎದುರಿಸಿ ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಎಂದು ಬಿರಿದು ಪಡೆದಿರುವ ದರ್ಶನ ತಮ್ಮ ವೈಯಕ್ತಿಕ ಜೀವನದ ಚಾಲೆಂಜ್ ಯಾವ ರೀತಿ ಎದುರಿಸುತ್ತಾರೆ ಎನ್ನುವುದು ಕಾಯ್ದು ನೋಡಬೇಕಾಗಿದೆ.

ಮನೆ ಇಲ್ಲದವರಿಗೆ ಸರ್ಕಾರದಿಂದ ಉಚಿತ ಸೈಟ್ ವಿತರಣೆ! ಇಲ್ಲಿದೆ ನೋಡಿ ಸಂಪೂರ್ಣವಾದ ವಿವರ

ಏನಿದು ಮ್ಯಾಟರ್ರು‌..?

ದರ್ಶನ್ ಹಾಗೂ ಪವಿತ್ರಗೌಡ, Darshan & Pavitragowda

ಕೆಲವು ದಿನಗಳ ಹಿಂದೆ ಪವಿತ್ರಾ ಗೌಡ ಅವರ ಮಗಳು ಖುಷಿ ಗೌಡ ಅವರ ಜನ್ಮದಿನವನ್ನು ದರ್ಶನ್ ಅವರು ಆಚರಿಸಿದ್ದರು. ಖುಷಿ ಗೌಡ ಜೊತೆಗೆ ಡ್ಯಾನ್ಸ್ ಮಾಡಿ ಕೇಕ್ ತಿನಿಸಿದ್ದರು. ಈ ವಿಡಿಯೋವನ್ನು ಪವಿತ್ರಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕಳೆದ ವರ್ಷ ಕೂಡ ದರ್ಶನ್ ಅವರ ಜನ್ಮದಿನವನ್ನು ಪವಿತ್ರಾ ಅವರು ಗ್ರ್ಯಾಂಡ್ ಆಗಿ ಆಚರಿಸಿದ್ದರು. ಈ ವಿಡಿಯೋವನ್ನು ನಟಿ ಮೇಘಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ, ಅದನ್ನು ಆಗಲೂ ವಿಜಯಲಕ್ಷ್ಮೀ ಅವರು ವಿರೋಧಿಸಿದ್ದರು.

ವಿಜಯಲಕ್ಷ್ಮೀ ದರ್ಶನ್ ಪೋಸ್ಟ್ ಏನು?

“ಬೇರೆಯವರ ಗಂಡನ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವಾಗ ಪವಿತ್ರಾ ಗೌಡ ಅವರು ಯೋಚನೆ ಮಾಡಬೇಕು ಎಂದು ನಾನು ಅಂದುಕೊಳ್ಳುತ್ತಿದ್ದೇನೆ. ಇದು ಅವರ ಕ್ಯಾರೆಕ್ಟರ್ ಏನು? ನೈತಿಕತೆ ಏನು ಎಂದು ತೋರಿಸುತ್ತದೆ. ಮದುವೆಯಾಗಿರುವ ಪುರುಷ ಎಂದು ಗೊತ್ತಿದ್ದರೂ ವೈಯಕ್ತಿಕ ಹಿತಾಸಕ್ತಿಗೋಸ್ಕರ ಅವರು ಈ ರೀತಿ ಮಾಡಿದ್ದಾರೆ. ಖುಷಿ ಗೌಡ ಅವರು ಪವಿತ್ರಾ, ಸಂಜಯ್ ಸಿಂಗ್ ಅವರ ಪುತ್ರಿ ಎನ್ನೋದನ್ನು ಈ ಫೋಟೋ ಸ್ಪಷ್ಟವಾಗಿ ಹೇಳುತ್ತದೆ. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಲು ಸೋಶಿಯಲ್ ಮೀಡಿಯಾವನ್ನು ನಾನು ಬಳಸೋದಿಲ್ಲ. ಆದರೆ ಈಗ ನನ್ನ ಕುಟುಂಬದ ಪರವಾಗಿ ನಾನು ಮಾತನಾಡಬೇಕಿದೆ, ಇಡೀ ಸಮಾಜಕ್ಕೆ ಬೇರೆ ಚಿತ್ರಣವನ್ನು ನೀಡುತ್ತಿರುವ ವ್ಯಕ್ತಿಗಳ ವಿರುದ್ಧ ನಾನು ಕಾನೂನು ಕ್ರಮವನ್ನು ಕೈಗೊಳ್ಳುತ್ತೇನೆ” ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಂದಹಾಗೆ ನಿನ್ನೆಯೇ ವಿಜಯಲಕ್ಷ್ಮೀ ಅವರು ದರ್ಶನ್ ಹಾಗೂ ಮಗ ವಿನೀಶ್ ಜೊತೆಗಿನ ಫೋಟೋವನ್ನು ಹಂಚಿಕೊಂಡು, ಎಂದೆಂದಿಗೂ ಫ್ಯಾಮಿಲಿ ಇರುವುದು ಎಂಬ ಅಡಿಬರಹ ನೀಡಿದ್ದರು. ಅದರ ನಂತರದಲ್ಲಿ ಪವಿತ್ರಾ ಅವರು ದರ್ಶನ್ ಜೊತೆಗಿನ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದರು. ಇದನ್ನು ಬೆಂಬಲಿಸಿ ದರ್ಶನ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಪವಿತ್ರ ಅವರ ಇನ್ಸಟಾಗ್ರಾಮ್ ಐಡಿ

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....

ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಮಹಿಳೆ ಅರೆಬೆತ್ತಲೆಗೊಳಿಸಿ ಹಲ್ಲೆ ಆರೋಪ

ವಿವೇಕವಾರ್ತೆ, ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ಬಹಿರಂಗವಾಗಿದೆ. ಒತ್ತುವರಿ ಪ್ರಶ್ನಿಸಿದ್ದಕ್ಕೆ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ...

Goat milk: ಮೇಕೆ ಹಾಲು ತಾಯಿ ಹಾಲಿನಷ್ಟೇ ಶ್ರೇಷ್ಠ: ನಾನಾ ಆರೋಗ್ಯ ಸಮಸ್ಯೆಗಳಿಗೆ ಇದರಲ್ಲಿದೆ ಪರಿಹಾರ..!

ಮಾರುಕಟ್ಟೆಯಲ್ಲಿ ಮೇಕೆ ಹಾಲಿಗೆ (Goat Milk) ಭಾರೀ ಡಿಮ್ಯಾಂಡ್ ಬಂದು ಬಹಳ ವರ್ಷಗಳೇ ಕಳೆಯಿತು. ಆದರೂ ಈ ಹಾಲಿನ...

ನಿಮ್ಮ ದೇಹದಲ್ಲಿ ಈ ಬದಲಾವಣೆ ಕಂಡು ಬಂದರೆ ಲಿವರ್ ಡ್ಯಾಮೇಜ್ ಎಂದರ್ಥ!

ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಿರುವ ಜನರ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಬಹುತೇಕ ಜನರಲ್ಲಿ ಲಿವರ್ ಸಂಬಂಧಿತ ಸಮಸ್ಯೆಗಳು ಕಂಡುಬರುತ್ತಿವೆ. ನಿಮ್ಮ...
error: Content is protected !!