spot_img
spot_img
spot_img
spot_img
spot_img

ಕಾಂಗ್ರೆಸ್ ನಿರ್ನಾಮ ಮಾಡಬೇಕೆಂದ ಶೆಟ್ಟರ್! – ಡಿಕೆಶಿ ಮಾತಲ್ಲೇ ಕೊಟ್ರೂ ಟಕ್ಕರ್!

Published on

spot_img

ಬೆಂಗಳೂರು:- ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಬೇಕು ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು,ಶೆಟ್ಟರ್ ಅವರು ಇಲ್ಲಿದ್ದಾಲೂ ಹಾಗೆಯೇ ಮಾತಾಡುತ್ತಿದ್ದರು, ಬಿಜೆಪಿಯನ್ನು ನಿರ್ನಾಮಗೊಳಿಸಬೇಕು ಅನ್ನುತ್ತಿದ್ದರು ಎಂದು ನಗುತ್ತಾ ಹೇಳಿದರು.

ಇನ್ನೂ ನಮ್ಮ ರಾಜಕಾರಣಿಗಳು ಎಷ್ಟು ಬೇಗ ಬಣ್ಣ ಬದಲಾಯಿಸುತ್ತಾರಲ್ಲಾ ಅಂತ ಆಶ್ಚರ್ಯವಾಗುತ್ತದೆ. ಮಾಜಿ ಮುಖ್ಯಮಂತ್ರಿ ಮತ್ತು ಈಗ ಪುನಃ ಬಿಜೆಪಿಯ ನಾಯಕನಾಗಿರುವ ಜಗದೀಶ್ ಶೆಟ್ಟರ್ ಕಳೆದ ವಾರದವರೆಗೆ ಮಾಧ್ಯಮ ಪ್ರತಿನಿಧಿಗಳನ್ನು ತಮ್ಮ ಮನೆಗೆ ಕರೆದು ಬಿಜೆಪಿ ನಾಯಕರನ್ನು ತೆಗಳುತ್ತಿದ್ದರು.

ಆರ್ ಅಶೋಕ್ ವಿರೋಧ ಪಕ್ಷದ ನಾಯಕನಾದಾಗ, ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷನಾದಾಗ ಅವರ ಕಟು ಟೀಕೆಗಳನ್ನು ಮಾಡಿದ್ದರು. ವಿಪಕ್ಷ ನಾಯಕನ ಆಯ್ಕೆ ನಡೆಯುವ ಮೊದಲು ಅವರು ಹೊಸ ಸರ್ಕಾರ ರಚನೆನಯಾಗಿ 7 ತಿಂಗಳಾದರೂ ಬಿಜೆಪಿ ನಾಯಕರಿಗೆ ಒಬ್ಬ ವಿರೋಧ ಪಕ್ಷನನ್ನು ಆಯ್ಕೆ ಮಾಡಿವುದು ಸಾಧ್ಯವಾಗಿಲ್ಲ ಅಂತ ಮೂದಲಿಸುತ್ತಿದ್ದರು. ಬಿಜೆಪಿಗೆ ವಾಪಸ್ಸು ಹೋದ ಕೇವಲ ಎರಡ ದಿನಗಳ ಬಳಿಕ ಅಂಥ ಟೀಕೆಗಳನ್ನು ಕಾಂಗ್ರೆಸ್ ಮತ್ತು ಅದರ ನಾಯಕರ ಮಾಡುತ್ತಿದ್ದಾರೆ.

ಇವತ್ತು ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ 28 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಬೇಕು ಅಂದರಂತೆ. ಅದನ್ನು ಕೆಪಿಸಿಸಿ ಆಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ತಿಳಿಸಿದಾಗ, ಶೆಟ್ಟರ್ ಅವರು ಇಲ್ಲಿದ್ದಾಲೂ ಹಾಗೆಯೇ ಮಾತಾಡುತ್ತಿದ್ದರು, ಬಿಜೆಪಿಯನ್ನು ನಿರ್ನಾಮಗೊಳಿಸಬೇಕು ಅನ್ನುತ್ತಿದ್ದರು ಎಂದು ನಗುತ್ತಾ ಹೇಳಿದರು.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮದ್ವೆಯಾದ 2 ವರ್ಷದಿಂದ ಸರಸಕ್ಕೆ ಒಪ್ಪದ ಗಂಡ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಪತ್ನಿ

ವಿವೇಕವಾರ್ತೆ : ದೈಹಿಕ ಸಂಬಂಧಕ್ಕೆ ಒಪ್ಪದ ಗಂಡನ ವಿರುದ್ಧ ಆಕ್ರೋಶಗೊಂಡಿರುವ ಮಹಿಳೆಯೊಬ್ಬಳು ಠಾಣೆಯ ಮೆಟ್ಟಿಲೇರಿ ಎಫ್​ಐಆರ್​ ದಾಖಲಿಸಿರುವ ವಿಚಿತ್ರ...

ಹೈಕೋರ್ಟ್​ನಿಂದ ಎಸಿಬಿ ರದ್ದು: ಎಸಿಬಿಯಲ್ಲಿದ್ದ ಹುದ್ದೆ ಲೋಕಾಯುಕ್ತ & ಪೊಲೀಸ್ ಇಲಾಖೆಗಳಿಗೆ ವರ್ಗಾವಣೆ!

ಬೆಂಗಳೂರು: ಹೈಕೋರ್ಟ್​ನಿಂದ   ಎಸಿಬಿ ರದ್ದು ಹಿನ್ನೆಲೆಯಲ್ಲಿ ಎಸಿಬಿಯಲ್ಲಿದ್ದ ಹುದ್ದೆಗಳನ್ನ ಲೋಕಾಯುಕ್ತ ಸಂಸ್ಥೆ ಮತ್ತು ಪೊಲೀಸ್ ಇಲಾಖೆಗಳಿಗೆ ಸರ್ಕಾರ ವರ್ಗಾವಣೆ ಮಾಡಿದೆ. ಎಸಿಬಿಯಲ್ಲಿದ್ದ ಒಟ್ಟು...

ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ 2.67 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸುವುದು ಹೇಗೆ?

Pm Awas Yojana Subsidy:ನಮಸ್ಕಾರ ಸ್ನೇಹಿತರೇ ,ಇದೀಗ ನಮ್ಮ ದೇಶದಲ್ಲಿ ಜನರ ಸ್ವಂತ ಮನೆ ನಿರ್ಮಾಣದ ಕನಸಿಗೆ ಕೇಂದ್ರ...

IPL 2024:  ಕ್ರಿಕೆಟ್‌ ಅಭಿಮಾನಿಗಳು ಕುತೂಹಲದಿಂದ ಕಾದಿದ್ದIPL ಆರಂಭದ ದಿನಾಂಕ ಫಿಕ್ಸ್!

ಮುಂಬೈ: ಕ್ರಿಕೆಟ್‌ ಅಭಿಮಾನಿಗಳು ಕುತೂಹಲದಿಂದ ಕಾದಿದ್ದ, ಇಂಡಿಯನ್ ಪ್ರೀಮಿಯರ್ ಲೀಗ್‌ (IPL 2024) ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಈ ಕುರಿತು...
error: Content is protected !!