Tuesday, September 26, 2023

ನಿಮ್ಮ ಮನೆಯಲ್ಲಿರುವ ಜಿರಳೆ ಕಾಟ ತಪ್ಪಿಸಲು ಇಲ್ಲಿದೆ ಸುಲಭ ಉಪಾಯ..!

ಪ್ರತಿಯೊಬ್ಬರಿಗೂ ತನ್ನ ಮನೆ ಸ್ವಚ್ಛವಾಗಿರಬೇಕೆಂಬ ಆಸೆ ಇರುತ್ತದೆ, ಜಿರಳೆ, ಇಲಿ, ನೊಣ ಇದ್ಯಾವುದೂ ನಿಮ್ಮ ಮನೆಯಲ್ಲಿರದಂತೆ ನೋಡಿಕೊಳ್ಳುವುದು ಕಷ್ಟದ ಕೆಲಸವೇ, ಎಷ್ಟು ಸ್ವಚ್ಛತೆಯನ್ನು ಕಾಪಾಡಿಕೊಂಡರೂ ನಮಗೇ ತಿಳಿಯದಂತೆ ಮನೆಯ ಒಳಗೆ ಎಂಟ್ರಿ ಕೊಟ್ಟೇ ಬಿಡುತ್ತವೆ.ಅಡುಗೆ ಮನೆಯಲ್ಲಿ ಜಿರಳೆಗಳು ಕಂಡರೆ ಅಡುಗೆ ಎಷ್ಟೇ ಸ್ವಾದಿಷ್ಟವಾಗಿದ್ದರೂ ತಿನ್ನಲು ಮನಸು ಬರುವುದಿಲ್ಲ.

ಅವು ಚರಂಡಿ ಇನ್ನಿತರೆ ಕಲುಷಿತ ಪ್ರದೇಶದಿಂದ ಮನೆಗೆ ಬರುವ ಕಾರಣ, ಅವು ಆಹಾರ, ಪಾನೀಯಗಳನ್ನು ಕಲುಷಿತಗೊಳಿಸುತ್ತವೆ.ಇದರಿಂದ ನಾನಾ ರೋಗಗಳು ಹರಡುವ ಭೀತಿ ಎದುರಾಗಿದೆ. ಅದೇನೇ ಇರಲಿ.. ನಿಮ್ಮ ಮನೆಯಲ್ಲೂ ಜಿರಳೆ ಇದ್ದರೆ ಹುಷಾರಾಗಿರಿ. ತಕ್ಷಣವೇ ಅವುಗಳನ್ನು ತೊಡೆದುಹಾಕಲು ಮಾರ್ಗಗಳನ್ನು ತಿಳಿಯಿರಿ.

ಸೀಮೆ ಎಣ್ಣೆಯನ್ನು ಬಳಕೆ ಮಾಡಿ ನಿಮ್ಮ ಅಡುಗೆಮನೆಯಲ್ಲಿ ಸಾಕಷ್ಟು ಜಿರಳೆಗಳಿದ್ದರೆ, ಸೀಮೆಎಣ್ಣೆಯನ್ನು ಸಿಂಪಡಸಿ, ಅದನ್ನು ಬಳಸುವ ಮೊದಲು ಜಿರಳೆಗಳ ಕುರುಹುಗಳಿರುವ ಸ್ಥಳಗಳನ್ನು ಮೊದಲು ಗುರುತಿಸಿ. ಇದರ ನಂತರ, ಈ ಸ್ಥಳಗಳಲ್ಲಿ ಸೀಮೆಎಣ್ಣೆ ಸಿಂಪಡಿಸಿ. ಸೀಮೆ ಎಣ್ಣೆಯ ವಾಸನೆಗೆ ಜಿರಳೆಗಳು ಓಡಿಹೋಗುತ್ತವೆ.

ಬೇವಿನ ಎಲೆ ಬೇವಿನ ಎಲೆಗಳಿಂದ ಅನೇಕ ಚರ್ಮರೋಗಗಳನ್ನು ಗುಣಪಡಿಸಬಹುದು, ಹಾಗೆಯೇ ಜಿರಳೆಗಳನ್ನು ಓಡಿಸಲು ಕೂಡ ಇದು ಉತ್ತಮ ವಿಧಾನವಾಗಿದೆ. ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ, ಎಲೆಗಳನ್ನು ಈ ನೀರನ್ನು ಜಿರಳೆ ಇರುವ ಜಾಗಗಳಲ್ಲಿ ಸಿಂಪಡಿಸಿ. ಜಿರಳೆಗಳು ಅದರಿಂದ ಓಡಿಹೋಗುತ್ತವೆ. ಅಡುಗೆ ಸೋಡಾ ತುಂಬಾ ಪರಿಣಾಮಕಾರಿ ಜಿರಳೆಗಳನ್ನು ಹೋಗಲಾಡಿಸಲು ಅಡುಗೆ ಸೋಡಾ ಕೂಡ ಒಳ್ಳೆಯದು. ಇದಕ್ಕಾಗಿ ಬೇಕಿಂಗ್ ಸೋಡಾದಲ್ಲಿ ಸಕ್ಕರೆಯನ್ನು ಬೆರೆಸಿ ಮಿಶ್ರಣ ಮಾಡಿ. ಅದರ ನಂತರ ಅದನ್ನು ಜಿರಳೆ ಇರುವ ಸ್ಥಳದಲ್ಲಿ ಸಿಂಪಡಿಸಿ. ಇದು ಜಿರಳೆಗಳನ್ನು ಕೊಲ್ಲಬಲ್ಲದು.

ಈ ಸ್ಪ್ರೇ ಬಳಸಿ ಮನೆಯಲ್ಲಿ ಜಿರಳೆ, ನೊಣ-ಸೊಳ್ಳೆಗಳನ್ನು ಹೋಗಲಾಡಿಸಲು ಸ್ಪ್ರೇ ಮಾಡಬೇಕು. ಇದನ್ನು ಮಾಡಲು, ನೀವು ನೀರಿನ ಪಾತ್ರೆಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ಬೆಳ್ಳುಳ್ಳಿ ಸಿಪ್ಪೆಗಳು, ಮೆಣಸಿನಕಾಯಿ, ಅಲೋವೆರಾ ಎಲೆಗಳನ್ನು ಮುರು ದಿನಗಳ ವರೆಗೆ ಮುಚ್ಚಿಡಬೇಕು, ಬಳಿಕ ಅದನ್ನು ಸೋಸಿ ಸ್ಪ್ರೇ ಮಾಡಬೇಕು.

ಸಿಂಪಡಿಸುವಾಗ, ಅದು ಕೆಟ್ಟ ವಾಸನೆ ಎಂಬುದನ್ನು ನೆನಪಿಡಿ. ಆದ್ದರಿಂದ, ಆ ಪಾತ್ರೆಯನ್ನು ಅಡುಗೆಮನೆಯಲ್ಲಿ ಅಥವಾ ನಿಮ್ಮ ಮಲಗುವ ಕೋಣೆಯಲ್ಲಿ ಇಡಬೇಡಿ. ಬದಲಿಗೆ, ಕುಟುಂಬದ ಸದಸ್ಯರ ಚಲನವಲನ ಕಡಿಮೆ ಇರುವ ಸ್ಥಳದಲ್ಲಿ ಪಾತ್ರೆಯನ್ನು ಇರಿಸಿ. ಹೀಗೆ ಸಿಂಪಡಿಸಿ..

ಎರಡರಿಂದ ಮೂರು ಬಾರಿ ಸಿಂಪಡಿಸಬೇಕು. ತೇವ ಪ್ರದೇಶಗಳು ಅಥವಾ ನಿಂತಿರುವ ನೀರಿನ ಬಳಿ ಈ ಸ್ಪ್ರೇ ಅನ್ನು ಸಿಂಪಡಿಸಿ. ಹಾಸಿಗೆಗಳ ಕೆಳಗೆ ಮತ್ತು ಪೆಟ್ಟಿಗೆಗಳ ಹಿಂದೆ ಸಿಂಪಡಿಸುವುದು ಸಹ ಪ್ರಯೋಜನಕಾರಿಯಾಗಿದೆ. ಇದರಿಂದ ಸೊಳ್ಳೆ, ನೊಣಗಳ ಕಾಟ ತಪ್ಪಿಸುತ್ತದೆ, ಮನೆ ರೋಗಾಣು ಮುಕ್ತವಾಗುತ್ತದೆ.

RELATED ARTICLES

ನಿಮ್ಮ ಮೊಬೈಲ್ ನಲ್ಲಿ `ಡೇಟಾ’ ಬೇಗನೆ ಖಾಲಿಯಾಗುತ್ತದೆಯೇ? ಜಸ್ಟ್ ಈ ಸೆಟ್ಟಿಂಗ್ ಆಫ್ ಮಾಡಿ!

ವಿವೇಕವಾರ್ತೆ : ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಇಂಟರ್ನೆಟ್ ಅನ್ನು ಬಳಸುತ್ತೀರಾ ಮತ್ತು ಅದು ಬೇಗನೆ ಕೊನೆಗೊಳ್ಳುವುದರಿಂದ ಅಸಮಾಧಾನಗೊಳ್ಳುತ್ತೀರಾ. ಅಂತಹ ಪರಿಸ್ಥಿತಿಯಲ್ಲಿ, ನೀವು ಇನ್ನು ಮುಂದೆ ಚಿಂತಿಸಬೇಕಾಗಿಲ್ಲ. ಈ 5 ಸಲಹೆಗಳು ಮತ್ತು ತಂತ್ರಗಳೊಂದಿಗೆ ಡೇಟಾವನ್ನು...

ರಿಮೋಟ್ ಬೇಡ: ಸ್ಮಾರ್ಟ್​ಫೋನ್ ಮೂಲಕ ಟಿವಿ ಚಾನೆಲ್ ಬದಲಾಯಿಸುವುದು ಹೇಗೆ?

ವಿವೇಕವಾರ್ತೆ : ಇನ್ನುಂದೆ ಟಿವಿ ರಿಮೋಟ್ ಕಳೆದು ಹೋದರೆ ಚಿಂತಿಸಬೇಕಿಲ್ಲ. ನಿಮ್ಮಲ್ಲಿ ಸ್ಮಾರ್ಟ್​ಫೋನ್ ಇದ್ದರೆ ಅದರ ಮೂಲಕ ಮನೆಯ ಟಿವಿಯನ್ನು ನೀವು ನಿಯಂತ್ರಿಸಬಹುದು. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಟಿವಿ ರಿಮೋಟ್ ಆಗಿ ಬಳಸಬಹುದು. ಹೆಚ್ಚಾಗಿ...

ಮೊಬೈಲ್ ಬಳಕೆದಾರರೇ ಗಮನಿಸಿ : ಈ 4 ಆಯಪ್ ಗಳಿದ್ದರೆ ಬೇಗ ತೆಗೆದುಹಾಕಿ, ಇಲ್ಲದಿದ್ದರೆ ನಿಮ್ಮ ಖಾತೆ ಖಾಲಿಯಾಗಬಹುದು

ವಿವೇಕವಾರ್ತೆ : ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸ್ಮಾರ್ಟ್ಫೋನ್ಗಳಿಗೆ ಸಂಪರ್ಕ ಹೊಂದಿದ್ದಾರೆ. ಇದು ತನ್ನದೇ ಆದ ಪ್ರಯೋಜನಗಳನ್ನು ಸಹ ಹೊಂದಿದೆ, ಬ್ಯಾಂಕ್ ಸಂಬಂಧಿತ ಕೆಲಸಗಳು ಸೇರಿದಂತೆ ಇತರ ಕಾರ್ಯಗಳನ್ನು ಸಹ ನಿಮಿಷಗಳಲ್ಲಿ ಸ್ಮಾರ್ಟ್ಫೋನ್ನಿಂದ ಮಾಡಲಾಗುತ್ತದೆ. ನಿಮ್ಮ...
- Advertisment -

Most Popular

ಗೋಕಾಕ : ಹಣಕಾಸಿನ ವಿಚಾರಕ್ಕೆ ಯೋಧನಿಂದಲೇ ಮತ್ತೋರ್ವ ಯೋಧನ ಮೇಲೆ ಫೈರಿಂಗ್.!

ವಿವೇಕ ವಾರ್ತೆ : ಓರ್ವ ಯೋಧನಿಂದ ಮತ್ತೊಬ್ಬ ಯೋಧನ ಮೇಲೆ ಪೈರಿಂಗ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಾಜನಕಟ್ಟಿಯಲ್ಲಿ ನಡೆದಿದೆ. ರಾಜನಕಟ್ಟೆ ಗ್ರಾಮದ ಇಬ್ಬರು ವ್ಯಕ್ತಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ....

ಬ್ಯಾಕ್ ಪ್ಲಿಪ್ ಮಾಡಲು ಹೋಗಿ ಫೇಲ್ ಆದ ಯುವಕ : ‘ಇದರ ಅಗತ್ಯ ಇತ್ತೇ’ ಎಂದ ನೆಟ್ಟಿಗರು ; ವಿಡಿಯೋ ವೈರಲ್.!

ವಿವೇಕವಾರ್ತೆ : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಕೆಲ ಯುವಕ ಯುವತಿಯರ ಹುಚ್ಚಾಟದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇಂಥ ಪ್ರವೃತ್ತಿಗಳು ಮುಂದುವರೆಯುತಲೇ ಇವೆ. ಆ...

ಕಾರಿಗೆ ಡಿಕ್ಕಿ ಹೊಡೆದ ಲಾರಿ : ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವು..!

ವಿವೇಕವಾರ್ತೆ : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾದ ನಡೆದಿದೆ. ಮೃತ ದುರ್ದೈವಿಗಳನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಕಾಶ್ (20), ಹೇಮಂತ್ (28)...

ಕುಂಬಳಕಾಯಿ ಬೀಜ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು.!

ವಿವೇಕವಾರ್ತೆ : ಕುಂಬಳಕಾಯಿ ಬೀಜಗಳು ತುಂಬಾ ಚಿಕ್ಕದಾಗಿದ್ದರೂ, ನಮ್ಮ ವ್ಯವಸ್ಥೆಗಳು ಅವಲಂಬಿಸಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಕುಂಬಳಕಾಯಿಯ ಚಿಕ್ಕ ಬೀಜಗಳು ನಾವು ಅಂದಾಜಿಸುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳಿಂದ ತುಂಬಿವೆ.‌ ಕುಂಬಳಕಾಯಿ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು...
error: Content is protected !!