spot_img
spot_img
spot_img
spot_img
spot_img
spot_img

ರೋಗವನ್ನು ಗುಣಪಡಿಸುವುದರ ಜೊತೆಗೆ ಶಮನಮಾಡಬೇಕು : ಪ್ರೊ ಅಲಿ ರಜಾ ಮೂಸ್ವಿ

Published on

spot_img

 

ಕಲಬುರಗಿ: ಚಿಕಿತ್ಸೆಯಿಂದ ಮತ್ತು ಔಷಧಿಗಳಿಂದ ರೋಗವನ್ನು ಗುಣಪಡಿಸಬಹುದು. ಅದರ ಜೊತೆಗೆ ರೋಗ ಶಮನ ಕೂಡ ಅವಶ್ಯ. ಶಮನಕ್ಕೆ ಆತ್ಮ ಸ್ಥೈರ್ಯ ಮತ್ತು ಮಾನವ ಸ್ಪರ್ಶ ಬೇಕು ಎಂದು ಕೆಬಿಎನ್ ವಿವಿ ಉಪಕುಲಪತಿ ಪ್ರೊ ಅಲಿ ರಜಾ ಮೂಸ್ವಿ ಹೇಳಿದರು.

ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಮೆಡಿಕಲ್ ನಿಕಾಯದ ಜನರಲ್ ಮೆಡಿಸಿನ್ ವಿಭಾಗ ಮತ್ತು ಎಪಿಐ ಕಲಬುರಗಿ ಅಧ್ಯಾಯದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿರುವ “ಕೆಬಿಎನ್ ಎಂಇಡಿ ಪ್ಲೆಕ್ಸಸ್ 2024 ನರ್ಚರಿಂಗ್ ಮೈಂಡ್ಸ್ , ಎನ್‌ಹಾನ್ಸಿಂಗ್ ಪ್ರಾಕ್ಟೀಸ್”
ಕುರಿತ ಸಿಎಂಈ ಯನ್ನು ಉದ್ಘಾಟಿಸಿ ಮಾತನಾಡಿದರು.

ದೇಹದ ಎಲ್ಲ ಭಾಗದ ಬಗ್ಗೆ ಅಧ್ಯಯನ
ಮಾಡಿರುವ ವಿಭಾಗ ಎಂದರೆ ಸಾಮಾನ್ಯ ಔಷಧ ವಿಭಾಗ. ನಾವು ಅನಾರೋಗ್ಯಕ್ಕಿಡಾದಾಗ ಮೊದಲು ಸಾಮಾನ್ಯ ಔಷಧಿಯ ವೈದ್ಯರನ್ನು ಭೇಟಿಯಾಗುತ್ತೇವೆ. ನಂತರ ಅವಶ್ಯ ಅನುಸಾರ ವಿಶೇಷ ವೈದ್ಯರನ್ನು ಸಂಪರ್ಕಿಸುತ್ತೇವೆ. ಕೆಬಿಎನ್ ವಿವಿಯ ಜನರಲ್ ಮಡಸಿನ ವಿಭಾಗದಲ್ಲಿ 21 ಜನ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಅತಿ ಹೆಚ್ಚು ನೊಂದಣಿ ಹೊಂದಿರುವ ಸಿಎಂಈ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಸಂಘಟಕರಿಗೆ ಅಭಿನಂದಿಸಿದರು.

ಈ ಕಾರ್ಯಕ್ರಮದಲ್ಲಿ ಸುಮಾರು 525 ಅಭ್ಯರ್ಥಿಗಳು ಹೆಸರು ನೋಂದಾಯಿಸಿದರು. ಡಾ. ಪಿ ಎಸ್ ಶಂಕರ್, ಡಾ ಎಸ್ ಆರ್ ಹರವಾಲ, ಡಾ ಶಿವರಾಜಲಹೆಟ್ಟಿ ಇವರ ಸಾಧನೆಗಾಗಿ ಸನ್ಮಾನಿಸಲಾಯಿತು.

ಒಂದು ದಿನದ ಈ ಕಾರ್ಯಕ್ರಮದಲ್ಲಿ ಡಾ.ರವಿಕುಮಾರ್ ವಿ.ರಿಯಾಖಾ,
ಡಾ.ಈರಣ್ಣ ಹೀರಾಪುರ, ಡಾ.ಬಿ.ಕೆ. ಸುಂದರ್, ಡಾ.ಪಿ.ಎಸ್. ಶಂಕರ್,ಡಾ ಜೆ ಮೋಹನ್ ಕೃಷ್ಣ,
ಡಾ.ಸಂತೋಷ ಹರ್ಕುಡೆ,ಡಾ ಪೂರ್ಣಿಮಾ ತಡಕಲ್, ಡಾ.ಆನಂದ ಅಂಬ್ಲಿ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.

ನಂತರ ಡಾ. ಶಿವಾನಂದ ಪಾಟೀಲ, ಡಾ . ನಾಗರಾಜ ಕೋಟಿಯ ಡಾ. ಅಶ್ಫಾಕ್ ಅಹ್ಮದ್ ಪ್ಯಾನೆಲ ಚರ್ಚೆಯಲ್ಲಿ ಭಾಗವಹಿಸಿ ದರು.

ಡಾ ಇರ್ಫಾನ್ ಅಲಿ ನಿರೂಪಿಸಿದರು. ತಲಾಹ ನಾಥ ಪ್ರಸ್ತುತ ಪಡಿಸಿದರು. ಲಕ್ಸ್ಮಿತಾ ಪ್ರಾರ್ಥಿಸಿದರು. ಸಂಘಟನ ಅಧ್ಯಕ್ಷೆ ಡಾ. ಚಂದ್ರಕಲಾ ಸ್ವಾಗತಿಸಿದರು. ಸಂಘಟನ ಕಾರ್ಯದರ್ಶಿ ಡಾ ಪ್ರಶಾಂತ ವಂದಿಸಿದರು.

ವಿದ್ಯಾರ್ಥಿಗಳಿಗಾಗಿ ನಡೆದ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಎಂ ಆರ್ ಎಂ ಸಿ ಪ್ರಥಮ, ದ್ವಿತೀಯ ಕೆಬಿಎನ್, ತೃತೀಯ ಈ ಎಸ್ ಐ ಹಾಗೂ ಜಿಮ್ಸ 4ನೆಯ ಸ್ಥಾನ ಪಡೆಯಿತು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು.

ಪ್ರಭಾರಿ ಕುಲಸಚಿವೆ ಡಾ. ರುಕ್ಸರ್ ಫಾತಿಮಾ, ಮೆಡಿಕಲ್ ಡೀನ್ ಡಾ. ಸಿದ್ದೇಶ್ ಬಿ. ಸಿರ್ವಾರ್, ಪ್ರೊ. ಡಾ. ಸಿಡ್ಲಿಂಗ್ ಚೆಂಗಟಿ ವೈದ್ಯಕೀಯ ಅಧೀಕ್ಷಕ, ರಿಸರ್ಚ್ ಡೀನ್ ರಾಜಶ್ರೀಪಾಲಾದಿ, ಡಾ. ರಾಧಿಕಾ, ಡಾ. ಚಂದ್ರಕಲಾ, ಡಾ. ವಿಜಯ್ ಮೋಹನ್, ಡಾ. ಸತೀಶ್ ಲಹೋಟಿ, ಡಾ. ಸಂಜಯ್ ಚವ್ಹಾಣ್, ಡಾ. ಸುಮಂಗಲಾ ಎಸ್, ಡಾ. ಗುರುಪ್ರಸಾದ್ ಕೆ.ವೈˌ ಡಾ. ಪ್ರಶಾಂತ್ ಇಡಿ, ಡಾ. ರೇಣುಪ್ರಸಾದ್ ಎಂ.ಸಿ, ಡಾ. ಎಂಡಿ ಮುದಸ್ಸಿರ್ ಸಹಾಯಕ ಪ್ರಾಧ್ಯಾಪಕ, ಡಾ. ಸಾಗರ್ ಬಿರಾದಾರ
ಡಾ. ಶ್ರೀಗೌರಿ ರೆಡ್ಡಿ ಸಹಾಯಕ ಪ್ರಾಧ್ಯಾಪಕರು, ಡಾ. ಎಂ ಮುಷ್ತಾಕ್ ಎಎಸ್., ಡಾ. ನಾಗರಾಜ ಕೊಟ್ಲಿ ಅಧ್ಯಕ್ಷರು ಎಪಿಐ ಕಲಬುರಗಿ ಅಧ್ಯಾಯ, ಡಾ. ಗಿರೀಶ್ ರೋನಾಡ್, ಡಾ. ಎಂಡಿ ಅಬ್ದುಲ್ ವಹೀದ್, ಡಾ. ಸಿದ್ಧಾಂತ, ಡಾ. ಆನಂದ್ ಶಂಕರ್, ಡಾ. ಹಿಮಾಯತುಲ್ಲಾ ಖಾನ್ ಮುಂತಾದವರು ಹಾಜರಿದ್ದರು.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!