ವಿವೇಕವಾರ್ತೆ: ಹಸುಗಳ ಮೇಲೆ ಸಂಭೋಗ ಮಾಡಿದ ವಿಕೃತ ಕಾಮಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ (Chikkaballapur) ನಗರದ ವಾರ್ಡ್ ನಂಬರ್ 08 ರಲ್ಲಿ ಈ ಘಟನೆ ನಡೆದಿದೆ. ವಿಕೃತಕಾಮಿಯನ್ನು ರಾಹುಲ್ ಎಂದು ಗುರುತಿಸಲಾಗಿದ್ದು, ಈತ ಕೋಲ್ಕತ್ತಾ ಮೂಲದವನು ಎನ್ನಲಾಗಿದೆ..
ಆರೋಪಿ ರಾಹುಲ್, ಕಳೆದ ಒಂದು ವಾರದಿಂದ ನಿರಂತರವಾಗಿ ಎರಡು ಹಸುಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಸುರೇಶ್ ಎಂಬವರ ಹಸುಗಳ ಮೇಲೆ ಅತ್ಯಾಚಾರ ನಡೆಸಿದ್ದು, ಅನುಮಾನಗೊಂಡ ಮಾಲೀಕರು ತಡರಾತ್ರಿ ಆರೋಪಿಗಾಗಿ ಕಾದು ಕುಳಿತು ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ವಿಕೃತ ಕಾಮಿ ರಾಹುಲ್‍ನ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆರೋಪಿಯನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು (Chikkaballapur Rural Police) ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.