ವಿವೇಕವಾರ್ತೆ : ಈ ಬಾರಿ ಗಣೇಶನ ಹಬ್ಬವನ್ನು ಸೋಮವಾರ ಆಚರಿಸಬೇಕೆ ಅಥವಾ ಮಂಗಳವಾರ ಆಚರಿಸಬೇಕಾ ಅನ್ನುವ ಗೊಂದಲವಿದೆ. ದೃಕ್ ಪಂಚಾಂಗವನ್ನು ಅನುಸರಿಸುವವರು ಸೆ.19 (ಮಂಗಳವಾರ) ಹಬ್ಬ ಆಚರಿಸುತ್ತಾರೆ. ಸೂರ್ಯ ಸಿದ್ಧಾಂತದ ಪಂಚಾಂಗವನ್ನು ಫಾಲೋ ಮಾಡುವವರು ಸೆ.18 (ಸೋಮವಾರ) ಚೌತಿ ಆಚರಣೆ ಮಾಡುತ್ತಾರೆ.
ಜ್ಯೋತಿಷಿಗಳು ಸೆ. 18ಕ್ಕೆ ಪೂರ್ಣ ಚತುರ್ಥಿ ಇದೆಯೆಂದು ಹೇಳಿದರೆ, ಕೆಲವರು 19ರ ಬೆಳಗ್ಗೆಯೂ ಚತುರ್ಥಿ ತಿಥಿ ಇದೆ ಎಂದಿದ್ದಾರೆ. ಹೀಗಾಗಿ ಆಯಾ ಪಂಚಾಂಗ ಅನುಸರಿಸುವವರು ಅದರ ಪ್ರಕಾರವೇ ಹಬ್ಬ ಆಚರಿಸಲಿದ್ದಾರೆ.