ವಿವೇಕವಾರ್ತೆ :ಉದ್ಯಮಿಗೆ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಚೈತ್ರಾ ಕುಂದಾಪುರ(Chaitra Kundapur) ಅವರ ಆಸ್ತಿಯನ್ನು ಸಿಸಿಬಿ (CCB) ಮುಟ್ಟುಗೋಲು ಹಾಕಿಕೊಂಡಿದೆ . ಇದರ ಜೊತೆಗೆ ಇನ್ನೊಂದು ಸ್ಪೋಟಕ ಮಾಹಿತಿ ಸಿಕ್ಕಿದೆ.
ಈ ವಂಚನೆ ಜಾಡು ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಜೊತೆಗೆ ಬಾಗಲಕೋಟೆಗೂ(Bagalkot) ಲಿಂಕ್ ಆಗಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ.
ತನಿಖೆ ಚುರುಕುಗೊಳಿಸಿರುವ ಸಿಸಿಬಿಗೆ ಬಾಗಲಕೋಟೆಯ ಮುಧೋಳದಲ್ಲಿ(Mudhol) ಚೈತ್ರಾ ಕುಂದಾಪುರಗೆ ಸೇರಿದ್ದ ಕಿಯಾ(KIA) ಕಂಪನಿಯ ಕಾರು ಪತ್ತೆಯಾಗಿದೆ.
ಮುಧೋಳದಲ್ಲಿ ಕಾರು ಡ್ರೈವಿಂಗ್ ಸ್ಕೂಲ್(Driving School) ನಡೆಸುತ್ತಿದ್ದ ಕಿರಣ್ (Kiran)ಗನಪ್ಪಗೋಳ ಎಂಬುವವನ ಬಳಿ ಚೈತ್ರಾಗೆ ಸೇರಿದ ಕಾರು ಪತ್ತೆಯಾಗಿದೆ. ವಂಚನೆ ಪ್ರಕರಣದಲ್ಲಿ ಕಿರಣ್ ಕೂಡ ಭಾಗಿಯಾಗಿದ್ದಾನಾ ಎಂಬ ಶಂಕೆ ವ್ಯಕ್ತವಾಗಿದ್ದು ಸೊಲ್ಲಾಪುರದಿಂದ ಕಾರು ತರಿಸುವಂತೆ ಚೈತ್ರಾ ಹೇಳಿದ್ದಳು ಎಂಬ ಮಾಹಿತಿ ಸಿಕ್ಕಿದೆ. ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸೊಲ್ಲಾಪುರದ ಬಾರ್ ಆಂಡ್ ರೆಸ್ಟೋರೆಂಟ್ ಬಳಿ ಕಾರು ನಿಂತಿದೆ ಅದನ್ನು ತಂದು ಇಟ್ಟುಕೊಳ್ಳುವಂತೆ ಚೈತ್ರಾ ಪಿಎ ಶ್ರೀಕಾಂತ(Shrikant) ಹೇಳಿದ್ದ ಎಂದು ಹೇಳಲಾಗಿದೆ.
ಚೈತ್ರಾ ಹಾಗೂ ಕಿರಣ್ ಮೊದಲಿಂದಲೂ ಪರಿಚಿತರು ಎಂದು ಹೇಳಲಾಗಿದ್ದು ಕಿರಣ್‌ನನ್ನ ವಶಕ್ಕೆ ಪಡೆದ ಪೊಲೀಸರು ಮುಧೋಳ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.