ವಿವೇಕವಾರ್ತೆ : ಈ ಹಿಂದೆ ಯುಪಿಎ ಅಂತಿದ್ದ ವಿಪಕ್ಷಗಳ ಮೈತ್ರಿಕೂಟದ ಹೆಸರನ್ನು ಇಂಡಿಯಾ ಎಂದು ಮರುನಾಮಕರಣ ಮಾಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ, ಭಾರತದ ಹೆಸರನ್ನು ಬದಲಾಯಿಸಲು ಮುಂದಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ. ಅದಕ್ಕೆ ಪುಷ್ಠಿ ನೀಡುವಂತಹ ಕೆಲವು ಬೆಳವಣಿಗೆಗಳು ಸಹ ಇದೀಗ ನಡೆಯುತ್ತಿವೆ. ಬ್ಯಾಂಕ್ ಖಾತೆ ಇಲ್ಲದ ಪಡಿತರ ಚೀಟಿದಾರರಿಗೂ ಗುಡ್ ನ್ಯೂಸ್: 5 ಕೆಜಿ ಹಣ ಪಾವತಿಸಲು ಸರ್ಕಾರ ಹೊಸ ಪ್ಲಾನ್
ದೇಶಕ್ಕೆ ರಿಪಬ್ಲಿಕ್ ಆಫ್ ಭಾರತ್ ಎಂದು ಮರುನಾಮಕರಣ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಇಂಡಿಯಾ ಎನ್ನುವ ಬದಲು ಭಾರತ ಎಂಬ ಹೆಸರನ್ನು ಮುಂಚೂಣಿಗೆ ತರುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ರಾಷ್ಟ್ರಪತಿ ಭವನದ ಆಹ್ವಾನ ಪತ್ರದಲ್ಲಿ ದಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಲಾಗಿದೆ. ಲೋಕಾಯುಕ್ತ ಬಲೆಗೆ ಬಿದ್ದ RTO,ಅಟೆಂಡರ್
ಸೆ. 9 ಮತ್ತು 10ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ G-20 ದೇಶಗಳ ಸಮಾವೇಶ ನಡೆಯಲಿದ್ದು, ರಾಷ್ಟ್ರಪತಿ ಭವನದ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಲಾಗಿದೆ. Breaking News : ಇನ್ಮುಂದೆ ಬಸ್ ನಲ್ಲಿ ಗೂಗಲ್ ಪೇ ಫೋನ್ ಪೇ, ಇಲ್ಲಿದೆ ಕಂಪ್ಲಿಟ್ ಡಿಟೈಲ್ಸ್
ಈ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಸುದ್ದಿ ನಿಜಕ್ಕೂ ನಿಜ. ಸೆ. 9ರ ಔತಣಕೂಟಕ್ಕೆ ಜಿ-20 ದೇಶದ ನಾಯಕರುಗಳಿಗೆ ಸಾಮಾನ್ಯವಾಗಿ ಪ್ರೆಸಿಡೆಂಟ್ ಆಫ್ ಇಂಡಿಯಾ ಎಂಬ ಹೆಸರಿನ ಬದಲು ಪ್ರೆಸಿಡೆಂಟ್ ಆಫ್ ಭಾರತ್ ಹೆಸರಿನಲ್ಲಿ ರಾಷ್ಟ್ರಪತಿ ಭವನ ಆಹ್ವಾನ ಪತ್ರಿಕೆಯನ್ನು ಕಳುಹಿಸಿದೆ. ಇದೀಗ ನಾವು ಸಂವಿಧಾನದ ಆರ್ಟಿಕಲ್ 1ನ್ನು ಓದಬಹುದು. ಅದರಲ್ಲಿ ಭಾರತವು ಇಂಡಿಯಾ ಆಗಿತ್ತು, ಅದು ರಾಜ್ಯಗಳ ಒಕ್ಕೂಟವಾಗಿರುತ್ತದೆ. ಆದರೆ, ಇದೀಗ ರಾಜ್ಯಗಳ ಒಕ್ಕೂಟವು ಕೂಡ ಆಕ್ರಮಣಕ್ಕೆ ಒಳಗಾಗಿದೆ ಎಂದು ಟೀಕಿಸಿದ್ದಾರೆ. ರಿಮೋಟ್ ಬೇಡ: ಸ್ಮಾರ್ಟ್ಫೋನ್ ಮೂಲಕ ಟಿವಿ ಚಾನೆಲ್ ಬದಲಾಯಿಸುವುದು ಹೇಗೆ?
So the news is indeed true.
Rashtrapati Bhawan has sent out an invite for a G20 dinner on Sept 9th in the name of 'President of Bharat' instead of the usual 'President of India'.
Now, Article 1 in the Constitution can read: “Bharat, that was India, shall be a Union of States.”…
— Jairam Ramesh (@Jairam_Ramesh) September 5, 2023
ಇದರ ನಡುವೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮ ಮಾಡಿರುವ ಟ್ವೀಟ್ ಸಹ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ರಿಪಬ್ಲಿಕ್ ಆಫ್ ಭಾರತ್ ಎಂದು ಶರ್ಮ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ನಮ್ಮ ನಾಗರಿಕತೆಯು ಅಮೃತ ಕಾಲದ ಕಡೆಗೆ ಧೈರ್ಯದಿಂದ ಮುನ್ನಡೆಯುತ್ತಿರುವುದಕ್ಕೆ ಸಂತೋಷ ಮತ್ತು ಹೆಮ್ಮೆ ಇದೆ ಎಂದಿದ್ದಾರೆ. ನಿಮಗಿನ್ನೂ ಗೃಹಲಕ್ಷ್ಮೀ ಯೋಜನೆ ಹಣ ಬಂದಿಲ್ವಾ?! ಹಣ ಪಡೆಯೋಕೆ ಏನು ಮಾಡ್ಬೇಕು? ಇಲ್ಲಿದೆ ಡಿಟೇಲ್ಸ್
REPUBLIC OF BHARAT – happy and proud that our civilisation is marching ahead boldly towards AMRIT KAAL
— Himanta Biswa Sarma (@himantabiswa) September 5, 2023
ವಿಶೇಷ ಅಧಿವೇಶನದಲ್ಲಿ ಪ್ರಸ್ತಾವ ಸ್ವೀಕಾರ ಸಾಧ್ಯತೆ
ಸೆ.18ರಿಂದ 5 ದಿನ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ರಿಪಬ್ಲಿಕ್ ಆಫ್ ಭಾರತ್ ಎಂಬ ಪ್ರಸ್ತಾವ ಸ್ವೀಕಾರ ಸಾಧ್ಯತೆ ಇದೆ. ದಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಆಹ್ವಾನ ಪತ್ರಿಕೆ ಮುದ್ರಣವಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ. ಈ ಹೊಸ ಚರ್ಚೆಯ ಬಗ್ಗೆ ಈಗಾಗಲೇ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ದೇಶದ ಹೆಸರನ್ನು ‘ಇಂಡಿಯಾ’ ಬದಲು ಭಾರತ ಎನ್ನಲು ಬಿಜೆಪಿ ಸೇರಿದಂತೆ ಹಲವು ಪಕ್ಷಗಳ ಮುಖಂಡರು ಬೇಡಿಕೆ ಇಟ್ಟಿದ್ದಾರೆ. (ಏಜೆನ್ಸೀಸ್)
BS Yediyurappa ರಣತಂತ್ರ ಶುರುವಾಯ್ತಾ? ಒಂದೇ ಕಲ್ಲಿಗೆ 2 ಹಕ್ಕಿ ಹೊಡೀತಾರಾ?
ಬೆಂಗಳೂರಲ್ಲಿ ‘ಕಾಮುಕ ಟೆಕ್ಕಿ’ ಅಂದರ್ : ಚೆಂದ ಚೆಂದದ ಆಂಟಿಯರೇ ಈತನ ಟಾರ್ಗೆಟ್.!