ಊದುಬತ್ತಿ ಹಚ್ಚಿದರೆ ಕ್ಯಾನ್ಸರ್ ಬರುತ್ತಾ.? ಈ ಬಗ್ಗೆ ವೈದ್ಯರು ಹೇಳಿದೇನು ನೋಡಿ.?

WhatsApp Group Join Now
Telegram Group Join Now
Instagram Account Follow Now

ದೇವರ ಕೋಣೆ ದೇವರ ಪೂಜೆ ಎಂದ ಮೇಲೆ ಅಲ್ಲಿ ಊದುಬತ್ತಿಗೆ ಮಹತ್ವದ ಸ್ಥಾನ ಇದ್ದೇ ಇರುತ್ತದೆ. ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಹಾಗೂ ಸಂಜೆ ತಮ್ಮ ಮನೆಯಲ್ಲಿರುವ ದೇವರ ವಿಗ್ರಹಗಳು ಹಾಗೂ ಫೋಟೋಗಳಿಗೆ ಹೂ ಇಟ್ಟು ದೀಪ ಹಚ್ಚಿ ಊದುಬತ್ತಿ ಹಚ್ಚುತ್ತಾರೆ. ಹೀಗೆ ಮಾಡುವುದರಿಂದ ಮನಸ್ಸಿಗೆ ಏನೋ ಸಮಾಧಾನ.

ನಾವು ಚಿಕ್ಕವಯಸ್ಸಿನಿಂದಲೂ ಕೂಡ ನಮ್ಮ ಹಿರಿಯರು ಈ ರೀತಿ ಮನೆಯಲ್ಲಿ ಮಾಡಿಕೊಂಡು ಬಂದಿದ್ದನ್ನು ಕಲಿತು ಪರಿಪಾಲಿಸುತ್ತಿದ್ದೇವೆ. ಆದರೆ ಅಂದಿನ ದಿನಗಳಲ್ಲಿ ಬಳಸುತ್ತಿದ್ದ ಗಂಧದ ಕಡ್ಡಿಗೂ ಇಂದಿನ ದಿನ ನಾವು ಬಳಸುತ್ತಿರುವ ಊದುಬತ್ತಿ ಹಾಗೂ ರೆಡಿಮೇಡ್ ಸಾಂಬ್ರಾಣಿಗೂ ಬಹಳಷ್ಟು ವ್ಯತ್ಯಾಸ ಇದೆ. ಈ ಬಗ್ಗೆ ವೈದ್ಯರನ್ನು ಕೇಳಿದರೆ ಈಗಿನ ಕಾಲದ ಊದುಬತ್ತಿ ಹಾಗೂ ಸಾಂಬ್ರಾಣಿಗಳನ್ನು ಬಳಸುವುದರಿಂದ ಕ್ಯಾನ್ಸರ್ ಬರುವುದು ಗ್ಯಾರಂಟಿ ಎನ್ನುತ್ತಾ.

ಕೆಲವು ಮನೆಗಳಲ್ಲಿ ವಯಸ್ಸಾದ ಅಜ್ಜಿಯಂದಿರು ಇರುತ್ತಾರೆ ಅವರಿಗೆ ಒಂದು ಚಿಕ್ಕ ದುರಭ್ಯಾಸವು ಇರುವುದಿಲ್ಲ ಆದರೂ ಅವರು ಕ್ಯಾನ್ಸರ್ ಪೇಷಂಟ್ ಗಳಾಗಿರುತ್ತಾರೆ. ಅದಕ್ಕೆ ಕಾರಣವೇನು ಎಂದು ಸಂಶೋಧನೆ ಮಾಡುತ್ತ ಹೊರಟಾಗ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಈ ರೀತಿ ಕೆಮಿಕಲ್ ಯುಕ್ತ ಊದುಗಡ್ಡಿ ಹೊಗೆ ಸೇವಿಸಿರುವುದು ಕೂಡ ಕ್ಯಾನ್ಸರ್ ಬರಲು ಒಂದು ಕಾರಣವಾಗಿದೆ.

ಯಾಕೆಂದರೆ ಇಂದು ತಯಾರಾಗುತ್ತಿರುವ ಊದುಗಡ್ಡಿಗಳು ಫ್ಯಾಕ್ಟಗಳಲ್ಲಿ ತಯಾರಿಸಿದ ಸಿಂಥೆಟಿಕ್ ಫ್ರಾಗ್ನೆನ್ಸ್ ಮತ್ತು ಕಲರ್ ನಿಂದ ಕೂಡಿದ್ದಾಗಿದೆ. ಪ್ರಾಕ್ಟರಿಗಳನ್ನು ಕೂಡ ಶುದ್ಧವಾದ ರಾ ಮೆಟೀರಿಯಲ್ ಬಳಸುವುದಿಲ್ಲ ಹಾಗಾಗಿ ಕೆಮಿಕಲ್ ಮ್ಯಾಕ್ಸ್ ಮಾಡಿಯೇ ಮ್ಯಾನಿಫ್ಯಾಕ್ಚರ್ ಮಾಡುವುದು.

ಇವುಗಳನ್ನು ಉರಿಸಿದಾಗ ಬರುವ ಸುವಾಸನೆಯು ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ. ಆಸ್ತಮ, ವೀಸಿಂಗ್ ಈ ರೀತಿ ಉಸಿರಾಟದ ಸಮಸ್ಯೆ ಹೊಂದಿರುವವರಿಗು ಕೂಡ ಇದರ ಹೊಗೆ ತೊಂದರೆ ಕೊಡುತ್ತದೆ. ಹಾಗಾಗಿ ಈಗ ಅನೇಕ ದೇವಸ್ಥಾನಗಳಲ್ಲಿ ಈ ರೀತಿ ಊದುಕಡ್ಡಿ ಬೆಳಗುವುದನ್ನು ನಿಲ್ಲಿಸಿದ್ದಾರೆ.

ನಮಗೂ ಸಹ ಯಾವುದೇ ಕೆಮಿಕಲ್ ಬಳಸದೆ ಗಂಧದಕಡ್ಡಿ ತಯಾರಿಸುವವರು ಅಥವಾ ಸೆಗಣೆಯಿಂದ ತಯಾರಿಸಿದ ಶುದ್ಧವಾದ ಊದುಬತ್ತಿ ಅಥವಾ ಸಾಂಬ್ರಾಣಿ ಸಿಗದಿದ್ದರೆ ಇದನ್ನು ಬಳಸದೆ ಇರುವುದೇ ಉತ್ತಮ ಎನ್ನುತ್ತಾರೆ ವೈದ್ಯರು ಹಲವರಿಗೆ ಕಸಿವಿಸಿ ಆಗುತ್ತದೆ.

ಹಸುವಿನ ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದಿಂದ 2 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!

ಇಷ್ಟು ದಿನ ಅಭ್ಯಾಸ ಆಗಿದೆ, ಮನಸ್ಸಿಗೆ ಸಮಾಧಾನ ಆಗುವುದಿಲ್ಲ ಎನ್ನುತ್ತಾರೆ. ಈ ಅಭ್ಯಾಸ ಹೇಗೆ ಬಂತು ಎಂದು ನೋಡುವುದಾದರೆ ಹಿಂದಿನ ಕಾಲದಲ್ಲಿ ಹೋಮ ಹವನ ಮಾಡುವಾಗ ಕೊಬ್ಬರಿ ಎಳ್ಳು ಶುದ್ಧವಾದ ತುಪ್ಪ, ಗಂಧದ ಎಣ್ಣೆ, ಶುದ್ಧವಾದ ಪಚ್ಚ ಕರ್ಪೂರ, ಕರ್ಪೂರದ ಎಣ್ಣೆ ಇತ್ಯಾದಿಗಳನ್ನು ಬಳಸುತ್ತಿದ್ದರು.

ಇವುಗಳನ್ನು ಉರಿಸಿದಾಗ ಒಂದು ರೀತಿಯ ಸುವಾಸನೆ ಬರುತ್ತಿತ್ತು. ಅದು ಮೈಂಡ್ ಫ್ರೆಶ್ ಆಗುವಂತೆ ಮಾಡುತ್ತಿತ್ತು. ಸುತ್ತಮುತ್ತಲ ವಾತಾವರಣವನ್ನು ಸಕಾರಾತ್ಮಕವಾಗಿರುವಂತೆ ಮಾಡುತ್ತಿತ್ತು. ಈಗಲೂ ಈ ಸುವಾಸನೆಯನ್ನು ನಾವು ನ್ಯಾಚುರಲ್ ಆಗಿ ನಮ್ಮ ಹಿತ್ತಲಲ್ಲಿ ಬೆಳೆಸಿದ ಹೂಗಳಲ್ಲೂ ಕೂಡ ಪಡೆಯಬಹುದು.

ಮಲ್ಲಿಗೆ ಹೂವು, ಸೇವಂತಿಗೆ, ಚೆಂಡು ಹೂ ಈ ರೀತಿ ಅನುಕೂಲವಾದ ಹೂಗಳನ್ನು ಮನೆಯಲ್ಲೇ ಬೆಳೆಸಿ ದೇವರಿಗೆ ಅರ್ಪಿಸಿದಾಗ ಕೂಡ ಆ ವಾತಾವರಣ ಸಕರತ್ಮಕವಾಗುತ್ತದೆ. ಆ ಸುವಾಸನೆ ಹಲವು ಸಮಯ ಇರುತ್ತದೆ, ನೆಗೆಟಿವಿಟಿ ಹೋಗುತ್ತದೆ. ಹಾಗಾಗಿ ಇಷ್ಟನ್ನೇ ಮಾಡಿದರೆ ಸಾಕು.

ಊದುಬತ್ತಿ

ಈಗ ಎಲ್ಲವೂ ಕೂಡ ಬ್ಯುಸಿನೆಸ್ ಹಾಗೆ ಹೋಗಿರುವುದರಿಂದ ಜನ ಮರುಳೋ ಜಾತ್ರೆ ಮರುಳೋ ಎನ್ನುವ ರೀತಿ ನಾವು ಕಳೆದು ಹೋಗುತ್ತಿದ್ದೇವೆ ಹಾಗೂ ಸಾಂಬ್ರಾಣಿಯನ್ನೇ ಬೆಳಗಬೇಕು ಎನಿಸಿದರೆ ಬ್ರಾಂಡ್ ಗಳ ಹಿಂದೆ ಹೋಗುವುದರ ಬದಲು ಶುದ್ಧವಾದ ಸೆಗಣಿಯಿಂದ ತಯಾರಿಸಿದ ಸಾಂಬ್ರಾಣಿಗಳು ಕೂಡ ಸಿಗುತ್ತವೆ. ಇದಕ್ಕೆ ಅತಿ ಕಡಿಮೆ ಬೆಲೆ ಇರುತ್ತದೆ, ಇದನ್ನು ಹಚ್ಚಿದರೆ ಸಾಕು. ಅತಿ ಹೆಚ್ಚು ಸುಗಂಧದಿಂದ ಕೂಡಿದ ಊದುಬತ್ತಿಗಳು ಕೆಮಿಕಲ್ ಯುಕ್ತವಾಗಿರುತ್ತವೆ ಹಾಗಾಗಿ ಇವುಗಳನ್ನು ಬಳಸುವುದನ್ನು ಬಿಡಿ ಎನ್ನುತ್ತಾರೆ ವೈದ್ಯರು.

WhatsApp Group Join Now
Telegram Group Join Now
Instagram Account Follow Now

Vivek Kudarimath, Chief Editor Vivekvarthe, Journalist, Video Editor, Content Writer, CEO Of VPG Digital Private Limited

Leave a Comment