ವಿವೇಕವಾರ್ತೆ : ಯಡಿಯೂರಪ್ಪ (BS Yediyurappa) ಕಡೆಗಣನೆಯಿಂದ ಬಿಜೆಪಿಗೆ ಸೋಲು ಆಯ್ತು ಎಂದು ಹೈಕಮಾಂಡ್ ವಿರುದ್ಧ ಬಿಜೆಪಿ ನಾಯಕರೇ ಬೇಸರ ಹೊರ ಹಾಕುತ್ತಿದ್ದಾರೆ. ಈ ಬಗ್ಗೆ ಕೂಡಲೇ ನಿರ್ಧಾರ ಮಾಡುವಂತೆ ಆಪ್ತರು ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಬಿಜೆಪಿ ಸೋಲಿಗೆ BSY ಕಡೆಗಣನೆ ಕಾರಣ. BSY ಮಾಸ್ ಲೀಡರ್, ಸಮುದಾಯದ ಬಲ. ಪಕ್ಷವನ್ನು ತಳಮಟ್ಟದಿಂದ ಕಟ್ಟಿದ ನಾಯಕ. ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಮೊದಲ ತಪ್ಪು ಎಂದು ಹೇಳುತ್ತಿದ್ದಾರೆ.
ನಾಯಕರು ಪಕ್ಷ ಬಿಡ್ತಿದ್ರೂ ವರಿಷ್ಠರು ಸೈಲೆಂಟ್ ಆಗಿದ್ದಾರೆ. BL ಸಂತೋಷ್ ಸಭೆಗೂ ಯಡಿಯೂರಪ್ಪರಿಗೆ ಆಹ್ವಾನ ನೀಡಿರಲಿಲ್ಲ. ಯಡಿಯೂರಪ್ಪ ಅವರ ಕಡೆಗಣನೆಯಿಂದ ಕಾರ್ಯಕರ್ತರೂ ದೂರವಾಗ್ತಿದ್ದಾರೆ ಎಂದು ಬಿಎಸ್ವೈ ಆಪ್ತರು ಹೇಳುತ್ತಿದ್ದಾರೆ.
ಯಡಿಯೂರಪ್ಪ ಆಪ್ತರ ಈ ಹೇಳಿಕೆಗಳ ಹಿಂದೆ ಇದೆಯಾ ಒತ್ತಡ ತಂತ್ರ ಇದೆನಾ? ಈ ಹೇಳಿಕೆಗಳ ಮೂಲಕ ಹೈಕಮಾಂಡ್ಗೆ ಸ್ಪಷ್ಟ ಸಂದೇಶದ ರವಾನೆ ಮಾಡುತ್ತಿದ್ದಾರಾ ಎಂಬ ಚರ್ಚೆಗಳು ಕಮಲ ಅಂಗಳದಲ್ಲಿ ಶುರುವಾಗಿವೆ.
ಪುತ್ರ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಲು ಆಪ್ತರ ಮೂಲಕ ಹೈಕಮಾಂಡ್ ಮೇಲೆ ಯಡಿಯೂರಪ್ಪ ಒತ್ತಡ ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಿಜೆಪಿ ರಾಜ್ಯಾಧ್ಯಕ್ಷ ರೇಸ್‌ನಲ್ಲಿ ವಿಜಯೇಂದ್ರ ಹೆಸರು ಮುನ್ನಲೆಯಲ್ಲಿದೆ. ಲಿಂಗಾಯತ ಸಮುದಾಯದ ಬೆಂಬಲದ ಬಗ್ಗೆಯೂ ಯಡಿಯೂರಪ್ಪ ಆಪ್ತರು ಮಾತನಾಡುತ್ತಿದ್ದಾರೆ.
ಪಕ್ಷ ಸಂಘಟನೆಗೆ ಯುವ ನಾಯಕನಿಗೆ ಮಣೆ ಹಾಕಬೇಕು? ಮಗನಿಗೆ ಮಣೆ ಹಾಕಿದ್ರೆ, ಅಪ್ಪನಿಗೆ ಗೌರವ ನೀಡಿದಂತೆ ಎಂಬ ಸಂದೇಶವನ್ನು ರವಾನಿಸಿದ್ದಾರಂತೆ. ಪುತ್ರನಿಗೆ ನಾಯಕತ್ವ ಕಟ್ಟಿ, ಪಕ್ಷ ಬಲಿಷ್ಠಗೊಳಿಸೋದು ಯಡಿಯೂರಪ್ಪ ಅವರ ಪ್ಲಾನ್ ಆಗಿದೆಯಂತೆ.
ಈ ಮೂಲಕ ಪುತ್ರನಿಗೆ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಲಿಂಗಾಯತ ಮತಗಳನ್ನು ಸೆಳೆಯುವ ಗುರಿಯನ್ನು ಯಡಿಯೂರಪ್ಪ ಹೊಂದಿದ್ದಾರೆ ಎನ್ನಲಾಗ್ತಿದೆ.