Friday, September 22, 2023

BREAKING NEWS : ಬೆಳಗಾವಿಯಲ್ಲಿ ತಡರಾತ್ರಿ ಭೀಕರ ಹತ್ಯೆ : ಚಾಕುವಿನಿಂದ ಇರಿದು ಇಬ್ಬರ ಕೊಲೆ

ಬೆಳಗಾವಿ- ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದಲ್ಲಿ ತಡರಾತ್ರಿ ಅಪರಿಚಿತರು ಚಾಕುವಿನಿಂದ ಇರಿದು ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಶಿಂದೊಳ್ಳಿ ಗ್ರಾಮದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ವೇಳೆ ಬಂದ ದುಷ್ಕರ್ಮಿಗಳು ಇಬ್ಬರು ವ್ಯಕ್ತಿಗಳ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಬಸವರಾಜ ಬೆಳಗಾಂವಾಕ್ಕರ್ (23), ಗಿರೀಶ್ ನಾಗಣ್ಣನವರ್ (34) ಮೃತರು ಎಂದು ಗುರುತಿಸಲಾಗಿದೆ.

ಶಿಂದೊಳ್ಳಿ ಗ್ರಾಮದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಈ ವೇಳೆ ಮೈದಾನಕ್ಕೆ ಅಪರಿಚಿತ ವಾಹನ ನುಗ್ಗಿದ್ದು, ಯುವಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ವಾಹನದಿಂದ ಕೆಳಗಿಳಿದ ಅಪರಿಚಿತರು ಇಬ್ಬರು ಯುವಕರ ಮೇಲೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಸದ್ಯ ಮೃತದೇಹಗಳನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಆಸ್ಪತ್ರೆ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ.

RELATED ARTICLES

ಬೆಳಗಾವಿ : ಲಾಡ್ಜ್​​ನಲ್ಲಿ ವೈಶ್ಯಾವಾಟಿಕೆ ದಂಧೆ ; ಇಬ್ಬರು ಯುವತಿಯರ ರಕ್ಷಣೆ.!

ವಿವೇಕವಾರ್ತೆ : ಜಿಲ್ಲೆಯ  ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಲಾಗಿದೆಂದು ಮಾಹಿತಿ ಲಭ್ಯವಾಗಿದೆ. ಕುಡಚಿ ಪಟ್ಟಣದ ಲಾಡ್ಜ್ ಒಂದರಲ್ಲಿ...

ಸುವರ್ಣ ವಿಧಾನಸೌಧ ಬಳಿ ಮಗುಚಿದ ರಾಜ್ಯ ಸಾರಿಗೆ ಬಸ್..!

ವಿವೇಕವಾರ್ತೆ : ಬೆಳಗಾವಿ-ಕೆ.ಕೆ.ಕೊಪ್ಪ ನಡುವೆ ಸಂಚರಿಸುವ ಬಸ್ ಸುವರ್ಣ ವಿಧಾನಸೌಧದ ಬಳಿ ರಸ್ತೆ ಪಕ್ಕ ಮಗುಚಿದ ಪರಿಣಾಮ ಬಸ್ಸಿನಲ್ಲಿದ್ದವರು ಗಾಯಗೊಂಡಿದ್ದಾರೆ. ದುರದೃಷ್ಟವಶಾತ್ ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇರಲಿಲ್ಲ. ಜೊತೆಗೆ ತುಸು ವಾಲಿದೆ. ಪೂರ್ಣ...

ಶಿವ ಶರಣರ ತತ್ವಾದರ್ಶ ಅನುಸರಿಸಿದರೆ ಬದುಕು ಸಾರ್ಥಕ : ಚಿದಾನಂದ ಸವದಿ

ವಿವೇಕವಾರ್ತೆ: ಬಸವಾದಿ ಶಿವಶರಣರ ತತ್ವ, ಸಂದೇಶ ಅಳವಡಿಸಿಕೊಂಡು ನಡೆದರೆ ನಮ್ಮ ಬದುಕು ಸಾರ್ಥಕತೆ ಹೊಂದಲು ಸಾಧ್ಯ ಎಂದು ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಚಿದಾನಂದ ಲಕ್ಷ್ಮಣ ಸವದಿ ಅಭಿಮತ ವ್ಯಕ್ತಪಡಿಸಿದರು. ಅವರು ಪಟ್ಟಣದ ಗಚ್ಚಿನಮಠದಲ್ಲಿ...
- Advertisment -

Most Popular

ಮೊದಲ ರಾತ್ರಿ ಪತ್ನಿಯ ಮದುವೆ ಸೀರೆಗೆ ಕೊರಳೊಡ್ಡಿದ ಯುವಕ.? ಸಾವು ನಿಗೂಢ.!

ವಿವೇಕ ವಾರ್ತೆ : ಮದುವೆಯಾದ ಎರಡೇ ದಿನದಲ್ಲಿ ಯುವಕನೊಬ್ಬ ಪತ್ನಿಯ ಮದುವೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನೈನ ಚೆಂಗಲ್ಪಟ್ಟು ಏರಿಯಾದಲ್ಲಿ ನಡೆದಿದೆ. ಮೃತ ವ್ಯಕ್ತಿ ಸರವಣನ್​ ಎಂದು ವರದಿಯಾಗಿದೆ. ಈತ...

ಮಾಡದ ತಪ್ಪಿಗೆ ಠಾಣೆಗೆ ಕರೆಸಿ ಥಳಿಸಿದ್ದ ಪೊಲೀಸರು ; ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ.!

ವಿವೇಕವಾರ್ತೆ : ಪೊಲೀಸರ ಕಿರುಕುಳಕ್ಕೆ ಬೇಸತ್ತು ಡೆತ್‌ನೋಟ್‌ ಬರೆದಿಟ್ಟು ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡೆತ್‌ನೋಟ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ತಲಘಟ್ಟಪುರದ ನಿವಾಸಿ ನಾಗರಾಜ್(47) ಎನ್ನಲಾಗಿದೆ. ‘ವೈಯಾಲಿಕಾವಲ್‌ ಠಾಣೆ...

ಮನೆಯಲ್ಲಿದ್ದ 6 ಜನರನ್ನು ಕಟ್ಟಿ ಹಾಕಿ ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ..!

ವಿವೇಕ ವಾಣಿ : ಹುಬ್ಬಳ್ಳಿಯ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್ ನಲ್ಲಿ ಉಲ್ಲಾಸ್ ದೊಡ್ಮನಿ ಎಂಬುವರ ಮನೆಯಲ್ಲಿ ಬಹುದೊಡ್ಡ ಕಳ್ಳತನ ನಡೆಸಲಾಗಿದೆ. ಅವರ ಮನೆಯ ಕಿಟಕಿಯ ಕಬ್ಬಿಣದ ಗ್ರಿಲ್ ಕಟ್ ಮಾಡಿದ ಕಳ್ಳರು ಮನೆಯೊಳಗೆ...

ಬೆಳಗಾವಿ : 4 ತಿಂಗಳ ಮಗುವನ್ನು ನೆಲಕ್ಕೆಸೆದು ಕೊಂದ ಪೊಲೀಸ್ ಕಾನ್ಸ್‌ಟೇಬಲ್ ಅಂದರ್.!

ವಿವೇಕ ವಾರ್ತೆ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬ, ನಾಲ್ಕು ತಿಂಗಳ ತನ್ನ ಮಗುವನ್ನು ನೆಲಕ್ಕೆ ಎಸೆದು ಕೊಲೆ ಮಾಡಿದ ಘಟನೆ ನಡೆದಿದ್ದು, ಪರಾರಿಯಾಗಿದ್ದ ಆರೋಪಿಯನ್ನು...
error: Content is protected !!