spot_img
spot_img
spot_img
spot_img
spot_img
spot_img

Bigg Boss Kannada Finale: ಇಂದು ಬಿಗ್ ಬಾಸ್ ಫಿನಾಲೆ: ಸುದೀಪ್‌ ಪಕ್ಕ ನಿಲ್ಲುವರ್ಯಾರು?

Published on

spot_img

ನೂರು ಕಂತುಗಳ ದಿನಗಳನ್ನು ಪೂರೈಸಿ ಕೊನೆಗೂ ಬಿಗ್ ಬಾಸ್ (Bigg Boss Kannada) ಫಿನಾಲೆಗೆ ಬಂದು ತಲುಪಿದೆ. ಇಂದು ಸಂಜೆಯಿಂದ ಫಿನಾಲೆ ಸಂಚಿಕೆಯನ್ನು ಪ್ರಸಾರ ಮಾಡಲು ವಾಹಿನಿಯು ಸಿದ್ಧ ಮಾಡಿಕೊಂಡಿದೆ. ಸಂಜೆ 7.30ರಿಂದ ಫಿನಾಲೆ ಸಂಚಿಕೆಯನ್ನು ವೀಕ್ಷಿಸಬಹುದಾಗಿದೆ. ಫಿನಾಲೆ (Finale) ಕಾರಣದಿಂದಾಗಿ ತಮ್ಮದೇ ಆದ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ ಬಿಗ್ ಬಾಸ್ ಟೀಮ್.

ಶೂಟಿಂಗ್ ನಲ್ಲಿ ನಡೆಯುವ ವಿಷಯಗಳು ಬಹಿರಂಗವಾಗ ಬಾರದು ಎನ್ನುವ ಕಾರಣಕ್ಕಾಗಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯಂತೆ. ಸಾಮಾನ್ಯ ಪ್ರೇಕ್ಷಕರಿಗೆ ಇಂದು ಪ್ರವೇಶವಿಲ್ಲ. ಅವರೇ ಆಯ್ಕೆ ಮಾಡಿರುವ ಕೆಲವೇ ಕೆಲವೇ ಪ್ರೇಕ್ಷಕರು ಇಂದು ಇರಲಿದ್ದಾರೆ.

ಈಗಾಗಲೇ ನಾಮಿನೇಟ್ ಆಗಿರುವ ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ನಿನ್ನೆಯಿಂದಲೇ ಒಂದಷ್ಟು ಚಿತ್ರೀಕರಣದ ಕೆಲಸವನ್ನೂ ಮುಗಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಇವತ್ತು ಮತ್ತು ನಾಳೆ ಎರಡು ದಿನಗಳ ಕಾಲ ಫಿನಾಲೆ ಶೂಟಿಂಗ್ ನಡೆಯಲಿದೆ. ಜೊತೆಗೆ ಇವತ್ತು ಇಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರಂತೆ.

ಡ್ರೋನ್ ಪ್ರತಾಪ್, ಸಂಗೀತಾ ಶೃಂಗೇರಿ, ಕಾರ್ತಿಕ್, ತುಕಾಲಿ ಸಂತು, ವರ್ತೂರು ಸಂತು ಹಾಗೂ ವಿನಯ್ ಸದ್ಯ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಸಂಗೀತಾ, ವಿನಯ್ ಹಾಗೂ ಡ್ರೋನ್ ಪ್ರತಾಪ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಅಂತಿಮವಾಗಿ ಬಿಗ್ ಬಾಸ್ ಪಟ್ಟ ಯಾರ ಪಾಲಾಗಲಿದೆ ಎನ್ನುವುದು ನಾಳೆ ಗೊತ್ತಾಗಲಿದೆ.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!