Bigg Boss Kannada: ಈ ಬಾರಿ ಗೆದ್ದವರಿಗೆ ಸಿಗುವ ಹಣವೆಷ್ಟು ಗೊತ್ತಾ: ಇಲ್ಲಿದೆ ಉತ್ತರ!

Published on

spot_img
spot_img

ವಿವೇಕವಾರ್ತೆ :ಕನ್ನಡದ ಬಿಗ್ ಬಾಸ್ ಸೀಸನ್ 10 ಅಕ್ಟೋಬರ್ 8 ರಿಂದ ಅದ್ಧೂರಿಯಾಗಿ ಶುರುವಾಗಲಿದೆ. ಬಿಗ್ ಬಾಸ್ ಪ್ರಸಾರವಾಗುವ ಮುನ್ನ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಹತ್ತು ಹಲವಾರು ವಿಷಯಗಳನ್ನು ಹಂಚಿಕೊಂಡಿತು ಕಲರ್ಸ್ ಕನ್ನಡ ವಾಹಿನಿ. ಸಹಜವಾಗಿ ಈ ಬಾರಿ ಗೆದ್ದವರಿಗೆ ಎಷ್ಟು ಮೊತ್ತದ ಬಹುಮಾನ (Prize) ಸಿಗಲಿದೆ ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಪ್ರತಿ ಸಲವೂ ಬಿಗ್ ಬಾಸ್ ಗೆದ್ದವರಿಗೆ ಟ್ರೋಫಿ ಮತ್ತು ಭಾರೀ ಮೊತ್ತದ ಹಣವನ್ನೇ ಬಹುಮಾನವಾಗಿ ನೀಡಲಾಗುತ್ತದೆ. ಜೊತೆಗೆ ಇತರ ಬಹುಮಾನಗಳು ಕೂಡ ಇರಲಿವೆ. ಈ ಬಾರಿ ಬಿಗ್ ಬಾಸ್ ಗೆದ್ದವರಿಗೆ ಐವತ್ತು ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ವಾಹಿನಿಯು ತಿಳಿಸಿದೆ. ಜೊತೆಗೆ ಇತರ ಬಹುಮಾನಗಳು ಕೂಡ ಮುಂದುವರೆಯಲಿವೆ.

ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada 10) ಯಾವಾಗ ಎಂಬುದಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ. ಅಕ್ಟೋಬರ್ 8ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ಶುರುವಾಗಲಿದೆ. ವಾಹಿನಿಯ ‘ಅನುಬಂಧ 2023’ ಅವಾರ್ಡ್ಸ್ ಸಮಾರಂಭದಲ್ಲಿ ಬಿಗ್ ಬಾಸ್ ಯಾವಾಗ ಶುರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗಡೆ ಹೋಗಲಿದ್ದಾರೆ ಎಂಬ ಪ್ರಶ್ನೆ ಏಳೋದು ಸಹಜ. ಮೊದಲ ಬಾರಿಗೆ ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಮೊದಲ ಸ್ಪರ್ಧಿಯನ್ನು ಕಲರ್ಸ್ ವಾಹಿನಿ ರಿವೀಲ್ ಮಾಡಿದೆ.

ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ವಾಹಿನಿಯಾಗಲಿ, ಬಿಗ್ ಬಾಸ್ ಮನೆ ಪ್ರವೇಶ (Bigg Boss House) ಮಾಡುವ ಸ್ಪರ್ಧಿಗಳಾಗಲೀ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವ ವಿಚಾರವನ್ನು ರಿವೀಲ್ ಮಾಡೋದಿಲ್ಲ. ಸ್ಪರ್ಧಿಗಳು ಯಾರು ಅನ್ನೋದು ಬಿಗ್ ಬಾಸ್ ಶೋ ಲಾಂಚ್ ಆಗುವ ದಿನವೇ ಗೊತ್ತಾಗುತ್ತದೆ. ಆದರೆ ಈ ಬಾರಿ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧಿ ಯಾರು ಅನ್ನೋದನ್ನು ಇದೀಗ ವಾಹಿನಿ ಹೇಳಿದೆ.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!