ವಿವೇಕವಾರ್ತೆ : ರಾಜ್ಯ ಸರ್ಕಾರದಿಂದಲೇ ಸ್ವಂತ ಏರ್ ಲೈನ್ಸ್ ಆರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು 100 ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ “ಮೊದಲ 100ದಿನಗಳು ಪರಿವರ್ತನೆಗೆ ಬುನಾದಿ, ಕರ್ನಾಟಕದ ಉಜ್ವಲ ಕೈಗಾರಿಕಾ ಭವಿಷ್ಯಕ್ಕೆ ದಿಕ್ಸೂಚಿ” ಎಂಬ 100 ದಿನಗಳ ಸಾಧನೆಯ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಮುಂದೆ ಎಲ್ಲ ವಿಮಾನ ನಿಲ್ದಾಣಗಳನ್ನು ನಾವೇ ನಿರ್ವಹಣೆ ಮಾಡುವ ಬಗ್ಗೆ ನಿರ್ಧರಿಸಿದ್ದೇವೆ. ವಿಜಯಪುರ, ಕಾರವಾರ, ಬೀದರ್ ಸೇರಿ ಮುಂದೆ ಎಲ್ಲ ವಿಮಾನ ನಿಲ್ದಾಣಗಳನ್ನು ನಾವೇ ನಿರ್ವಹಣೆ ಮಾಡುತ್ತೇವೆ ಎಂದರು.ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯದಿಂದಲೇ ನಿರ್ವಹಣೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಸ್ವಂತ ಏರ್ ಲೈನ್ಸ್ ಆರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
https://twitter.com/MBPatil/status/1697525924856557702?ref_src=twsrc%5Etfw%7Ctwcamp%5Etweetembed%7Ctwterm%5E1697525924856557702%7Ctwgr%5E7e9393094f01b643211849e44defdcd12fe35a50%7Ctwcon%5Es1_c10&ref_url=http%3A%2F%2Fapi-news.dailyhunt.in%2F