ಬೆಳಗಾವಿ ಜಿಲ್ಲೆ ಬಿಜೆಪಿ ಟಿಕೆಟ್ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಂದ ಮಹತ್ವದ ಹೇಳಿಕೆ

ಬೆಳಗಾವಿ :ಆಡಳಿತರೂಢ ಬಿಜೆಪಿಯಲ್ಲಿ ದಿನೇ ದಿನೇ ಟಿಕೆಟ್ ಹಂಚಿಕೆ ವಿಷಯವಾಗಿ ಭಿನ್ನಮತ ನಡೆದಿದೆ. ಅದರಲ್ಲೂ ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಬಿಜೆಪಿ ಟಿಕೆಟ್ ಗಾಗಿ ದೊಡ್ಡ ಮಟ್ಟದ ಪೈಪೋಟಿ ಏರ್ಪಟ್ಟಿದೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಸೋಮವಾರ ಅವರು ಹೇಳಿದ್ದೇನು ?
ಇಡೀ ರಾಜ್ಯಾದ್ಯಂತ ಪದಾಧಿಕಾರಿಗಳು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.

ಎರಡು ದಿನಗಳಿಂದ ಎಲ್ಲಾ ಜಿಲ್ಲೆಯ ಕೋರ್ ಕಮಿಟಿ ಸದಸ್ಯರನ್ನು ಪಕ್ಷದ ಅತ್ಯಂತ ಕೆಲ ಪ್ರಮುಖ ಮುಖಂಡರ ನೇತೃತ್ವದಲ್ಲೂ ಸಭೆ ಮಾಡಿದ್ದೇವೆ.
ಎಲ್ಲರೂ ಕಳಿತುಕೊಡು ಬೆಂಗಳೂರಿನಲ್ಲಿ ಮಾಹಿತಿಯನ್ನು ಪಡೆದಿದ್ದೇವೆ.

ನಾಳೆಯಿಂದ ಕಾರ್ಯಕರ್ತರ ಅಭಿಪ್ರಾಯ ಮತ್ತು ಕೋರ್ ಕಮಿಟಿ ಸದಸ್ಯರು ವ್ಯಕ್ತಪಡಿಸಿದ ಅಭಿಪ್ರಾಯ‌ ಪಡೆಯಲಾಗುತ್ತದೆ.

ಅಳೆದು ತೂಗಿ ನೋಡಿ ನಾವು ನಾಳೆ ಮತ್ತು ನಾಡಿದ್ದು ವಿಸ್ತೃತವಾಗಿ ಸಭೆ ಮಾಡಲಿದ್ದೇವೆ.
ಅದಕ್ಕಿಂತ ಮೊದಲು ಕೆಲವು ಹೆಚ್ಚಿನ ವಿವರವನ್ನು ಪಡೆಯುತ್ತಿದ್ದೇವೆ‌. ಬೆಳಗಾವಿ ಮತ್ತು ಬೆಂಗಳೂರು ಅತೀ ಹೆಚ್ಚು ಸ್ಥಾನ ಹೊಂದಿರುವ ಪ್ರದೇಶ.

ಆದ್ದರಿಂದ ಇನ್ನೂ ಕೆಲವು ಹೆಚ್ಚಿನ ವಿವರ ಸಂಗ್ರಹಿಸಿ ನಾಳೆ ರೆಕ್ಮಂಡ್ ಮಾಡುತ್ತೆವೆ

ರಾಷ್ಟ್ರೀಯ ಚುನಾವಣಾ ಸಮಿತಿ, ಸಂಸದೀಯ ಮಂಡಳಿಗೆ ರೆಕ್ಮಂಡ್ ಮಾಡುತ್ತೇವೆ.
ಸಭೆಯನ್ನ ಮುಗಿಸಿಕೊಂಡು ಇಂದು ಸಂಜೆ ಬೆಂಗಳೂರಿಗೆ ಹೋಗುತ್ತೇವೆ.

ಕೋರ್ ಕಮಿಟಿ ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ನಾಯಕರಿಂದ ಗದ್ದಲ ಗಲಾಟೆ ವಿಚಾರ :

ಯಾವುದೇ ಗದ್ದಲ ಇಲ್ಲಾ ಗಲಾಟೆ ಇಲ್ಲಾ ಕಾಂಪಿಟೇಷನ್ ಜಾಸ್ತಿ ಇದ್ದಲ್ಲಿ ಹೆಚ್ಚು ಸೀಟ್‌ಗಳಿದ್ದಲ್ಲಿ ಹೆಚ್ಚು ಗಮನ ಕೊಡಬೇಕಾಗುತ್ತೆ.

ರಮೇಶ್ ಜಾರಕಿಹೊಳಿ ಇಲ್ಲೇ ಇದ್ದಾರೆ ಅವರನ್ನ ಕೇಳಿ ಯಾವ ಕಿತ್ತಾಟ ಇಲ್ಲ ಎಂದು ಪ್ರಹ್ಲಾದ್ ಜೋಶಿ ಅವರು ಸ್ಪಷ್ಟಪಡಿಸಿದರು.

error: Content is protected !!