ವಿವೇಕವಾರ್ತೆ : ಗಾಲಿ ಜನಾರ್ದನ ರೆಡ್ಡಿ ಅವರು ಭಾಜಪದಿಂದ ಅಸಾಮಾಧಾನಗೊಂಡು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನ ಸ್ಥಾಪಿಸಿ ಮೊದಲ ಚುನಾವಣೆಯಲ್ಲಿ ಜನರ ಮನಸನ್ನ ಗೆದ್ದಿದೆ, ರಾಜ್ಯ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷದ ಮಹತ್ವ 70ರ ದಶಕದಿಂದಲೂ ಸಹ ಹಿಡಿತದಲ್ಲಿದೆ, ಬೆಳಗಾವಿ ಜಿಲ್ಲೆಯಲ್ಲಿ ಪಕ್ಷವನ್ನ ಸಂಘಟನೆ ಮಾಡಿ ಬೆಳಗಾವಿ ರಾಜಕಾರಣದಲ್ಲಿ ಗಟ್ಟಿಯಾಗಿ ನೆಲೆ ಕಾಣುವ ಕನಸು ಬಹುಷಃ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಪ್ರವೀಣ ಬಸವರಾಜ ಹಿರೇಮಠ ಅವರ ಹೆಗಲ ಮೇಲೆ ಇದೆ ಅನ್ನುವುದು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
ಪ್ರವೀಣ ಹಿರೇಮಠ ಅವರು ಅನೇಕ ದೇಶಗಳಲ್ಲಿ ಕೆಲಸ ಮಾಡಿದ ಅನುಭವವಿದೆ ಲಕ್ಷಾಂತರ ರೂಪಾಯಿಯ ಸಂಬಳ ಬಿಟ್ಟು ರಾಜಕಾರಣದಿಂದ ಜನರಿಗೆ ಏನಾದರೂ ಸಹಾಯ ಮಾಡಬೇಕೆಂಬ ತುಡಿತದಿಂದ ವಿಧಾನಸಭಾ ಚುನಾವಣೆಗೆ ನಿಂತಿದ್ದರು, ಆ ಸಮಯದಲ್ಲೂ ಸಹ ಪಕ್ಷ ಸಂಘಟನೆ ಮಾಡಿ ಸಾಕಷ್ಟು ಹೆಸರು ಗೌರವ ಸಂಪಾದಿಸಿದ್ದರು, ಆದರೆ ಈಗ ವಿಧಾನಸಭಾ ಚುನಾವಣೆ ಮುಗಿದು ಲೋಕಸಭಾ ಚುನಾವಣೆ ಬರುತ್ತಿರುವದರಿಂದ ಪಕ್ಷ ಸಂಘಟನೆಯಲ್ಲಿ ಮತ್ತೆ ತೊಡಗಿಕೊಂಡಿದ್ದಾರೆ, ರಾಜಕಾರಣದಲ್ಲಿ ಇನ್ನೂ ಅಷ್ಟು ಪಳಗದೆ ಇದ್ದರೂ ಸಹ ಜನರ ಸೇವೆಯ ಕಾನ್ಸೆಪ್ಟ್ ಅವರನ್ನು ಕೈಹಿಡಿಯುವದರಲ್ಲಿ ಏನು ಸಂಶಯವಿಲ್ಲ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ, ಒಂದು ಅತ್ಯುತ್ತಮ ಹುದ್ದೆಯಲ್ಲಿದ್ದು ರಾಜಿನಾಮೆ ಕೊಟ್ಟು ಪ್ರಾದೇಶಿಕ ಪಕ್ಷವನ್ನ ಬೆಂಬಲಿಸಿ ಸಂಘಟಿಸಿ ಜನರಿಗೆ ಸಹಾಯ ಮಾಡುವುದು ಸಣ್ಣ ಮಾತಲ್ಲ, ಅದಕ್ಕೂ ಸಹ ಎರಡು ಗುಂಡಿಗೆ ಬೇಕು.
ಯಾರಿಗೆ ಲಕ್ಷಾಂತರ ರೂಪಾಯಿಯ ಸಂಬಳದ ಅವಶ್ಯಕತೆ ಇರುವುದಿಲ್ಲ..? ಎಲ್ಲರಿಗೂ ಸಹ ಒಂದು ಒಳ್ಳೆಯ ಲೈಫ್ ಲೀಡ್ ಮಾಡ್ಬೇಕು ಎನ್ನುವ ಕನಸು ಇದ್ದೇ ಇರುತ್ತೆ ಅಂತಹ ಜೀವನ ಸಿಗುವುದು ಸಹ ಅಪರೂಪವೇ, ಅಂತಹ ಜೀವನ ಸಿಕ್ಕರು ಸಹ ಜನಸಾಮಾನ್ಯರ ಸಲುವಾಗಿ ತ್ಯಾಗ ಮಾಡುವುದು ಸುಲಭದ ಮಾತಲ್ಲ. ಇನ್ನೇನು ಲೋಕಸಭಾ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದೆ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಟಿಕೆಟ್ ಪಡೆದು ಚುನಾವಣೆಗೆ ನಿಲ್ಲುತ್ತಾರಾ ಕಾಯ್ದು ನೋಡಬೇಕಿದೆ.
ಪೊಲಿಟಿಕಲ್ ಬ್ಯೂರೋ ವಿವೇಕವಾರ್ತೆ.