ವಿವೇಕವಾರ್ತೆ : Belagavi Breaking News : ನಿವೃತ್ತ ಯೋಧನನ್ನು ಹತ್ಯೆಗೈದ ಬಾಮೈದ ಮುಂದೆ ಓದಿ..
ಚಾಕುವಿನಿಂದ ಕತ್ತು ಸೀಳಿ ನಿವೃತ್ತ ಯೋಧನನ್ನು ಬಾಮೈದ ಹತ್ಯೆಗೈದಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಶನಿವಾರ ನಡೆದಿದೆ. ಮೃತರನ್ನು ಚಿಕ್ಕೋಡಿಯ (Chikkodi) ವಿದ್ಯಾನಗರ ನಿವಾಸಿ ನಿವೃತ್ತ ಯೋಧ (Ex Army Officer) ಈರಗೌಡ ಟೋಪಗೋಳ(45) ಎಂದು ಗುರುತಿಸಲಾಗಿದೆ.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷನಿಗೆ ಚಪ್ಪಲಿ ಸೇವೆ ಮಾಡಿದ ಮಹಿಳೆಯರು..! ಕಾರಣ ಕೇಳಿದ್ರೆ ಶಾಕ್ ಆಗ್ತಿರಾ..?
ಮೃತ ಈರಗೌಡ ಪತ್ನಿಯ ಸಹೋದರ (Brother) ಸಂಜಯ್ ಭಾಕರೆ ಕೊಲೆಗೈದ ಆರೋಪಿ ಎಂದು ತಿಳಿದುಬಂದಿದೆ.ಮೂಲತಃ ಜೈನಾಪುರ ಗ್ರಾಮದವರಾಗಿದ್ದ ಈರಗೌಡ ಟೋಪಗೋಳ ಸೇನೆಯಿಂದ( army) ನಿವೃತ್ತಿ ಹೊಂದಿದ ಬಳಿಕ ಸ್ಟೋನ್ ಕ್ರಷರ್ (stone cruiser) ಘಟಕ ನಡೆಸುತ್ತಿದ್ದರು. ಶನಿವಾರ ಸಂಜೆ ಈರಗೌಡರ ಭೇಟಿಗೆ ಆಗಮಿಸಿದ್ದ ಸಂಜಯ್ ಏಕಾಏಕಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಗಂಭೀರ ಗಾಯಗೊಂಡ ಈರಗೌಡ ಅವರನ್ನು ಆಸ್ಪತ್ರೆಗೆ (Hospital) ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕೌಟುಂಬಿಕ ಕಲಹ (Family issue) ಹಿನ್ನೆಲೆ ಕೊಲೆ ನಡೆದಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು (Chikkodi Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.