ವಿವೇಕವಾರ್ತೆ : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ M.G ರಸ್ತೆಯಲ್ಲಿ ಚಿನ್ನದಂಗಡಿಗೆ ಬರುವ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಮಾಲೀಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.
ಮಹಮ್ಮದ್ ಅಮೀರ್ ಎಂಬಾತನೇ ಹಿಗ್ಗಾಮುಗ್ಗಾ ಒದೆ ತಿಂದಿದ್ದಾನೆ. ಈತ ತನ್ನ ಅಂಗಡಿ ಬರುವ ಮಹಿಳೆಯರ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದ.
ಅಪ್ರಾಪ್ತ ವಯಸ್ಸಿನ ಬಾಲಕಿ ತನ್ನ ತಾಯಿ ಜೊತೆ ಚಿನ್ನದಂಗಡಿಗೆ ಬಂದಿದ್ದಳು. ಈ ವೇಳೆ ಮಹಮ್ಮದ್ ಅಮೀರ್, ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.
ಇದು ತಿಳಿಯುತ್ತಿದ್ದಂತೆ ಬಾಲಕಿಯ ತಾಯಿ ಸೇರಿದಂತೆ ಸಾರ್ವಜನಿರು ಅಮೀರ್ಗೆ ಧರ್ಮದೇಟು ನೀಡಿದ್ದಾರೆ. ಬಾಲಕಿಯ ತಾಯಿ ಅಮೀರ್ಗೆ ಚಪ್ಪಲಿಯಿಂದ ಥಳಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ನಡೆದ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತರೀಕೆರೆ ಪೊಲೀಸ್ ಠಾಣೆಯಲ್ಲಿ ಅಮೀರ್ ವಿರುದ್ಧ ಪ್ರಕರಣ ದಾಖಲಾಗಿದೆ.