spot_img
spot_img
spot_img
spot_img
spot_img
spot_img

BBK SEASON 10: ದೊಡ್ಮನೆಯಿಂದ ಹೊರ ಬಂದ ಡ್ರೋನ್‌ ಪ್ರತಾಪ್‌?

Published on

spot_img

ವಿವೇಕವಾರ್ತೆ : ʻಬಿಗ್‌ ಬಾಸ್‌ʼ ಸೀಸನ್‌ 10ರ (BBK SEASON 10) ಪ್ರಬಲ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ಡ್ರೋನ್‌ ಪ್ರತಾಪ್‌ ಇದೀಗ ದೊಡ್ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ‘ಬಿಗ್ ಬಾಸ್‌’ ಮನೆಯೊಳಗೆ ಬಂದ ಮೇಲೆ ಪಾಸಿಟಿವ್ ಇಮೇಜ್‌ ಡ್ರೋನ್‌ ಪ್ರತಾಪ್‌ ಅವರಿಗೆ ಸೃಷ್ಟಿಯಾಗಿತ್ತು.

ಇದೀಗ ನಮ್ರತಾ ಬಳಿಕ ಡ್ರೋನ್‌ ಪ್ರತಾಪ್‌ ಅವರು ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಡ್ರೋನ್ ಪ್ರತಾಪ್‌ ಎಮಿನೇಟ್ ಆಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದೀಗ ಮನೆಯಲ್ಲಿ 7 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈಗಾಗಲೇ ʻಬಿಗ್‌ ಬಾಸ್‌ʼ ಗ್ರ್ಯಾಂಡ್‌ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ‘ಬಿಗ್ ಬಾಸ್‌’ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ. ಎಲಿಮಿನೇಷನ್‌ನಲ್ಲಿ ಡ್ರೋನ್ ಪ್ರತಾಪ್‌ ಹೊರಬಂದಿದ್ದಾರಂತೆ ಎನ್ನಲಾಗುತ್ತಿದೆ.

ಇನ್ನೊಂದೆಡೆ ಈ ಸುದ್ದಿ ವೈರಲ್‌ ಆಗುತ್ತಿದ್ದಂತೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಪ್ರತಾಪ್ ಅವರನ್ನು ಹೊರಗೆ ಹಾಕಿರಲಕ್ಕಿಲ್ಲ ಎಂಬ ಚರ್ಚೆಗಳು ಆಗುತ್ತಿವೆ. ಮತ್ತೆ ಕೆಲವರು ‘ಬಿಗ್ ಬಾಸ್‌’ ಮನೆಯಲ್ಲಿ ‘ಪ್ರಾಂಕ್ ಎಲಿಮಿನೇಷನ್’ ನಡೆದಿದೆ ಎಂದೂ ಹೇಳುತ್ತಿದ್ದಾರೆ. ಪ್ರತಾಪ್‌ ಔಟ್‌ ಆಗಿರುವ ಬಗ್ಗೆ ಕಲರ್ಸ್‌, ಜಿಯೋ ಯಾವುದೇ ಅಧಿಕೃತ ಮಾಹಿತನ್ನು ಹಂಚಿಕೊಂಡಿಲ್ಲ. ಇಂದಿನ ಸಂಚಿಕೆಯಲ್ಲಿ ಈ ಬಗ್ಗೆ ಉತ್ತರ ಸಿಗಲಿದೆ.

ʻʻಈ ವಾರ ನೀವೆಲ್ಲರೂ ನಾಮಿನೇಷನ್‌ನಿಂದ ಮುಕ್ತರಾಗಿದ್ದೀರಿ. ಆದರೆ, ವೋಟಿಂಗ್ ಪಟ್ಟಿಯಲ್ಲಿ ನಿಮ್ಮೆಲ್ಲರ ಹೆಸರೂ ಇರುತ್ತದೆ. ಇಲ್ಲಿಯವರೆಗೂ ನಿಮ್ಮನ್ನ ಉಳಿಸಿಕೊಳ್ಳಲು ವೋಟ್ ಮಾಡುತ್ತಿದ್ದ ವೀಕ್ಷಕರು ಈ ವಾರ ನಿಮ್ಮನ್ನು ಗೆಲ್ಲಿಸಲು ವೋಟ್ ಮಾಡಲಿದ್ದಾರೆ. ಅತೀ ಹೆಚ್ಚು ವೋಟ್ ಪಡೆಯುವ ಒಬ್ಬರು ಫಿನಾಲೆ ವೇದಿಕೆಯಲ್ಲಿ ಗೆಲುವಿನ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಾರೆ” ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಎಲ್ಲಾ 6 ಸ್ಪರ್ಧಿಗಳೂ ಗ್ರ್ಯಾಂಡ್‌ ಫಿನಾಲೆ ವೇದಿಕೆಯಲ್ಲಿರಲಿದ್ದಾರೆ ಎಂಬ ಗಾಸಿಪ್‌ಗಳು ಇವೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!