ಬೆಂಗಳೂರು ರೈಲ್ವೇ ನಿಲ್ದಾಣದ ಡ್ರಮ್​ವೊಂದರಲ್ಲಿ ವಿವಾಹಿತ ಮಹಿಳೆಯ ಶವ ಪತ್ತೆ!

ಬೆಂಗಳೂರು : ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾದ ಘಟನೆ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್ ಡ್ರಮ್​ವೊಂದರಲ್ಲಿ ಶವ ಇರಿಸಿ ಮೇಲೆ ಬಟ್ಟೆಗಳನ್ನಿಟ್ಟು ಮುಚ್ಚಳ ಹಾಕಿ ಟೇಪ್​ನಿಂದ ಸುತ್ತಲಾಗಿದೆ. ದುರ್ವಾಸನೆ ಬರಲಾರಂಭಿಸಿದ್ದರಿಂದ ಸ್ವಚ್ಛತಾ ಸಿಬ್ಬಂದಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ‌. ಬಳಿಕ ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ 25 ರಿಂದ 30 ವರ್ಷ ವಯಸ್ಸಿನ ವಿವಾಹಿತ ಮಹಿಳೆಯ ಶವ ಪತ್ತೆಯಾಗಿದೆ‌.

ಕೊಲೆ ಮಾಡಿ ಮೃತದೇಹವನ್ನು ಮುಚ್ಚಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಮೃತ ಮಹಿಳೆ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿರುವ ರೈಲ್ವೇ ಪೊಲೀಸರು, ಹಾಗೂ ಶ್ವಾನದಳದಿಂದ ಪರಿಶೀಲನೆ ನಡೆಸಲಾಗಿದೆ. ‘ರೈಲ್ವೇ ನಿಲ್ದಾಣದಲ್ಲಿ ಡ್ರಮ್ ಪತ್ತೆಯಾಗಿದ್ದು, ದುರ್ವಾಸನೆ ಬರಲಾರಂಭಿಸಿದೆ. ಇಂದು ಗಮನಿಸಿದಾಗ ಶವ ಪತ್ತೆಯಾಗಿದೆ‌. ನಿಲ್ದಾಣ ಹಾಗೂ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ರೈಲ್ವೇ ಎಸ್.ಪಿ ಡಾ.ಸೌಮ್ಯಲತಾ ಎಸ್.ಕೆ ತಿಳಿಸಿದ್ದಾರೆ‌.

error: Content is protected !!