spot_img
spot_img
spot_img
spot_img
spot_img
spot_img

ಮದ್ಯಪ್ರಿಯರೇ ಗಮನಿಸಿ: ಈ ಲಕ್ಷಣ ನಿಮ್ಮಲ್ಲಿ ಕಂಡು ಬಂದರೆ ತಕ್ಷಣ ಕುಡಿತ ನಿಲ್ಲಿಸಿ!

Published on

spot_img

ಆಲ್ಕೋಹಾಲ್ ಎಷ್ಟೇ ಸೇವಿಸಿದರೂ ಅದು ಆರೋಗ್ಯಕ್ಕೆ ಹಾನಿಕರ ಎಂದು ಹಲವು ಸಮೀಕ್ಷೆಗಳು ಬಹಿರಂಗ ಪಡಿಸಿವೆ..

ಮದ್ಯಪಾನ ನಿಮ್ಮ ಆರೋಗ್ಯ ಮತ್ತು ಜೀವನವನ್ನು ಹಾನಿಗೊಳಿಸುತ್ತದೆ ಎಚ್ಚರ.

ಆಲ್ಕೋಹಾಲ್ ಸೇವನೆಯಿಂದ ಕೆಲವು ಸಮಸ್ಯೆಗಳನ್ನು ಉಂಟಾಗುತ್ತವೆ. ಆ ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಮದ್ಯಪಾನವನ್ನು ನಿಲ್ಲಿಸಬೇಕು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಮದ್ಯದ ಪ್ರಭಾವದಿಂದ ಮನುಷ್ಯನಿಗೆ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ತಿಳಿದುಬಂದಿದೆ. ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳು ಸಂಭವಿಸುತ್ತವೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ.

ಮದ್ಯಪಾನ ಮಾಡುವವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅನಾರೋಗ್ಯದ ಯಾವುದೇ ಲಕ್ಷಣಗಳು ಕಂಡುಬಂದರೆ, ಆಲ್ಕೋಹಾಲ್ ಅನ್ನು ತಕ್ಷಣವೇ ನಿಲ್ಲಿಸಬೇಕು. ಬೆಳಿಗ್ಗೆ ಎದ್ದ ಮೇಲೆ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತೂಕಡಿಕೆ.. ದೇಹದಲ್ಲಿ ಆಯಾಸ.. ಸುಸ್ತಾಗಿದ್ದಲ್ಲಿ ಮದ್ಯ ಸೇವನೆ ನಿಲ್ಲಿಸಬೇಕು.

ಆಲ್ಕೊಹಾಲ್ ರೋಗ ನಿರೋಧಕ ಶಕ್ತಿಯನ್ನು ಕುಂದಿಸಿ, ನಿಮ್ಮ ದೇಹವನ್ನು ದುರ್ಬಲಗೊಳಿಸುತ್ತದೆ. ಇದರಿಂದಾಗಿ ಸಣ್ಣಪುಟ್ಟ ವಿಷಯಗಳಿಗೂ ಅನಾರೋಗ್ಯ ಕಾಡುತ್ತದೆ. ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತೀರಾ. ಈ ಸಂದರ್ಭದಲ್ಲಿ ನೀವು ಮದ್ಯಪಾನ ಸೇವನೆ ನಿಲ್ಲಿಸುವುದು ಉತ್ತಮ.

ನಿದ್ರಾಹೀನತೆಯು ಆಲ್ಕೋಹಾಲ್ ಕುಡಿಯಲು ಒಂದು ಕಾರಣ ಎಂದು ಹೇಳಲಾಗುತ್ತದೆ. ಮದ್ಯಪಾನದಿಂದ ನಿದ್ದೆ ಬರುತ್ತದೆ ಎಂದು ಹೇಳುವುದು ಭ್ರಮೆ. ನಶೆಯಿಂದಲೇ ಮಲಗುವ ನಿದ್ದೆ ಅದು ಸಂಪೂರ್ಣ ನಿದ್ದೆಯಾಗಿರುವುದಿಲ್ಲ. ಆಲ್ಕೋಹಾಲ್ ಸೇವಿಸಿದ ನಂತರವೂ ನೀವು ನಿದ್ರಾಹೀನತೆಯನ್ನು ಅನುಭವಿಸುತ್ತಿದ್ದರೆ, ಮದ್ಯಪಾನವನ್ನು ನಿಲ್ಲಿಸುವ ಸಮಯ ಬಂದಿದೆ ಅಂತ ಅರ್ಥ.

ಹೊಟ್ಟೆಯಲ್ಲಿ ಉಬ್ಬುವುದು ಇದ್ದರೆ, ಅದು ಮದ್ಯದ ಪರಿಣಾಮ ಎಂದು ಗುರುತಿಸಬೇಕು. ಆಲ್ಕೊಹಾಲ್ ಜೀರ್ಣಾಂಗ ವ್ಯವಸ್ಥೆಯನ್ನು ಗಂಭೀರವಾಗಿ ಹಾನಿಗೊಳಿಸುತ್ತದೆ. ಅಜೀರ್ಣ ಮತ್ತು ಉಬ್ಬುವುದು ಮುಂತಾದ ಲಕ್ಷಣಗಳು ಕಾಣಿಸಿಕೊಂಡರೆ ಮದ್ಯಪಾನವನ್ನು ನಿಲ್ಲಿಸಬೇಕು.

ಆಲ್ಕೋಹಾಲ್ ಸಹ ಚರ್ಮದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ತುರಿಕೆ ಮತ್ತು ದದ್ದು ಇದ್ದರೆ ಅದು ಮದ್ಯದ ಕಾರಣದಿಂದಾಗಿ ಎಂದು ಅರ್ಥಮಾಡಿಕೊಳ್ಳಬೇಕು. ಮದ್ಯವನ್ನು ತಕ್ಷಣವೇ ನಿಲ್ಲಿಸಿದರೆ ಉತ್ತಮ ಪ್ರಯೋಜನವನ್ನು ಕಾಣಬಹುದು.

ಹಲ್ಲು ಮತ್ತು ವಸಡಿನ ಸಮಸ್ಯೆ ಬಂದರೆ ಅದು ಮದ್ಯಪಾನದಿಂದಲೂ ಬರಬಹುದು. ಆಲ್ಕೋಹಾಲ್‌ನಲ್ಲಿರುವ ರಾಸಾಯನಿಕಗಳು ಹಲ್ಲಿನ ದಂತಕವಚದ ಮೇಲೆ ದಾಳಿ ಮಾಡುತ್ತವೆ. ಮದ್ಯಪಾನ ಮಾಡುವುದನ್ನು ನಿಲ್ಲಿಸಿ.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!