1 ಲಕ್ಷ ಹಣ ಪಡೆಯುವ ಯೋಜನೆಗೆ ಅರ್ಜಿ ಆಹ್ವಾನ! ನಿಮ್ಮಲ್ಲಿ ಈ ದಾಖಲೆಗಳು ಇದ್ದರೆ ತಕ್ಷಣ ಅಪ್ಲೈ ಮಾಡಿ..!

WhatsApp Group Join Now
Telegram Group Join Now
Instagram Account Follow Now

ಯಂ ಉದ್ಯೋಗ ನೇರ ಸಾಲ ಯೋಜನೆ ಯಡಿಯಲ್ಲಿ ಅಂತ ಉದ್ಯೋಗವನ್ನು ಮಾಡಲು ಆಸಕ್ತಿ ಇರುವಂತಹ ಫಲಾನುಭವಿಗಳಿಗೆ ಒಂದು ಲಕ್ಷ ಸಾಲ ಸೌಲಭ್ಯ ಮತ್ತು ಸಹಾಯಧನವನ್ನು ನೀಡಲು ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಯಾರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು? ಮತ್ತು ಹೇಗೆ ಸಲ್ಲಿಸಬಹುದು? ಎಂಬ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿಯಲ್ಲಿ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಒಂದು ಲಕ್ಷ ರೂಪಾಯಿಗಳ ಸಾಲ ಮತ್ತು ಸಹಾಯಧನವನ್ನು ಪಡೆದುಕೊಳ್ಳಬಹುದು.

Self Employment Scheme ಯಾರಲ್ಲ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?

• ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶದ ವರಿಗೆ 3,00,000/- ರೂಪಾಯಿಗಳ ಮಿತಿಯೊಳಗಿರಬೇಕು.

• ಅರ್ಜಿದಾರರಿಗೆ ಕನಿಷ್ಠ 18 ವರ್ಷದಿಂದ 55 ವರ್ಷಗಳ ವರೆಗೆ ಹೊಂದಿದವರಾಗಿರಬೇಕು.

• ಅರ್ಜಿದಾರರು ಸಾಮಾನ್ಯ ವರ್ಗದಲ್ಲಿ ಆರ್ಯವೈಶ್ಯ ಸಮುದಾಯಕ್ಕೆ ಸೇರಿದವರಾಗಿರಬೇಕಾಗುತ್ತದೆ ಮತ್ತು ನಮ್ಮೂನೆ ಜಿ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆದುಕೊಂಡಿರಬೇಕು.

• ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿದ್ದು, ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.

• ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆಯ್ಕೆ ಮಾಡಲಾಗುತ್ತದೆ.

ಇನ್ಮುಂದೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು ಹೊಸ ನಿಯಮ ಜಾರಿ!

ಈ ಯೋಜನೆಯ ಅಡಿಯಲ್ಲಿ ಎಷ್ಟು ಸಹಾಯಧನ ಪಡೆಯಬಹುದು?

• ಈ ಯೋಜನೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಒಂದು ಲಕ್ಷ ರೂಪಾಯಿಯನ್ನು ಆರ್ಥಿಕ ನೆರವು ಆಗಿ ನೀಡಲಾಗುತ್ತದೆ.ಮತ್ತು ಈ ರೂ. 1 ಲಕ್ಷ ರೂಪಾಯಿಗಳಲ್ಲಿ,ಗರಿಷ್ಠವಾಗಿ 20 ಸಾವಿರ ರೂಪಾಯಿಗಳ ಸಹಾಯಧನವನ್ನು ಸಿಗುತ್ತದೆ. ಬಾಕಿ ಉಳಿದ 80,000/- ಸಾಲವನ್ನು ವಾರ್ಷಿಕವಾಗಿ ಶೇಕಡ 4%ರ ಬಡ್ಡಿ ದರದಲ್ಲಿ ನೀಡಬೇಕು.

• ಅಭ್ಯರ್ಥಿಗಳು ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿಯಲ್ಲಿ ಪಡೆದ ಸಾಲವನ್ನು ಮೂರು ವರ್ಷಗಳ ಅವಧಿಯಲ್ಲಿ 34 ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಸೇರಿಸಿ ಮರುಪಾವತಿಸಬೇಕು. ಮತ್ತು ಇದರಲ್ಲಿ ಎರಡು ತಿಂಗಳುಗಳ ವಿರಾಮವನ್ನು ಇರುತ್ತದೆ.

Self Employment Scheme ಅರ್ಜಿ ಸಲ್ಲಿಸುವ ವಿಧಾನ:
ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ದಿನಾಂಕ ಜುಲೈ 12 ರಿಂದ ಆಗಸ್ಟ್ 31ರವರೆಗೆ ಅವಕಾಶ ಇರುತ್ತದೆ. ಆದ್ದರಿಂದ ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ.

https://aryavysya.karnataka.gov.in/KACDC_Data/Main/SESE

WhatsApp Group Join Now
Telegram Group Join Now
Instagram Account Follow Now

Vivek Kudarimath, Chief Editor Vivekvarthe, Journalist, Video Editor, Content Writer, CEO Of VPG Digital Private Limited

Leave a Comment