ಇಂದು ಎಲ್ಲಾ ಕೆಲಸ ನಮ್ಮ ಅಂಗೈಲೇ ಬಹಳ ಸುಲಭವಾಗಿ ನಡೆಯುತ್ತಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಆನ್‌ಲೈನ್ ಪೇಮೆಂಟ್ (Online Payment) ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ಮಾರ್ಟ್ ಮೊಬೈಲ್(Smart mobile) ಹೊಂದಿರುವ ಪ್ರತಿಯೊಬ್ಬರು ಜೇಬಿನಲ್ಲಿ ಹಣ (money) ಇಟ್ಟುಕೊಳ್ಳಲಾರದೆ ಹತ್ತು ರೂಪಾಯಿಯ ಸಾಮಾನು ಖರೀದಿಸಲು ಕೂಡ ಆನ್‌ಲೈನ್ ಪೇಮೆಂಟ್ ಉಪಯೋಗಿಸುತ್ತಿದ್ದಾರೆ.
ಕೆಲವು ಬಾರಿ ಗೂಗಲ್ ಪೇ (Google Pay) , ಫೋನ್ ಪೇ (PhonePe) ಮೂಲಕ ಆನ್‌ಲೈನ್ ಪೇಮೆಂಟ್ ಮಾಡುವಾಗ, ಯುಪಿಐ ಐಡಿ(UPI ID) ಅಥವಾ ಮೊಬೈಲ್ ನಂಬರ್(mobile no) ತಪ್ಪಾಗಿ ಎಂಟರ್ ಮಾಡಿ ಮತ್ತೊಮ್ಮೆ ಪರಿಶೀಲನೆ ಮಾಡದೇ ಕಣ್ಣು ಮುಚ್ಚಿ ಕಣ್ಣು ತೆಗಿಯೋ ಅಷ್ಟರಲ್ಲಿ ಅನಾಮಿಕ ವ್ಯಕ್ತಿಯ ಖಾತೆಗೆ(anonymous person’s account) ಹಣ ಹೋಗಿ ಬಿಟ್ಟಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆ ಹಣ ವಾಪಸು ಪಡೆಯಲು ಏನು ಮಾಡಬೇಕು? ಎಂಬದನ್ನು ಇಂದಿನ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ನೋಡೋಣ ಬನ್ನಿ…
ಹಣವನ್ನು ಸ್ವೀಕರಿಸಿದ ವ್ಯಕ್ತಿಗೆ ಸಂಪರ್ಕಿಸುವುದು
ತಪ್ಪಾಗಿ UPI (Unified Payments Interface) ಐಡಿಗೆ ವರ್ಗಾಯಿಸಲಾದ ನಿಮ್ಮ ಹಣವನ್ನು ಮರಳಿ ಪಡೆಯಲು ಅತ್ಯಂತ ಸುಲಭದ ಮಾರ್ಗವೆಂದರೆ ನಿಮ್ಮ ಹಣವನ್ನು ಸ್ವೀಕರಿಸಿದ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸುವುದು. ನಿಮ್ಮ ಹಣವನ್ನು ಸ್ವೀಕರಿಸಿದವರ ಖಾತೆಯಲ್ಲಿ ಸ್ವೀಕರಿಸಿದ ಹಣದ ಕುರಿತು ಸಾಧ್ಯವಾದಷ್ಟು ಬೇಗ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿ.
ನಿಮ್ಮ ಹಣವನ್ನು ಸ್ವೀಕರಿಸಿದವರ UPI ಐಡಿ ಹಾಗೂ ಫೋನ್ ಸಂಖ್ಯೆಯನ್ನು ಬಳಸಿಕೊಂಡು ಸಂಪರ್ಕಿಸಲು ಪ್ರಯತ್ನಿಸಿ ಮತ್ತು ತಪ್ಪಾಗಿ ಸ್ವೀಕರಿಸಿದ ಮೊತ್ತವನ್ನು ಮರುಪಾವತಿಸಲು ವಿನಯವಾಗಿ ಪಡೆಯುತ್ತೀರಿ.
ಕಸ್ಟಮರ್ ಕೇರ್ ಸಂಪರ್ಕಿಸುವುದು
RBI (Reserve Bank of India) ಮಾರ್ಗಸೂಚಿಗಳ ಪ್ರಕಾರ, ಆಕಸ್ಮಿಕವಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಮಾಡಿದಾಗ ತಕ್ಷಣವೇ ನೀವು ಬಳಸಿದ ಯುಪಿಐ ಅಪ್ಲಿಕೇಶನ್ (UPI Application) ಗ್ರಾಹಕರ ಸೇವಾ ಸಹಾಯವಾಣಿಗೆ ಕರೆ ಮಾಡಬಹುದು.
ಇಲ್ಲವೇ ಸಹಾಯವಾಣಿ ಇ-ಮೇಲ್ ಐಡಿಗೆ ನೀವು ವರ್ಗಾವಣೆ ಮಾಡಿದ ಹಣದ ವಿವರವನ್ನು ಸ್ಕ್ರೀನ್ ಶಾಟ್ ಸಮೇತ ಗ್ರಾಹಕರ ತಪ್ಪು ವಹಿವಾಟಿನ ಸಮಸ್ಯೆಯನ್ನು ವರದಿ ಮಾಡಬೇಕು. ಹೀಗೆ ವರದಿ ಮಾಡಿದ 24 ರಿಂದ 48 ಗಂಟೆಗಳ ಒಳಗೆ ನೀವು ಮರುಪಾವತಿಗೆ ವಿನಂತಿಸಬಹುದು. ಪಾವತಿದಾರ ಮತ್ತು ಪಾವತಿಸುವ ಬ್ಯಾಂಕ್ ಒಂದೇ ಆಗಿದ್ದರೆ, ನಿಗದಿತ ಸಮಯದ ಮೊದಲು ನಿಮ್ಮ ಮರುಪಾವತಿಯನ್ನು ನೀವು ಪಡೆಯುತ್ತೀರಿ.
ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಮುಖಾಂತರ ನೀವು ಆಕಸ್ಮಿಕವಾಗಿ ಅನಾಮಿಕ ವ್ಯಕ್ತಿಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ, ತಡ ಮಾಡದೆ 1800 120 1740 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿ. ನಂತರದಲ್ಲಿ ನೀವು ಖಾತೆ ಹೊಂದಿರುವ ಬ್ಯಾಂಕಿಗೆ ಭೇಟಿ ನೀಡಿ, ಹಣ ವರ್ಗಾವಣೆ ಮಾಡಿದ ಪುರಾವೆಗಳೊಂದಿಗೆ ನೀವು ದೂರು ಸಲ್ಲಿಸಬಹುದಾಗಿದೆ.
ಒಂದು ವೇಳೆ ಬ್ಯಾಂಕುಗಳು ನಿಮಗೆ ಸಹಾಯ ಮಾಡಲು ನಿರಾಕರಿಸಿದರೆ ಭಾರತೀಯ ರಿಸರ್ವ್ ಬ್ಯಾಂಕಿನ ಒಂಬುಡ್ಸಮನ್ (bankingombudsman.rbi.org.in) ದೂರು ಸಲ್ಲಿಸುವುದರ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದಾಗಿದೆ.
ಆನ್‌ಲೈನ್ ಪೇಮೆಂಟ್ ಮಾಡುವ ಮುಂಚೆ ಗಮನಿಸಿ…
ನೀವು ಯಾವುದೇ ರೀತಿಯ ಆನ್‌ಲೈನ್ ಪೇಮೆಂಟ್ ಮಾಡುವಾಗ ಅತ್ಯಂತ ಜಾಗರೂಕರಾಗಿರುವುದು ಬಹು ಅವಶ್ಯಕ. ನೀವು ಹಣ ವರ್ಗಾವಣೆ ಮಾಡುತ್ತಿರುವವರ ಯುಪಿಐ ಐಡಿ ಮತ್ತು ಅವರ ಹೆಸರು ಸರಿಯಾಗಿದೆಯೇ ಎಂದು ಪರಿಶೀಲಿಸಿ.
ದೊಡ್ಡ ಮೊತ್ತದ ಹಣವನ್ನು ವರ್ಗಾವಣೆ ಮಾಡುತ್ತಿದ್ದರೆ, ಮೊದಲಿಗೆ ಒಂದು ರೂಪಾಯಿಯನ್ನು ವರ್ಗಾವಣೆ ಮಾಡಿ ಹಣ ವರ್ಗಾವಣೆ ಸರಿಯಾಗಿದ್ದರೆ ನಂತರ ಉಳಿದ ಹಣವನ್ನು ಪಾವತಿಸುವುದು ಕ್ಷೇಮಕರ. ಈ ಕ್ರಮವನ್ನು ಅನುಸರಿಸುವುದರಿಂದ ಡಿಜಿಟಲ್ ವಹಿವಾಟಿನ (Digital transactions) ಅನೇಕ ತೊಂದರೆಗಳಿಂದ ನೀವು ದೂರವಿರಬಹುದು.