ವಿವೇಕವಾರ್ತೆ : ಯುವ ಪೀಳಿಗೆಯವರನ್ನು ತನ್ನತ್ತ ಆಕರ್ಷಿಸಲು ಆಂಬ್ರೇನ್ ಇಂಡಿಯಾ ಕಂಪನಿಯು ಇದೀಗ ಫೈರ್ (Fyre) ಹೆಸರಿನ ಹೊಸ ಸ್ಮಾರ್ಟ್ ವಾಚ್‌ವೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಫ್ಲಿಪ್‌ಕಾರ್ಟ್ ಮತ್ತು ಆಂಬ್ರೇನ್ ವೆಬ್‌ಸೈಟ್‌ನಲ್ಲಿಯೂ ವಾಚ್ ದೊರೆಯಲಿವೆ.
ಈ ವಾಚ್ ಹಲವು ವೈಶಿಷ್ಟ್ಯಗಳೊಂದಿಗೆ ರೂಪುಗೊಂಡಿದೆ. 2.04 ಇಂಚಿನ ಅಮೋಎಲ್‌ಇಡಿ ಡಿಸ್‌ಪ್ಲೇ ಇದ್ದು, 368*448 ಸ್ಕ್ರೀನ್ ರೆಸಲ್ಯೂಶನ್, 2.5ಡಿ ಕರ್ವ್ಡ್ ಗ್ಲಾಸ್ ಒಳಗೊಂಡಿದೆ. ಅಲ್ಲದೇ 800 ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ. ಕತ್ತಲೆ ಮತ್ತು ಬೆಳಕಿನಲ್ಲಿ ಪರದೆಯ ಮೇಲಿನ ಮಾಹಿತಿ ಸ್ಪಷ್ಟವಾಗಿ ಕಾಣಿಸುವಂತೆ ವಾಚ್‌ಅನ್ನು ವಿನ್ಯಾಸಗೊಳಿಸಲಾಗಿದೆ.
ಅಲ್ಲದೇ ಒಮ್ಮೆ ಚಾರ್ಜ್ ಮಾಡಿದರೆ ಐದು ದಿನಗಳ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ. ಐಪಿ67 ತಂತ್ರಜ್ಞಾನವನ್ನು ಅಳವಡಿಸಿದ್ದು, ಇದು ನೀರಿನಿಂದ ರಕ್ಷಣೆ ಒದಗಿಸುತ್ತದೆ
ವಾಚ್‌ನ ಬೆಲೆ ₹1,999 ಇದ್ದು, ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ವೇಳೆ ₹1,599ಕ್ಕೆ ಖರೀದಿ ಮಾಡಬಹುದು ಎಂದು ಕಂಪನಿ ಮಾಹಿತಿ ನೀಡಿದೆ.
ಧ್ವನಿ ಸ್ಪಷ್ಟತೆಗೆ ಇನ್ ಬಿಲ್ಟ್ ಮೈಕ್ರೊಫೋನ್, ಕರೆ ಮಾಡಲು ಬ್ಲೂಟೂತ್ ಅನುಕೂಲಕರವಾಗಿದೆ. ಕರೆ ಮಾಡುವುದು ಮತ್ತು ಸ್ವೀಕರಿಸುವುದು ಎರಡು ಸಹ ಇದರಲ್ಲಿ ಸರಳವಾಗಿದೆ.
ಹವಾಮಾನ ಮುನ್ಸೂಚನೆ, ಕ್ಯಾಲ್ಕುಲೇಟರ್, ಹೃದಯ ಬಡಿತವನ್ನು ಮಾನಿಟರಿಂಗ್, ಕ್ಯಾಮರಾ, ಪೋನ್ ಕರೆ, ಸಮಯ, ಸಂಗೀತ ಹೀಗೆ ಹಲವು ರೀತಿಯ ವೈಶಿಷ್ಯಗಳನ್ನು ಫೈರ್ ವಾಚ್ ಹೊಂದಿದೆ. ಈ ವಾಚ್ ಗೂಗಲ್ ಫಿಟ್ ಮತ್ತು ಆಯಪಲ್ ಹೆಲ್ತ್ ಅಪ್ಲಿಕೇಶನ್‌ಗಳೆರಡಕ್ಕೂ ಹೊಂದಿಕೊಳ್ಳುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ.