spot_img
spot_img
spot_img
spot_img
spot_img
spot_img

‌ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಆಹ್ವಾನ ತಿರಸ್ಕರಿಸಿದ ಅಂಬೇಡ್ಕರ್ ಮೊಮ್ಮಗ : ಕಾರಣವೇನು ಗೊತ್ತಾ?

Published on

spot_img

ಮುಂಬೈ: ಅಯೋಧ್ಯೆಯಲ್ಲಿ (Ayodhya) ರಾಮೋತ್ಸವದ ಸಂಭ್ರಮಕ್ಕೆ ಇಡೀ ಭಾರತವೇ ಸಾಕ್ಷಿಯಾಗಲಿದೆ. ಜನವರಿ 22ರಂದು ರಾಮಲಲ್ಲಾ ನ ಪ್ರಾಣ ಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಕಾತುರದಿಂದ ಕಾಯುತ್ತಿದ್ದಾರೆ ಹಾಗೆ ಹಲವಾರು ಪ್ರಸಿದ್ದಿ ಪಡೆದ ನಾಯಕರಿಗೆ ಆಹ್ವಾನ ಕೂಡ ನೀಡಲಾಗಿದೆ. ಆದರೆ ಡಾ.ಬಿ.ಆರ್‌ ಅಂಬೇಡ್ಕರ್ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಇದರ ಬಗ್ಗೆ ಈಗ ತಕರಾರು ಎತ್ತಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ನನಗೆ ಆಹ್ವಾನ ಬಂದಿತ್ತು ಆದರೆ ನಾನು ಮಾತ್ರ ಹೋಗುತ್ತಿಲ್ಲ ಎಂದು ಕೆಲ ಕಾರಣ ಕಾರಣಗಳನ್ನು ಕೊಟ್ಟು ಆಹ್ವಾನವನ್ನು ತಿರಸ್ಕಾರ ಮಾಡಿದ್ದಾರೆ.

ಈ ಕಾರ್ಯಕ್ರಮವನ್ನು ಬಿಜೆಪಿ-ಆರ್‌ಎಸ್‌ಎಸ್ ಸ್ವಾಧೀನಪಡಿಸಿಕೊಂಡಿರುವುದರಿಂದ ನಾನು ಈ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ; ಧಾರ್ಮಿಕ ಕಾರ್ಯಕ್ರಮವು ಚುನಾವಣಾ ಲಾಭಕ್ಕಾಗಿ ರಾಜಕೀಯ ಪ್ರಚಾರವಾಗಿದೆ.

ನನ್ನ ತಾತ ಡಾ.ಬಿ.ಆರ್. ಅಂಬೇಡ್ಕರ್ ಅವರು “ಪಕ್ಷಗಳು ಧರ್ಮವನ್ನು ದೇಶಕ್ಕಿಂತ ಹೆಚ್ಚಾಗಿ ಇರಿಸಿದರೆ, ನಮ್ಮ ಸ್ವಾತಂತ್ರ್ಯವು ಎರಡನೇ ಬಾರಿಗೆ ಅಪಾಯಕ್ಕೆ ಸಿಲುಕುತ್ತದೆ ಮತ್ತು ಬಹುಶಃ ಶಾಶ್ವತವಾಗಿ ಕಳೆದುಹೋಗುತ್ತದೆ” ಎಂದು ಎಚ್ಚರಿಸಿದರು. ನನ್ನ ಅಜ್ಜನ ಭಯ ಇಂದು ನಿಜವಾಗಿದೆ. “ದೇಶದ ಮೇಲೆ ನಂಬಿಕೆ ಇಡುವ” ಬಿಜೆಪಿ-ಆರ್‌ಎಸ್‌ಎಸ್ ತನ್ನ ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಕಾರ್ಯಕ್ರಮವನ್ನು ತನ್ನದಾಗಿಸಿಕೊಂಡಿದೆ ಎಂದು ಕಿಡಿ ಕಾರಿದರು,

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!