ಅಂಬೇಡ್ಕರ್ ಜಯಂತಿ ಹಿನ್ನಲೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು

ಘಟಪ್ರಭಾ- ಇಂದು ಸಂವಿಧಾನ ಶಿಲ್ಪಿ ಡಾ||ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಘಟಪ್ರಭಾ ವಲಯದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕರ್ನಾಟಕ ಆರೋಗ್ಯ ಧಾಮದಲ್ಲಿ ರೋಗಿಗಳಿಗೆ ಹಣ್ಣು ಹಾಗೂ ಬಿಸ್ಕತ್ತು ವಿತರಿಸಿದರು.

ಉಪ ಅರಣ್ಯಾಧಿಕಾರಿಯಾದ ವಾಸುದೇವ ಇಗವೆಯವರು ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ನಾವು ಅಂದರೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೇರಿ ಏನಾದರೂ ಅರ್ಥ ಪೂರ್ಣವಾಗಿ ಜಯಂತಿಯನ್ನು ಆಚರಿಸಬೇಕು ಎಂದು ತೀರ್ಮಾನ ಮಾಡಿ, ಕೆಎಚ್ಐ ಮುಖ್ಯವೈದ್ಯಾಧಿಕಾರಿಗಳ ಅನುಮತಿ ತೆಗೆದುಕೊಂಡು ರೋಗಿಗಳಿಗೆ ಹಣ್ಣು ಹಾಗೂ ಬಿಸ್ಕತ್ತು ಹಂಚಿದೇವು ಎಂದು ಹೇಳಿದರು‌.

ಈ ಸಂಧರ್ಭದಲ್ಲಿ ಡಾ.ರಾಹುಲ್ ವೈದ್ಯ, ಸಮಾಜ ಸೇವಕರಾದ ಮಲ್ಲಿಕಾರ್ಜುನ ಚೌಕಾಶಿ ಹಾಗೂ ಉಪ ಅರಣ್ಯಾಧಿಕಾರಿ ವಾಸುದೇವ ಇಗವೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಪ್ರಮೋದ ಮಾನೆ, ಉಪಸ್ಥಿತರಿದ್ದರು.

error: Content is protected !!