spot_img
spot_img
spot_img
spot_img
spot_img
spot_img

ಅಲೋವೆರಾ ಕೃಷಿ ಮಾಡಿ, ವಾರ್ಷಿಕ ಲಕ್ಷ ಲಕ್ಷ ಹಣ ಗಳಿಸಿ : ಅಲೋವೆರಾ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

Published on

spot_img

ವಿವೇಕವಾರ್ತೆ : ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸುವಲ್ಲಿ ಅಲೋವೆರಾ ಅಥವಾ ಘೃತ ಕುಮಾರಿ ಸಸ್ಯದ ಬಳಕೆಯನ್ನು ಹೇರಳವಾಗಿ ಮಾಡಲಾಗುತ್ತದೆ. ಪ್ರತಿ ಮನೆಯ ಬಾಲ್ಕನಿಯಲ್ಲಿಯೂ ಹೂಕುಂಡಗಳಲ್ಲಿ ಈ ಸಸ್ಯಗಳನ್ನು ಬೆಳೆಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವೆನಿಸಿದೆ. ಅಲೋವೆರಾ ಮುಖಕ್ಕೆ ಅದ್ಭುತವಾದ ಮಸಾಜ್ ಅನ್ನು ನೀಡುತ್ತದೆ, ಅಲ್ಲದೇ ಇದನ್ನು ಕೂದಲಿಗೆ ಹೊಳಪನ್ನು ನೀಡಲು ಬಳಸಲಾಗುತ್ತದೆ.

ಇದೇ ಕಾರಣಕ್ಕಾಗಿ ಮಾರುಕಟ್ಟೆಯಲ್ಲಿ ಅಲೋವೆರಾ ಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಇದರ ಬೇಡಿಕೆಯಿಂದಾಗಿ ಇದರ ಕೃಷಿಯು ರೈತರಿಗೆ ಲಾಭದಾಯಕ ಎಂದು ಹೇಳಲಾಗುತ್ತಿದೆ. ಅನೇಕ ಕಂಪನಿಗಳು ಅಲೊವೆರಾದ ಗುತ್ತಿಗೆ ಕೃಷಿಯನ್ನು ಕೂಡಾ ಮಾಡುತ್ತಿವೆ‌. ವಾಣಿಜ್ಯ ರೀತಿಯಲ್ಲಿ ಇದನ್ನು ಬೆಳೆಸಿದರೆ ವಾರ್ಷಿಕ ಸುಮಾರು 8 – 10 ಲಕ್ಷ ರೂಪಾಯಿಗಳನ್ನು ಗಳಿಸಬಹುದು.

ಹುಬ್ಬಳ್ಳಿಯಲ್ಲಿ ಹರಿದ ನೆತ್ತರು.. ಅನೈತಿಕ ಸಂಬಂಧ ಹಿನ್ನೆಲೆ ಯುವಕನ ಹತ್ಯೆ

ಲೇಖನದಲ್ಲಿ ನಾವು ರೈತ ಸಹೋದರರಿಗೆ ಅಲೋವೆರಾ ಕೃಷಿಯ ಬಗ್ಗೆ ತಿಳಿಸಲು ಹೊರಟಿದ್ದೇವೆ. ಅಲೋವೆರಾ ಕೃಷಿಯನ್ನು ಪ್ರಾರಂಭಿಸುವ ಮೊದಲು ಕೆಲವು ವಿಷಯಗಳ ಕಡೆಗೆ ಗಮನ ನೀಡಬೇಕಾಗುತ್ತದೆ. ಘೃತ್ ಕುಮಾರಿ ಅಥವಾ ಅಲೋವೆರಾ, ಇದನ್ನು ಕ್ವಾರ್ಗುಂಡಲ್ ಅಥವಾ ಗ್ವಾರ್ಪಥ ಎಂದೂ ಕರೆಯಲಾಗುತ್ತದೆ. ಇದೊಂದು ಔಷಧೀಯ ಸಸ್ಯವಾಗಿ ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ಅಲೋವೆರಾ ಕಾಂಡವಿಲ್ಲದ ಅಥವಾ ಸಣ್ಣ ಕಾಂಡವಿರುವ ತನ್ನಲ್ಲಿ ತಿರುಳನ್ನು ಹೊಂದಿರುವ ರಸಭರಿತವಾದ ಗಿಡವಾಗಿರುತ್ತದೆ. ಇದರ ಎತ್ತರ 60 ರಿಂದ 100 ಸೆಂಟಿಮೀಟರ್ ಆಗಿರುತ್ತದೆ. ಕೆಳಗಿನಿಂದ ಹೊರಬರುವ ಶಾಖೆಗಳಿಂದ ಇದು ಮೇಲೆ ಹರಡಿಕೊಳ್ಳುತ್ತದೆ.

ಆಲೋ ವೆರಾ ಕೃಷಿ

ಇದರ ಎಲೆಗಳು ಲ್ಯಾನ್ಸಿಲೇಟ್, ದಪ್ಪ ಮತ್ತು ತಿರುಳಿರುವ, ಹಸಿರು, ಹಸಿರು-ಬೂದು ಬಣ್ಣಗಳಲ್ಲಿ ಲಭ್ಯವಿದೆ. ಇನ್ನೂ ಕೆಲವು ವಿಧಗಳಲ್ಲಿ ಎಲೆಗಳ ಮೇಲಿನ ಮತ್ತು ಕೆಳಗಿನ ಮೇಲ್ಮೈಯಲ್ಲಿ ಬಿಳಿ ಬಣ್ಣದ ಚುಕ್ಕೆಗಳು ಇರುತ್ತವೆ. ಎಲೆಯ ಅಂಚಿನಲ್ಲಿ ಸಣ್ಣ ಬಿಳಿ ಮುಳ್ಳುಗಳ ರೀತಿಯಲ್ಲಿ ಕಂಡುಬರುತ್ತದೆ. ಬೇಸಿಗೆಯಲ್ಲಿ ಇವು ಹಳದಿ ಹೂಗಳನ್ನು ಬಿಡುತ್ತವೆ. ಮಾಧ್ಯಮಗಳ ವರದಿಯ ಪ್ರಕಾರ ಅಲೋವೆರಾದ ಪ್ರಭೇದಗಳ ಬಗ್ಗೆ ತಿಳಿದುಕೊಳ್ಳಲು ದೀರ್ಘಕಾಲದವರೆಗೂ ಅಧ್ಯಯನ ನಡೆಸಲಾಗಿತ್ತು. ಈ ಅಧ್ಯಯನಗಳ ಫಲವಾಗಿ ಒಟ್ಟು 300 ಬಗೆಯ ಅಲೋವೆರಾ ಪ್ರಬೇಧಗಳು ಇವೆ ಎನ್ನುವ ವಿಷಯ ತಿಳಿದುಬಂದಿದೆ‌. ಇದರಲ್ಲಿ 284 ಬಗೆಯ ಅಲೋವೆರಾ 0 ರಿಂದ 15 ಪ್ರತಿಶತದಷ್ಟು ಔಷಧೀಯ ಗುಣಗಳನ್ನು ಹೊಂದಿದೆ. 11 ವಿಧದ ಸಸ್ಯಗಳು ವಿಷಕಾರಿಯಾಗಿದ್ದರೆ,ಉಳಿದ 5 ವಿಶೇಷ ಪ್ರಕಾರಗಳಲ್ಲಿ ಒಂದು ಸಸ್ಯ ಅಲೋ ಬಾರ್ಬಡೆನ್ಸಿಸ್ ಮಿಲ್ಲರ್. ಇದು 100% ಔಷಧೀಯ ಔಷಧೀಯ ಗುಣಗಳನ್ನು ಹೊಂದಿದೆ.

ಅದೇ ಸಮಯದಲ್ಲಿ Arborescens ಪ್ರಭೇದದಲ್ಲಿ ಪ್ರಯೋಜನಕಾರಿ ಔಷಧೀಯ ಹಾಗೂ ಗುಣಪಡಿಸುವ ವಿಶೇಷ ಗುಣಗಳನ್ನು ಹೊಂದಿದೆ. ಇವುಗಳನ್ನು ವಿಶೇಷವಾಗಿ ಸುಟ್ಟ ಗಾಯಗಳನ್ನು ಶಮನಗೊಳಿಸಲು ಬಳಸಿಕೊಳ್ಳಲಾಗುತ್ತದೆ. ಇದರ ಹೊರತಾಗಿ, ಅಲೋ ಸಪೋನಾರಿಯಾ ಎಂಬ ಮತ್ತೊಂದು ವಿಧ ಇದ್ದು, ಇದನ್ನು ಪಿಟಾ ಅಥವಾ ಅಲೋ ಮ್ಯಾಕುಲಾಟಾ ಎಂದು ಕರೆಯಲಾಗುತ್ತದೆ. ಇದನ್ನು ಎಲ್ಲಾ ರೀತಿಯ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಅಲೋವೆರಾವನ್ನು ರೈತರು ಯಾವಾಗ ಮತ್ತು ಹೇಗೆ ಬೆಳೆಯಬಹುದು ಎನ್ನುವ ವಿಚಾರಕ್ಕೆ ಬರೋಣ. ಇದನ್ನು ಬೆಳೆಯಲು ಬೆಚ್ಚಗಿನ ವಾತಾವರಣ ಸೂಕ್ತವೆಂದು ಹೇಳಲಾಗಿದೆ.

ಸಾಮಾನ್ಯವಾಗಿ ಇದನ್ನು ಶುಷ್ಕ ಪ್ರದೇಶದಲ್ಲಿ ಕಡಿಮೆ ಮಳೆಯೊಂದಿಗೆ, ಬಿಸಿಯಾದ ಆರ್ದ್ರ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಅಂದರೆ ಇದು ಬೂದು ಮಣ್ಣಿನಲ್ಲಿ ಉತ್ತಮವಾದ ಇಳುವರಿಯನ್ನು ನೀಡುತ್ತದೆ. ಅತ್ಯಧಿಕ ಶೀತ ಇರುವ ಪ್ರದೇಶಗಳಲ್ಲಿ ಅಲೊವೇರಾ ಬಹಳ ಸೂಕ್ಷ್ಮ ಅಥವಾ ಸಂವೇದನಶೀಲವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಅವುಗಳ ಕೃಷಿಯನ್ನು ಮಾಡಬಾರದು. ಅಲೋವರಾ ಕೃಷಿಯನ್ನು ಮರಳು ಮಣ್ಣಿನಿಂದ ಹಿಡಿದು ಬೇರೆ ಬೇರೆ ರೀತಿಯ ಮಣ್ಣಿನಲ್ಲೂ ಮಾಡಬಹುದಾಗಿದೆ. ಆದರೆ ಎಲ್ಲವುದಕ್ಕಿಂತ ಮರಳು ಮಣ್ಣು ಉತ್ತಮವಾಗಿದೆ. ಇದಲ್ಲದೇ ಒಳ್ಳೆಯ ಕಪ್ಪು ಮಣ್ಣಿನಲ್ಲಿ ಕೂಡಾ ಇದನ್ನು ಬೆಳೆಯಬಹುದಾಗಿದೆ. ಅಲೋವೆರಾ ಬೆಳೆಯನ್ನು ಬೆಳೆಯಲು ನೆಲವು ಸ್ವಲ್ಪ ಎತ್ತರವಿರಬೇಕು. ನೀರು ಹರಿದುಹೋಗಲು ಸೂಕ್ತವಾದ ವ್ಯವಸ್ಥೆ ಇರಬೇಕು. ನೀರು ತುಂಬಿಕೊಳ್ಳದಂತೆ ಎಚ್ಚರವಹಿಸಬೇಕು. ಮಣ್ಣಿನ pH ಮೌಲ್ಯವು 8.5 ಆಗಿರಬೇಕು.

ಅಲೋವೆರಾವನ್ನು ಯಾವಾಗ ನೆಡಬೇಕು?? ತಿಳಿಯೋಣ ಬನ್ನಿ. ಆಲೋವೆರಾದ ಉತ್ತಮ ಇಳುವರಿಯನ್ನು ಪಡೆದುಕೊಳ್ಳಬೇಕಾದರೆ ಅಲೋವೆರಾವನ್ನು ಜುಲೈ ಆಗಸ್ಟ್ ತಿಂಗಳಿನಲ್ಲಿ ನೆಡುವ ಸಲಹೆಯನ್ನು ನೀಡಲಾಗುತ್ತದೆ. ಚಳಿಗಾಲದ ತಿಂಗಳುಗಳಲ್ಲಿ ಹೊರತು ಪಡಿಸಿ ವರ್ಷದುದ್ದಕ್ಕೂ ಇದನ್ನು ಬೆಳೆಯಬಹುದಾಗಿದೆ. ಅಲೋವೆರಾ ಕೃಷಿಗೆ ಯಾವ ರೀತಿಯ ಗೊಬ್ಬರವನ್ನು ಬಳಸಬೇಕು?? ಎನ್ನುವ ಪ್ರಶ್ನೆ ಬಂದಾಗ, ಇದನ್ನು ಬೆಳೆಯುವ ಮೊದಲು ಬೇಸಾಯದ ಭೂಮಿಯನ್ನು ಉಳುಮೆ ಮಾಡಿಸಬೇಕಾಗುತ್ತದೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಕೊನೆಯ ಉಳುಮೆ ಮಾಡುವ ಸಂದರ್ಭದಲ್ಲಿ 15 ರಿಂದ 20 ಟನ್ ಕೊಟ್ಟಿಗೆ ಗೊಬ್ಬರ ಹಾಕಬೇಕು. ಇದನ್ನು ಹೆಚ್ಚು ಹಾಕಿದರೆ ಇಳುವರಿ ಉತ್ತಮವಾಗಿ ಬರುತ್ತದೆ.

ಯಾವ ಪ್ರಮಾಣದಲ್ಲಿ ಬೀಜಗಳನ್ನು ಹಾಕಬೇಕು?? ಎಂದು ಹೇಳುವುದಾದರೆ, ಅಲೋವೆರಾ ಸಸಿಗಳನ್ನು ಕೃಷಿ ಮಾಡಲು 6-8 ಸಸಿಗಳಿಂದ ಬಿತ್ತನೆ ಮಾಡಬೇಕು. ಇದು ನಾಲ್ಕರಿಂದ ಐದು ಎಲೆಗಳನ್ನು ಹೊಂದಿರುವ 3-4 ತಿಂಗಳ ಹಳೆಯ ಗೆಡ್ಡೆಗಳಿಂದ ಬಿತ್ತಲಾಗುತ್ತದೆ. ಒಂದು ಎಕರೆ ಭೂಮಿಗೆ, ಸುಮಾರು 5000 ರಿಂದ 10000 ಸಸಿಗಳನ್ನು ಬೆಳೆಸ ಬಹುದಾಗಿರುತ್ತದೆ. ಅಲ್ಲದೇ ಸಸಿಗಳ ಸಂಖ್ಯೆ ಇಷ್ಟೇ ಎನ್ನುವಂತೆ ಹೇಳಲಾಗದು ಏಕೆಂದರೆ ಮಣ್ಣಿನ ಫಲವತ್ತತೆ ಮತ್ತು ಗಿಡದಿಂದ ಗಿಡಕ್ಕೆ ಮತ್ತು ಸಾಲಿನಿಂದ ಸಾಲು ದೂರವನ್ನು ಇದು ಅವಲಂಬಿಸಿರುತ್ತದೆ. ನಮಗೆ ಅಲೋವೆರಾ ಬೀಜಗಳನ್ನು ಎಲ್ಲಿ ಪಡೆಯಬಹುದು? ಎನ್ನುವ ಪ್ರಶ್ನೆ ನಿಮ್ಮದಾದರೆ ಅದಕ್ಕೂ ಉತ್ತರ ಇಲ್ಲಿದೆ.

ಅಲೋಯಿನ್ ಮತ್ತು ಜೆಲ್ ಉತ್ಪಾದನೆಗಾಗಿ ಹಲವಾರು ವಿಧದ ಅಲೋವೆರಾವನ್ನು ನ್ಯಾಷನಲ್ ಬ್ಯೂರೋ ಆಫ್ ಪ್ಲಾಂಟ್ ಜೆನೆಟಿಕ್ ಸೋರ್ಸಸ್ ಅಭಿವೃದ್ಧಿಪಡಿಸಿದೆ. CIMAP, ಲಕ್ನೋ ಸಹಾ ಇದರ ಸುಧಾರಿತ ತಳಿಯನ್ನು ಅಭಿವೃದ್ಧಿಪಡಿಸಿದೆ. ವಾಣಿಜ್ಯ ಕೃಷಿಗಾಗಿ, ಹಿಂದೆ ಅಲೋವೆರಾವನ್ನು ಬೆಳೆಸಿದ ಮತ್ತು ಜ್ಯೂಸ್/ಜೆಲ್ ಇತ್ಯಾದಿಗಳ ಉತ್ಪಾದನೆಯಲ್ಲಿ ಎಲೆಗಳನ್ನು ಸಂಸ್ಕರಿಸುತ್ತಿರುವ ರೈತರು ಸಹಾ ಹೊಸ ತಳಿಯನ್ನು ಪಡೆಯಲು ಸಹಾ ಇಲ್ಲಿ ಸಂಪರ್ಕ ಮಾಡಬಹುದಾಗಿದೆ. ಅಲೋವೆರಾ ಗಿಡಗಳನ್ನು ನೆಡುವುದು ಹೇಗೆ?? ಎನ್ನುವುದಕ್ಕೂ ಸಹಾ ಕೆಲವು ವಿಧಿ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.

ಅಲೋವೆರಾವನ್ನು ನಾಟಿ ಮಾಡಲು ಹೊಲಗಳಲ್ಲಿ ಸಾಲುಗಳು ಮತ್ತು ಉಬ್ಬುಗಳನ್ನು ಮಾಡಲಾಗುತ್ತದೆ. ಒಂದು ಮೀಟರ್‌ನಲ್ಲಿ ಎರಡು ಸಾಲುಗಳನ್ನು ಮಾಡಬಹುದು ಮತ್ತು ನಂತರ ಒಂದು ಮೀಟರ್ ಅನ್ನು ಖಾಲಿ ಬಿಟ್ಟು, ಮತ್ತೆ ಒಂದು ಮೀಟರ್‌ನಲ್ಲಿ ಎರಡು ಸಾಲುಗಳನ್ನು ಹಾಕಬೇಕು. ಹಳೆಯ ಗಿಡಗಳ ಬಳಿ ಇರುವ ಚಿಕ್ಕ ಗಿಡಗಳನ್ನು ತೆಗೆದು ಹಾಕಿದ ನಂತರ ಗಿಡದ ಸುತ್ತಲೂ ನೆಲವನ್ನು ಚೆನ್ನಾಗಿ ಒತ್ತಬೇಕು. ಮಳೆಗಾಲದಲ್ಲಿ ಹಳೆಯ ಗಿಡಗಳಿಂದ ಚಿಕ್ಕ ಚಿಕ್ಕ ಗಿಡಗಳು ಹೊರ ಬರಲು ಪ್ರಾರಂಭಿಸುತ್ತವೆ. ಆಗ ಅವುಗಳನ್ನು ಬೇರು ಸಹಿತವಾಗಿ ಹೊರಗೆ ತೆಗೆದು ನಾಟಿ ಮಾಡುವಾಗ ಬಳಸಿಕೊಳ್ಳಬಹುದು. ಅದನ್ನು ನಾಟಿ ಮಾಡುವಾಗ 40 ಸೆಂ.ಮೀ ಅಂತರವನ್ನು ಇಡಬೇಕು.

ಸಣ್ಣ ಗಿಡವನ್ನು 40 ಸೆಂ.ಮೀ ದೂರದಲ್ಲಿ ನೆಡಬೇಕು. ಇದರ ನೆಟ್ಟ ಸಾಂದ್ರತೆಯು ಹೆಕ್ಟೇರಿಗೆ 50 ಸಾವಿರ ಮತ್ತು ದೂರವು 40 ರಿಂದ 45 ಸೆಂ.ಮೀ ಆಗಿರಬೇಕು. ಅಲೋವೆರಾಗೆ ನೀರಾವರಿ ಮಾಡುವುದು ಹೇಗೆ ?? ಎನ್ನುವ ವಿಷಯದ ಕಡೆಗೆ ಗಮನ ನೀಡೋಣ‌. ಅಲೊವೆರಾ ಬಿತ್ತನೆ ಮಾಡಿದ ತಕ್ಷಣ ಒಂದು ನೀರಾವರಿ ಮಾಡಬೇಕು. ಇದರ ನಂತರ ಅಗತ್ಯಕ್ಕೆ ತಕ್ಕಂತೆ ನೀರಾವರಿಯನ್ನು ಮುಂದುವರಿಸಬೇಕು. ಅಲೋವೆರಾ ಕೃಷಿಯಲ್ಲಿ ಆವರ್ತಕ ನೀರಾವರಿ ಎಲೆಗಳಲ್ಲಿ ಜೆಲ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಕಳೆಗಳನ್ನು ತೆಗೆಯುವುದು ಅನಿವಾರ್ಯವಾಗಿರುತ್ತದೆ.

ಅಲೋವೆರಾ ಕೃಷಿಗೆ ಎಷ್ಟು ವೆಚ್ಚವಾಗುತ್ತದೆ?? ಎನ್ನುವುದು ಕೂಡಾ ಬಹಳ ಮುಖ್ಯವಾಗಿದೆ : ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಪ್ರಕಾರ, ಒಂದು ಹೆಕ್ಟೇರ್ ನಲ್ಲಿ ಆಲೋವೆರಾ ನೆಡುವ ವೆಚ್ಚ ಸುಮಾರು 27,500 ರೂ.ಗಳು. ಆದರೆ ಇನ್ನುಳಿದ ಎಲ್ಲಾ ವೆಚ್ಚಗಳನ್ನು ಸೇರಿಸಿದರೆ, ಮೊದಲ ವರ್ಷದಲ್ಲಿ ಈ ವೆಚ್ಚವು 50,000 ರೂಗಳಾಗುತ್ತದೆ. ಬೆಳೆದ ನಂತರ ಅಲೋವೆರಾವನ್ನು ಮಾರಾಟ ಮಾಡುವ ವಿಧಾನ ಹೇಗೆ ??? ವರ್ಷವಿಡೀ ಅಲೋವೆರಾವನ್ನು ಉತ್ತಮ ಕಾಳಜಿಯೊಂದಿಗೆ ಬೆಳೆಸಿದರೆ, ಒಂದು ಹೆಕ್ಟೇರ್ ನಲ್ಲಿ ಸುಮಾರು 40 ರಿಂದ 45 ಟನ್ ದಪ್ಪ ಎಲೆಗಳು ಸಿಗುತ್ತವೆ. ಈ ಎಲೆಗಳಿಂದ ಅಲೋಜೆಲ್ ತೆಗೆದು ಅಥವಾ ಅಲೋವೆರಾವನ್ನೇ ಸಹಾ ಮಾರಾಟ ಮಾಡಬಹುದು.

ಇದರ ದಪ್ಪ ಎಲೆಗಳು ದೇಶದ ವಿವಿಧ ಮಂಡಿಗಳಲ್ಲಿ ಪ್ರತಿ ಟನ್‌ಗೆ 15,000 ರಿಂದ 25,000 ರೂ. ಗೆ ಮಾರಾಟವಾಗುತ್ತದೆ. ಇಂತಹ ಕಡೆ ನೀವು ನಿಮ್ಮ ಬೆಳೆಯನ್ನು ಮಾರಾಟ ಮಾಡಿದರೆ, ನೀವು ಸುಲಭವಾಗಿ 8 ರಿಂದ 10 ಲಕ್ಷ ರೂಪಾಯಿಗಳನ್ನು ಗಳಿಸಲು ಸಾಧ್ಯವಿದೆ. ಇದಲ್ಲದೆ, ಎರಡು ಮತ್ತು ಮೂರನೇ ವರ್ಷದಲ್ಲಿ ಎಲೆಗಳು 60 ಟನ್ ಗಳವರೆಗೆ ಮೂಡುತ್ತವೆ‌. ಆದರೆ, ನಾಲ್ಕನೇ ಮತ್ತು ಐದನೇ ವರ್ಷಗಳಲ್ಲಿ, ಉತ್ಪಾದನೆಯು ಸುಮಾರು 20 ರಿಂದ 25 ಪ್ರತಿಶತದಷ್ಟು ಕಡಿಮೆಯಾಗುತ್ತಾ ಹೋಗುತ್ತದೆ. ಈ ಬೇಸಾಯದ ಆಧಾರದ ಮೇಲೆ ಜೆಲ್ ತಯಾರಿಕೆ ಮತ್ತು ಒಣ ಪುಡಿ ಮಾಡುವ ಕೈಗಾರಿಕೆಗಳನ್ನು ಸ್ಥಾಪಿಸುವ ಅವಕಾಶ ಸಹಾ ಇದೆ..

ಅಲೋವೆರಾ ಸಸ್ಯವನ್ನು ಹೇಗೆ ಕಾಳಜಿ ವಹಿಸಬೇಕು ?? ಎನ್ನುವುದು ಎಲ್ಲದಕ್ಕಿಂತ ಬಹಳ ಮುಖ್ಯವಾದ ವಿಷಯವಾಗಿದೆ. ಅಲೋವೆರಾ ಕೃಷಿಗೆ ಕಡಿಮೆ ನೀರು ಬೇಕು. ಕಡಿಮೆ ನೀರಿನಲ್ಲೇ ಅವು ಸುಲಭವಾಗಿ ಬೆಳೆಯುತ್ತವೆ. ಒಂದು ಬೇಳೆ ಅತಿಯಾದ ನೀರು ಹರಿದರೆ ಅದರ ಬೇರುಗಳು ಕೊಳೆಯುತ್ತವೆ ಮತ್ತು ಸಸ್ಯವು ಸಾಯುತ್ತದೆ. ಅಲೋವೆರಾ ಕೃಷಿಯಲ್ಲಿ ಮೇಲ್ಮೈಯಿಂದ ಸುಮಾರು ಎರಡು ಇಂಚುಗಳಷ್ಟು ಮಣ್ಣು ಒಣಗುವವರೆಗೆ ನೀರು ಹಾಕಬಾರದು ಎನ್ನುವುದನ್ನು ನೆನಪಿನಲ್ಲಿಡಬೇಕು. ಸಾಮಾನ್ಯ ಋತುವಿನಲ್ಲಿ ವಾರಕ್ಕೊಮ್ಮೆ ಮತ್ತು ಚಳಿಗಾಲದಲ್ಲಿ ಇದಕ್ಕಿಂತ ಕಡಿಮೆ ನೀರು ಹಾಕಬೇಕು. ಅಲೋ ವೆರಾ ಕೃಷಿಯ ಪ್ರಯೋಜನಗಳನ್ನು ಕುರಿತು ತಿಳಿಯುವುದಾದರೆ, ಅಲೋವೆರಾವನ್ನು ಬಂಜರು ಭೂಮಿಯಲ್ಲಿಯೂ ಬೆಳೆಸಬಹುದು. ಅದರ ಕೃಷಿಗೆ ರಸಗೊಬ್ಬರಗಳು, ಕೀಟನಾಶಕಗಳು ಮತ್ತು ನೀರಾವರಿಯ ವಿಶೇಷ ಅವಶ್ಯಕತೆ ಇಲ್ಲ.

ಯಾವ ಪ್ರಾಣಿಯೂ ಅದನ್ನು ತಿನ್ನುವುದಿಲ್ಲ ಆದ್ದರಿಂದ, ಅದರ ನಿರ್ವಹಣೆಗೆ ವಿಶೇಷ ಗಮನ ನೀಡುವ ಅಗತ್ಯ ಇರುವುದಿಲ್ಲ. ಈ ಬೆಳೆ ಪ್ರತಿ ವರ್ಷ ಗಣನೀಯ ಆದಾಯವನ್ನು ನೀಡುತ್ತದೆ. ಅಲೋವೆರಾ ಕೃಷಿಗೆ ತರಬೇತಿ ಕೂಡ ತೆಗೆದುಕೊಳ್ಳಬಹುದಾಗಿದೆ. ಅಲೋವೆರಾ ಕೃಷಿಗೆ ತರಬೇತಿಯೂ ಲಭ್ಯವಿದೆ. ನೀವು ಅಲೋವೆರಾದ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಬಯಸುವಿರಾದರೆ, ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನಲ್ ಅಂಡ್ ಆರೊಮ್ಯಾಟಿಕ್ ಪ್ಲಾಂಟ್ಸ್ (CIMAP) ಕೆಲವು ತಿಂಗಳುಗಳವರೆಗೆ ತರಬೇತಿಯನ್ನು ನಡೆಸುತ್ತದೆ,. ಇದರ ನೋಂದಣಿಯನ್ನು ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ ಮತ್ತು ನಿಗದಿತ ಶುಲ್ಕದ ನಂತರ ಈ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ.

ಮಾರುವುದೆಲ್ಲಿ :

ಇದನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಲು ಅವಕಾಶ ಕಡಿಮೆ, ಯಾವುದಾದರೂ ಕಂಪನಿಯೇ ತಗೆದುಕೊಳ್ಳಬೇಕು ಅಥವಾ ಮೇಲೆ ಹೇಳಿದ ಹಾಗೆ ನೀವೇ ಸಂಸ್ಕರಣೆ ಮಾಡಬೇಕು. ಔಷಧಿ ಅಥವಾ ಸೌಂದರ್ಯವರ್ಧಕ ಕಂಪನಿಗಳು ರೈತರ ಜೊತೆ ಅಗ್ರಿಮೆಂಟ್ ಮಾಡಿಕೊಂಡು ಅಲೊವೆರಾ ಬೆಳೆಸಿ ಕೊಳ್ಳುವುದುಂಟು. ಉದಾಹರಣೆಗೆ : ಪತಂಜಲಿ ಆಯುರ್ವೇದ ಮತ್ತು ಹರ್ಬಲ್ಸ್, ಹಿಮಾಲಯ ಕಾಸ್ಮೆಟಿಕ್ಸ್, ರೇವ್ಲಾನ್ ಇಂಡಿಯ, ಲ್ಯಾಕ್ಮೇ, ಬಯೋಟಿಕ್, ಲೋ ರಿಯಾಲ್, ಎಲ್ 18, ಆರೋಗ್ಯ ಹರ್ಬಲ್ಸ್, ಆಶ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್… ಮುಂತಾದವುಗಳು.

ಇಷ್ಟೂ ಕಂಪೆನಿಗಳ ವೆಬ್ಸೈಟ್ ಹುಡುಕಿದರೆ, ಓಪನ್ನಾಗಿ ಪತಂಜಲಿಯ ವೆಬ್ಸೈಟ್ ಮಾತ್ರ ಖರೀದಿಯ ಬಯಕೆಯನ್ನು ವ್ಯಕ್ತಪಡಿಸುತ್ತದೆ. ಅದರ ಲಿಂಕ್ ಇಲ್ಲಿ (https://patanjaliayurved.org/contract-herbal-farming.html) ಇದೆ, ಅಲ್ಲಿ ಫಾರ್ಮ್ ತುಂಬಿ ಅವರಿಗೆ ಕಳಿಸಿ ಅನುಮತಿ ಪಡೆದು ಬೆಳೆಯಬಹುದು, ಬರೀ ಅಲೊವೆರಾ ಮಾತ್ರವಲ್ಲ ಇತರ ಔಷಧೀಯ ಬೆಳೆಗಳಿಗೂ ಅವಕಾಶವಿದೆ, ಒಂದ್ಸಲ ವಿಚಾರಿಸಿ. ಹಾಗೆಯೇ ಕೆಳಗೆ ಇನ್ನೊಂದಿಷ್ಟು ವೆಬ್ಸೈಟ್ ಗಳ ಅಡ್ರೆಸ್ ಕೂಡ ಇವೆ, ಅಲ್ಲೂ ಕೂಡ ನೀವು ಸಂಪರ್ಕಿಸಬಹುದು (http://www.herbalsaarogya.com/reach.html) , (http://www.nucliuslife.com/supplier.html) ಇನ್ನೊಂದು ವೆಬ್ಸೈಟ್ ಇದೆ, ಅಗ್ರಿ ಬಜ್ ಎಂದು. ಅದರಲ್ಲಿ ನಿಮ್ಮ ಬೆಳೆಯ ಬಗ್ಗೆ ಮಾಹಿತಿ ನಮೂದಿಸಿದರೆ ಖರೀದಿದಾರರು ನಿಮ್ಮನ್ನು ಸಂಪರ್ಕಿಸುತ್ತಾರೆ. ಅದರ ಲಿಂಕ್ ಕೂಡ ಇಲ್ಲಿದೆ… http://www.agribuz.com

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!