spot_img
spot_img
spot_img
spot_img
spot_img

ಅಲ್ಲು ಅರ್ಜುನ್ ನಟನೆಯ ಪುಷ್ಪ-2 ರಿಲೀಸ್‌ʼಗೆ ಡೇಟ್‌ ಫಿಕ್ಸ್!

Published on

spot_img

ತೀ ನಿರೀಕ್ಷಿತ ಲ್ಲು ಅರ್ಜುನ್ ನಟನೆಯ ಪುಷ್ಪ-2 ಬಿಡುಗಡೆ ಕುರಿತಂತೆ ಮತ್ತೊಂದು ಸ್ಪಷ್ಟನೆ ಬಂದಿದೆ. ಅಲ್ಲಿಗೆ ನಿಗದಿತ ದಿನಾಂಕದಂದೆ ಸಿನಿಮಾ ರಿಲೀಸ್ (Released) ಆಗುವುದು ಫಿಕ್ಸ್ ಆಗಿದೆ. ನಿನ್ನೆಯಷ್ಟೇ ನಿರ್ಮಾಣ ಸಂಸ್ಥೆಯು ಪೋಸ್ಟರ್ ಹಂಚಿಕೊಂಡಿದ್ದು, ಪುಷ್ಪ 2 ಸಿನಿಮಾ ರಿಲೀಸ್  ಗೆ 200 ದಿನವಷ್ಟೇ ಬಾಕಿ ಎಂದು ಬರೆದಿದೆ. ಅಲ್ಲಿಗೆ ಇಂದಿಗೆ 199 ದಿನ ಬಾಕಿ ಉಳಿದಿದೆ. ಈ ಹಿಂದೆ ಸ್ವಾತಂತ್ರ್ಯ ದಿನದಂದು ಅಂದರೆ ಆಗಸ್ಟ್ 15ರಂದು ವಿಶ್ವಾದ್ಯಂತ ಚಿತ್ರ ತೆರೆಗೆ ಬರಲಿದೆ ಎಂದು ಸ್ಪೆಷಲ್ ಪೋಸ್ಟರ್ ಮೂಲಕ ಚಿತ್ರತಂಡ ರಿಲೀಸ್ ಡೇಟ್ ಘೋಷಿಸಿತ್ತು. ಫ್ಯಾನ್ಸ್ ಪುಷ್ಪ ಸೀಕ್ವೆಲ್ ನೋಡೋದಿಕ್ಕೆ ಎಕ್ಸೈಟ್ ಆಗಿದ್ದರು. ಇದೀಗ ರಿಲೀಸ್ ಡೇಟ್ ಮುಂದೆ ಹೋಗಿದೆ ಎಂದು ಸುದ್ದಿಯನ್ನು ಹರಿಬಿಡಲಾಗಿದೆ. ಅಂದು ಜ್ಯೂನಿಯರ್ ಎನ್.ಟಿ.ಆರ್ ನಟನೆಯ ದೇವರ ಸಿನಿಮಾ ಬರಲಿರುವ ಕಾರಣ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ ಅಂತ ಸುದ್ದಿ ಆಗಿತ್ತು.

ಇಂಥದ್ದೊಂದು ಸುದ್ದಿ ಆದ ಬೆನ್ನಲ್ಲೇ ಸಿನಿಮಾ ತಂಡದಿಂದ ಸ್ಪಷ್ಟನೆ ಬಂದಿದೆ. ಯಾವುದೇ ಕಾರಣಕ್ಕೂ ರಿಲೀಸ್ ಡೇಟ್ ಮುಂದಕ್ಕೆ ಹಾಕಲ್ಲ ಅಂದಿದ್ದಾರೆ ನಿರ್ದೇಶಕರು. ಘೋಷಣೆ ಮಾಡಿದ ದಿನದಂದೇ ಚಿತ್ರವನ್ನು ರಿಲೀಸ್ ಮಾಡುವುದಾಗಿ ಹೇಳಿದ್ದಾರೆ.

ಅಲ್ಲು ಅರ್ಜುನ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊರಬಿದ್ದಿದ್ದ ಪುಷ್ಪ-2 ಟೀಸರ್ ಝಲಕ್ ಹಲ್ ಚಲ್ ಎಬ್ಬಿಸಿತ್ತು. ಪುಷ್ಪ 2 ಟೀಸರ್ ಜೊತೆ ಹೊರಬಿದ್ದಿದ್ದ ಪುಷ್ಪರಾಜನ ಹೊಸ ಫೋಟೋವಂತೂ ಟಾಕ್ ಆಫ್ ದಿ ಟಾಲಿವುಡ್ ಆಗಿತ್ತು. ಸೀರೆ ಉಂಟು ಬಳೆ ತೊಟ್ಟು ಮೂಗುತಿ ಧರಿಸಿ ಕೈಯಲ್ಲಿ ಪಿಸ್ತೂಲ್ ಹಿಡಿದು ದರ್ಶನ ಕೊಟ್ಟಿದ್ದ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅವತಾರಕ್ಕೆ ಫ್ಯಾನ್ಸ್ ಉಘೇ ಉಘೇ ಎಂದಿದ್ದರು. ಶೂಟಿಂಗ್ ಹಂತದಲ್ಲಿರುವ ಪುಷ್ಪ ಸೀಕ್ವೆಲ್ ಕ್ರೇಜ್‌ಗೆ ಬಾಲಿವುಡ್ ಮಂದಿ ಥಂಡಾ ಹೊಡೆದಿದ್ದಾರೆ.

ನಿರ್ದೇಶಕ ಸುಕುಮಾರ್- ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತೊಮ್ಮೆ ಬಾಕ್ಸಾಫೀಸ್ ಬ್ಯಾಂಗ್ ಮಾಡೋದಿಕ್ಕೆ ಭರ್ಜರಿಯಾಗಿ ಸಜ್ಜಾಗ್ತಿದ್ದಾರೆ. ಪುಷ್ಪ ಮೂಲಕ ದಕ್ಷಿಣ ಧ್ರುವದಿಂದ ಉತ್ತರ ಧ್ರುವದವರೆಗೂ ಧಮಾಕ ಎಬ್ಬಿಸಿದ್ದ ಈ ಜೋಡಿ ಸೀಕ್ವೆಲ್ ಮೂಲಕ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಲು ಹೊರಟಿದೆ. ಪುಷ್ಪ 2 (Pushpa 2) ಸಣ್ಣ ಟೀಸರ್ ಹಂಗಾಮ ಕ್ರಿಯೇಟ್ ಮಾಡಿದೆ. ಕಾಣೆಯಾಗಿದ್ದ ಪುಷ್ಪ ಹೊಸ ಅವತಾರದಲ್ಲಿ ಪ್ರತ್ಯಕ್ಷನಾಗುವ ಮೂಲಕ ಇನ್ಮುಂದೆ ನನ್ನಂದೇ ರೂಲ್ ಎಂಬ ಸಂದೇಶ ರವಾನಿಸಿದ್ದಾನೆ.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ನಿಮಗೆ ಪಿತ್ರಾರ್ಜಿತ ಆಸ್ತಿ ಸಿಕ್ಕಾಗ ಮಾಡಲೇಬೇಕಾದ ಕೆಲಸ- ಇದು ಮಾಡಿದ್ರೆ 100 % ಸೇಫ್

ವಿವೇಕವಾರ್ತೆ : ನಮ್ಮ ದೇಶದಲ್ಲಿ ಆಸ್ತಿಯ ವಿಚಾರಕ್ಕೆ ಬಂದರೆ ಅಲ್ಲಿ ಭಿನ್ನ ಭಿನ್ನವಾದ ವಿಭಾಗಗಳು ಇರುತ್ತವೆ ಹಾಗೂ ಸಾಕಷ್ಟು...

ಅಪ್ಪಿಕೊಳ್ಳೋದ್ರಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಬೆನಿಫಿಟ್ – ಇಲ್ಲಿದೆ ಮಾಹಿತಿ!

ಪ್ರೀತಿ, ಸ್ನೇಹ, ಭರವಸೆ ಮತ್ತು ಬೆಂಬಲವನ್ನು ವ್ಯಕ್ತಪಡಿಸುವ ದೇಹ ಭಾಷೆಯೇ ಅಪ್ಪುಗೆ. ಬನ್ನಿ ಇಂದು ಅಪ್ಪುಗೆಯ ಆರೋಗ್ಯ ಪ್ರಯೋಜನಗಳೇನು ಎಂದು...

ಬೆಡ್ ರೂಂನಲ್ಲಿ ಅತ್ತಿಗೆಯ ಪ್ರಿಯಕರನನ್ನ ಹೊಡೆದು ಕೊಂದ ಮೈದುನ!

ವಿವೇಕವಾರ್ತೆ: ಪ್ರಿಯತಮೆಯ ಭೇಟಿ ಮಾಡಲು ಮನೆಗೆ ನುಗ್ಗಿದ ಪ್ರಿಯಕರನನ್ನು ಆಕೆಯ ಮೈದುನ ರಾಡ್ ನಿಂದ ಹೊಡೆದು ಬರ್ಬರವಾಗಿ ಕೊಲೆ...

ಮದ್ವೆಯಾದ 2 ವರ್ಷದಿಂದ ಸರಸಕ್ಕೆ ಒಪ್ಪದ ಗಂಡ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಪತ್ನಿ

ವಿವೇಕವಾರ್ತೆ : ದೈಹಿಕ ಸಂಬಂಧಕ್ಕೆ ಒಪ್ಪದ ಗಂಡನ ವಿರುದ್ಧ ಆಕ್ರೋಶಗೊಂಡಿರುವ ಮಹಿಳೆಯೊಬ್ಬಳು ಠಾಣೆಯ ಮೆಟ್ಟಿಲೇರಿ ಎಫ್​ಐಆರ್​ ದಾಖಲಿಸಿರುವ ವಿಚಿತ್ರ...
error: Content is protected !!